‘ಕರ್ವ’ ಡೈರೆಕ್ಟರ್​ ಜೊತೆ ಉಪ್ಪಿ ಹೊಸ ಸಿನಿಮಾ..!

Date:

ನವನೀತ್… ಸ್ಯಾಂಡಲ್​​ವುಡ್​​ನ ಯುವ ನಿರ್ದೇಶಕ. ಬಹುಶಃ ಇವರ ಪರಿಚಯ ಇಲ್ದೇ ಇರುವವರು ಬಹಳ ಕಮ್ಮಿ ಅನ್ಸುತ್ತೆ. ಚೊಚ್ಚಲ ಸಿನಿಮಾದಲ್ಲೇ ಸೈ ಎನಿಸಿಕೊಂಡ ನಿರ್ದೇಶಕ.
2016ರಲ್ಲಿ ತೆರೆಕಂಡ ಕರ್ವ ಸಿನಿಮಾವನ್ನು ನೀವೆಲ್ಲಾ ನೋಡಿದ್ದೀರಿ. ಆ ಸಸ್ಪನ್ಸ್, ಥ್ರಿಲ್ಲರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಇದೇ ನವನೀತ್ ಅವರು. ಅದು ನವನೀತ್​​ರವರ ಮೊದಲ ಸಿನಿಮಾ. ತಿಲಕ್ ಶೇಖರ್, ಆರ್​​.ಜೆ ರೋಹಿತ್ ಮೊದಲಾದವರು ನಟಿಸಿದ್ದ ಸಿನಿಮಾ ಒಳ್ಳೆಯ ಹೆಸರನ್ನು ಮಾಡಿತ್ತು. ನವನೀತ್ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ರು.
ಕರ್ವ ನಂತರ 2018ರಲ್ಲಿ ನವನೀತ್ ನಿರ್ದೇಶನದ ಬಕಾಸುರ ಸಿನಿಮಾ ಬಂತು.ಕ್ರೇಜಿಸ್ಟಾರ್ ರವಿಚಂದ್ರನ್, ಆರ್​.ಜೆ ರೋಹಿತ್, ಶಶಿಕುಮಾರ್, ರಘುಭಟ್ ಮೊದಲಾದ ತಾರಾಗಣವನ್ನು ಹೊಂದಿದ್ದ ಬಕಾಸರವೂ ತಕ್ಕಮಟ್ಟಿಗೆ ಹೆಸರು ಮಾಡಿತು. ಇದೀಗ ನವನೀತ್ ಮೂರನೇ ಸಿನಿಮಾದ ತಯಾರಿಯಲ್ಲಿದ್ದಾರೆ. ಈ ಬಾರಿ ಅವರು ಆ್ಯಕ್ಷನ್ ಕಟ್ ಹೇಳ್ತಿರೋದು ರಿಯಲ್ ಸ್ಟಾರ್ ಉಪೇಂದ್ರರವರಿಗೆ.
ಪ್ರೊಡ್ಯೂಸರ್ ತರುಣ್​ ಶಿವಪ್ಪ ಅವರೊಂದಿಗೆ ಸಿನಿಮಾ ಮಾಡಲು ಉಪ್ಪಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾಕ್ಕೆ ಡೈರೆಕ್ಟರ್ ಕರ್ವ ನವನೀತ್. ಉಪ್ಪಿ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಐ ಲವ್​ ಯು ಸಕ್ಸಸ್​ನಲ್ಲಿರುವ ಉಪ್ಪಿ ಐ ಲವ್​ಯು ಡೈರೆಕ್ಟರ್ ಆರ್.ಚಂದ್ರು ಅವರ ಜೊತೆ ಕಬ್ಜ ಅನ್ನುವ ಸಿನಿಮಾ ಮಾಡ್ತಿದ್ದಾರೆ. ಈ ನಡುವೆ ನವನೀತ್ ನಿರ್ದೇಶನದ ಸಿನಿಮಾಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.


ಉಪೇಂದ್ರರ ಮ್ಯಾನರಿಸಂಗೆ ತಕ್ಕಂತೆ ಬೇರೆಯದೇ ಜಾನರ್​ನಲ್ಲಿ ನವನೀತ್ ಸಿನಿಮಾ ಮಾಡಲಿದ್ದಾರೆ. ಯುವ ನಿರ್ದೇಶಕರಾದ ನವನೀತ್ ತಮ್ಮ ಸಿನಿಮಾಗಳಲ್ಲಿ ಹೊಸಬರಿಗೆ ಹೆಚ್ಚು ಹೆಚ್ಚು ಅವಕಾಶ ಕೊಡ್ತಾರೆ. ಅಂತೆಯೇ ಉಪ್ಪಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಸಿನಿಮಾದಲ್ಲೂ ಹೊಸಬರನ್ನು ಪರಿಚಯಿಸಿದರೆ ಅಚ್ಚರಿ ಇಲ್ಲ.
ಸೆಪ್ಟೆಂಬರ್​ 18ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ ಅಂದೇ ಸಿನಿಮಾ ಟೈಟಲ್ ರಿವೀಲ್ ಆಗಲಿದ್ದು, ಅದೇ ದಿನ ಫಸ್ಟ್​ ಲುಕ್ ಕೂಡ ರಿಲೀಸ್ ಆಗಲಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...