ಹೊಸ ಸಂಚಾರಿ ನಿಯಮ ಜಾರಿಗೆ ಬಂದ ನಂತರ ದೇಶದಾದ್ಯಂತ ಪೊಲೀಸರ ಹಾವಳಿ ಹೆಚ್ಚಾಗಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ದಂಡ ಹಾಕಲು ಎಲ್ಲೆಂದರಲ್ಲಿ ಕಾಯುತ್ತಾ ನೀಡಿದ್ದಾರೆ. ಇನ್ನು ಈ ಹೊಸ ಸಂಚಾರ ನಿಯಮ ಬಂದ ನಂತರ ಸಾಮಾನ್ಯ ಜನರು ಮತ್ತು ಪೊಲೀಸರ ನಡುವೆ ಸಾಕಷ್ಟು ಜಗಳಗಳು ನಡೆಯುತ್ತಿವೆ.
ಉತ್ತರ ಪ್ರದೇಶದ ಸಿದ್ಧಾರ್ಥ ನಗರದಲ್ಲಿ ತಂದೆ ಮತ್ತು ಮಗ ಬೈಕ್ನಲ್ಲಿ ತೆರಳುವ ವೇಳೆ ಪೊಲೀಸರು ಅಡ್ಡಗಟ್ಟಿ ದಾಖಲೆಯನ್ನು ಕೇಳಿದ್ದಾರೆ. ಇನ್ನು ಸರಿಯಾದ ದಾಖಲೆಗಳು ಇಲ್ಲ ತದನಂತರ ಮನೆಯಿಂದ ತಂದು ಕೊಡುತ್ತೇನೆ ಎಂದು ಸವಾರ ಹೇಳಿದ್ದಾನೆ. ಇದಕ್ಕೆ ಬೈಕ್ ಕೀಯನ್ನು ಕೊಟ್ಟು ತೆರಳಬೇಕು ಎಂದು ಪೊಲೀಸರು ಆತನಿಗೆ ಹೇಳಿದ್ದಾರೆ. ಇದಕ್ಕೆ ನಿರಾಕರಿಸಿದ ಸವಾರರನ್ನು ಮಗನ ಎದುರೇ ನೆಲಕ್ಕೆ ಕೆಡವಿಕೊಂಡು ಪೊಲೀಸರು ಹೊಡೆದಿದ್ದಾರೆ. ಇನ್ನು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಪೊಲೀಸರ ನಡೆಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.