ಸಂಪುಟ ವಿಸ್ತರಣೆಯಾದ ಬಳಿಕ ಮೂವರು ಸಚಿವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ ಈ ನೇಮಕ ನಡೆದಿದೆ ಎಂದು ಹೇಳಲಾಗಿತ್ತು.
ಈ ಸ್ಥಾನಕ್ಕೆ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕಿದ್ದಕ್ಕೆ ಪಕ್ಷದ ವಲಯದಲ್ಲೇ ಅಚ್ಚರಿ ವ್ಯಕ್ತವಾಗಿತ್ತು. ಅದರಲ್ಲೂ ಈ ಮೊದಲೇ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಆರ್. ಅಶೋಕ್ ಅವರನ್ನು ಕಡೆಗಣಿಸಿ ಅಶ್ವತನಾರಾಯಣ ಅವರಿಗೆ ಪ್ರಾಶಸ್ತ್ಯ ನೀಡಿದ್ದು, ಸ್ವತಃ ಪಕ್ಷದ ನಾಯಕರಿಗೇ ದಂಗಾಗಿಸಿತ್ತು.ಇದಾದ ಬಳಿಕ ಆರ್. ಅಶೋಕ್ ಅಶ್ವತನಾರಾಯಣ ಅವರ ನಡುವೆ ಎಲ್ಲವೂ ಸರಿಯಿಲ್ಲವೆಂಬ ಮಾತುಗಳು ಕೇಳಿಬರುತ್ತಿದ್ದರ ನಡುವೆ ಇಬ್ಬರ ವರ್ತನೆಗಳು ಇದಕ್ಕೆ ಪೂರಕವೆಂಬಂತಿತ್ತು. ಈ ಇಬ್ಬರ ನಡುವೆ ರಾಜಿ ಸಂಧಾನ ನೆರವೇರಿಸಲು ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಯತ್ನ ನಡೆಸಿದ್ದರಾದರೂ ಅದು ಸಾಧ್ಯವಾಗಿರಲಿಲ್ಲವೆನ್ನಲಾಗಿದೆ.