ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಚೆಲುವರಾಯಸ್ವಾಮಿ ಸಮುದಾಯದ ಹೋರಾಟಕ್ಕೆ ನೈತಿಕ ಬೆಂಬಲ ಕೊಡುವ ದೃಷ್ಟಿಯಿಂದ ನಾವೆಲ್ಲ ಭಾಗವಹಿಸಿದ್ದೆವು. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಶಿವಕುಮಾರ್ ಏನೇಲ್ಲಾ ಮಾಡಿದ್ದರು, ಎಷ್ಟು ಶ್ರಮ ಪಟ್ಟರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಹಳೆ ಮೈಸೂರು ಭಾಗದ ಜನ ಅವರಿಗೆ ಶಕ್ತಿ ಕೊಟ್ಟಿದ್ದಾರೆ.ಅವರು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಸಮುದಾಯದಲ್ಲಿದೆ. ಇನ್ನು ಮುಂದೆ ಸಮುದಾಯ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಹೇಳಿದರು. ಹೋರಾಟದಲ್ಲಿ ಭಾಗವಹಿಸಲು ನನಗೆ ಆಹ್ವಾನ ಇರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗಾದರೆ ನಮಗೆ ಆಹ್ವಾನವಿತ್ತೆ ಎಂದಿರುವ ಅವರು, ಅಷ್ಟಕ್ಕೂ ಆಹ್ವಾನಿಸಲು ಇದು ಬೀಗರೂಟವೇ ಎಂದು ಪ್ರಶ್ನಿಸಿದ್ದಾರೆ.