ಡಿ.ಕೆ.ಶಿವಕುಮಾರ್ ಅವರನ್ನು ನೊಡಲು ಭಾನುವಾರ ಪತ್ನಿ ಮತ್ತು ಮಗಳಿಗೆ ಅವಕಾಶ ಸಿಕ್ಕಿತ್ತು. ಹತ್ತು ದಿನಗಳ ಬಳಿಕ ಅಪ್ಪನನ್ನು ನೋಡಲು ಪುತ್ರಿ ಐಶ್ವರ್ಯ ಅಮ್ಮ ಉಷಾ ಜತೆಗೆ ದೆಹಲಿಯ ಇಡಿ ಕಚೇರಿಗೆ ಆಗಮಿಸಿದ್ದರು. ಪತ್ನಿ ಮತ್ತು ಮಗಳನ್ನು ನೋಡುತ್ತಿದ್ದಂತೆ ಡಿ ಕೆ ಶಿವಕುಮಾರ್ ದುಃಖದಲ್ಲಿದ್ರು. ಹಾಗು ಡಿಕೆಶಿ ಅವರ ಪತ್ನಿ ಮತ್ತು ಮಗಳು ಡಿಕೆ ಶಿವಕುಮಾರ್ ಅವರನ್ನು ನೊಡುತಿದ್ದಂತೆ ಕಣ್ಣೀರಿಟ್ಟರು .
ಸಂಜೆ 6 ಗಂಟೆ ಬಂದ ಉಷಾ, ಐಶ್ವರ್ಯ ರಾತ್ರಿ 7 :30 ನಿಮಿಷದವರೆಗೂ ಡಿಕೆಶಿ ಜತೆಗಿದ್ರು. ಈ ವೇಳೆ, ಸಂಸದ ಡಿ.ಕೆ.ಸುರೇಶ್ ಊಟ ತಂದಿದ್ರು. ಡಿಕೆ ಶಿವಕುಮಾರ್ ಗೆ ಇಡಿ ಕಚೇರಿಯಲ್ಲಿ ಊಟ ಮಾಡಿಸಿಯೇ ಪತ್ನಿ, ಮಗಳು ವಾಪಸ್ ತೆರಳಿದ್ರು.