ನಿರ್ಮಲಾ ಸೀತಾರಾಮನ್, ರಫ್ತು ಹೆಚ್ಚಿಸಲು ರಫ್ತಿನ ಮೇಲೆ ವಿಧಿಸುವ ಸುಂಕವನ್ನು ಕಡಿಮೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ರಫ್ತಿಗೆ ಉತ್ತೇಜನ ನೀಡುವುದು ನಮ್ಮ ಗುರಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಹಳೆ ಆರ್ ಒ ಎಸ್ ಎಲ್ 2019 ರವರೆಗೆ ಮುಂದುವರಿಯಲಿದೆ.
ಎಂಇಐಎಸ್ ಜನವರಿ 1, 2019 ಕ್ಕೆ ಮುಗಿಯಲಿದೆ. ನಂತ್ರ Rodtep ಜಾರಿಗೆ ಬರಲಿದೆ. ಇದ್ರಿಂದ 50 ಸಾವಿರ ಕೋಟಿ ಲಾಭವಾಗಲಿದೆ. ಮನೆ ಖರೀದಿದಾರರು, ರಫ್ತು ಮತ್ತು ತೆರಿಗೆ ಸುಧಾರಣೆಗಳ ಬಗ್ಗೆ ನಿರ್ಮಲಾ ಸೀತಾರಾಮನ್ ಘೋಷಣೆಗಳನ್ನು ಮಾಡಿದ್ದಾರೆ. 45 ಲಕ್ಷ ರೂಪಾಯಿವರೆಗೆ ಮನೆ ಖರೀದಿಸುವಾಗ ತೆರಿಗೆ ವಿನಾಯಿತಿ ನೀಡುವ ನಿರ್ಧಾರದಿಂದ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಲಾಭವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.