ಮೈಸೂರಿನಲ್ಲಿ ಮಾತನಾಡಿರುವ ಸಚಿವ ಜಿ.ಟಿ. ದೇವೇಗೌಡ ಅವರು ನನ್ನನ್ನು ಬಿಜೆಪಿ ಜೊತೆ ಕುಮಾರಸ್ವಾಮಿಯವರೇ ಕಳುಹಿಸಿದ್ದಾರೆ. ಈಗ ದಸರಾ ಮಾಡಲು ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಅವರೇ ನನ್ನನ್ನು ಬಿಜೆಪಿಗೆ ಕಳುಹಿಸಿದ್ದರು ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಬಿಜೆಪಿ ಬೆಂಬಲಿಸಿದ್ದ ಕುರಿತು ಒಪ್ಪಿಕೊಂಡಿದ್ದಾರೆ.
ಆದರೆ ಕುಮಾರಸ್ವಾಮಿಯವರೊಂದಿಗೆ ಮುನಿಸಿಕೊಂಡಿರುವ ಜಿ.ಟಿ. ದೇವೇಗೌಡ, ಈ ಮಾತನ್ನು ವ್ಯಂಗ್ಯವಾಗಿ ಹೇಳಿದರೋ ಅಥವಾ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಲು ಸ್ವತಃ ಕುಮಾರಸ್ವಾಮಿಯವರೇ ಸೂಚನೆ ನೀಡಿದ್ದರೋ ಎಂಬ ಅಂಶ ಸ್ಪಷ್ಟವಾಗಿಲ್ಲ.