ಚೂರಿ ಹಾಕ್ತಾರೆ ಅಂದ್ರು ಸುದೀಪ್, ತಂಟೆಗೆ ಬರ್ಬೇಡಿ ಅಂದ್ರು ದರ್ಶನ್, ಪೈಲ್ವಾನ್​​ ಜಗ್ಗೋನಲ್ಲ ಅಂದ್ರು ಸ್ವಪ್ನ..!

Date:

ಸ್ಯಾಂಡಲ್​ವುಡ್​ನಲ್ಲಿ ಸ್ಟಾರ್​​ವಾರ್ ಜೋರಾಗ್ತಿದೆಯಾ..? ಸಿನಿಮಾಗಳಲ್ಲಿ ನಟರು ಹೊಡೆಯುವ ಮಾಸ್ ಡೈಲಾಗ್ ಕೇಳಿ.. ಇದನ್ನು ಆ ನಟನಿಗೆ ಕೊಟ್ಟ ಟಾಂಗ್​, ಈ ನಟನಿಗೆ ಕೊಟ್ಟ ತಿರುಗೇಟು ಎಂದು ಕೆಲವರು ಹೇಳುತ್ತಿದ್ದರು. ಬೇರೆ ಬೇರೆ ವಿಡಿಯೋ ಕ್ಲಿಪ್​ಗಳನ್ನು ಕಟ್ ಮಾಡಿ… ಈ ಹೇಳಿಕೆಗೆ ಇದು ಟಾಂಗ್.. ಅದು ಟಾಂಗ್ ಎಂದು ಕಿತ್ತಾಟಕ್ಕೆ ಒಂದಿಷ್ಟು ಮಂದಿ ನಾಂದಿ ಹಾಡುತ್ತಿದ್ದರು. ಈಗ ನೇರ ನೇರಾ ಸೋಶಿಯಲ್ ಮೀಡಿಯಾ ಸ್ಟಾರ್ ನಟರೇ ಒಬ್ಬರಿಗೆ ಇನ್ನೊಬ್ಬರು ಟಾಂಗ್ ಕೊಟ್ಟು ಮಾತಾಡುತ್ತಿರುವುದು ಅನೇಕ ಚರ್ಚೆಗೆ ಕಾರಣವಾಗಿದೆ.
ಒಂದು ಯೂಟ್ಯೂಬ್ ಚಾನಲ್​ಗೆ ಇಂಟರ್​ ವ್ಯೂ ಕೊಟ್ಟಿರುವ ಸುದೀಪ್ ಚಿತ್ರರಂಗದಲ್ಲಿ ರಾಜಕೀಯ ಇದೆ. ಇಲ್ಲಿ ರಾಜಕೀಯದಲ್ಲಿರುವಂತೆ ಯಾವುದೇ ಪಕ್ಷಗಳಿಲ್ಲ. ಎಲ್ಲರೂ ಒಂದೇ ಪಕ್ಷ. ಸ್ನೇಹಿತರಂತೆ ಇರ್ತಾರೆ. ಆದರೆ, ಸಡನ್ ಆಗಿ ನಮ್ಮ ಬೆನ್ನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಏನಾಯ್ತು ಎಂದು ನೋಡಿದರೆ ರಕ್ತ ಸುರಿಯುತ್ತಿರುತ್ತದೆ..! ಯಾರು, ಯಾವಾಗ ಚುಚ್ಚಿದರು ಎಂದು ಗೊತ್ತೇ ಆಗಲ್ಲ ಎಂಬ ಹೇಳಿಕೆ ನೀಡಿದ್ದಾರೆ.
ಸುದೀಪ್ ಈ ರೀತಿ ನೀಡಿದ ಹೇಳಿಕೆ… ಪೈಲ್ವಾನ್ ಸಿನಿಮಾ ಪೈರಸಿ ವಿಚಾರ.. ಅದರ ಬಗ್ಗೆ ನೆಗಿಟೀವ್ ಮೆಸೇಜ್​ ಗಳನ್ನು ಬಿತ್ತರಿಸುತ್ತಿರುವ ವಿಚಾರವಾಗಿ ದರ್ಶನ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಜಟಾಪಟಿ ನಡೆಯುತ್ತಿದೆ. ಇದೆಲ್ಲದಕ್ಕೆ ಉತ್ತರ ಎಂಬಂತೆ ಚಾಲೆಂಜಿಂಗ್​ ಸ್ಟಾರ್ ದರ್ಶನ್, ”ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ, ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು – ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು/ಪ್ರಚೋದಿಸಲು ಬರದಿರಿ” ಎಂದು ಟ್ವೀಟ್ ಮಾಡಿದ್ದಾರೆ.
ದರ್ಶನ್ ಟ್ವೀಟ್​ಗೆ ಟಾಂಗ್ ಕೊಡುವಂತೆ ಟ್ವೀಟ್ ಮಾಡಿರುವ ನಿರ್ಮಾಪಕಿಯಾಗಿರುವ ಸ್ವಪ್ನ ಕೃಷ್ಣ, ”ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ….ಬೆದರಿಕೆಗೆ ಜಗ್ಗೊನಲ್ಲ ನಮ್ಮಪೈಲ್ವಾನ #ಪೈಲ್ವಾನ್ ನ ಕಾಲ್ ಏಳೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ” ಎಂದು ಟಾಂಗ್ ನೀಡುವಂತೆ ಟ್ವೀಟ್ ಮಾಡಿದ್ದಾರೆ.
ಈ ಎಲ್ಲಾ ಹೇಳಿಕೆ, ಟ್ವೀಟ್​ ಗಳು ವೈರಲ್ ಆಗುತ್ತಿರುವ ಬೆನ್ನಲ್ಲೇ ಸುದೀಪ್, ತ್ಯವೇ ಅಂತಿಮ. ಎಚ್ಚರಿಕೆ, ಬೆದರಿಕೆಗಳಿಂದ ಏನೂ ಆಗುವುದಿಲ್ಲ. ಯಾರೂ ಸಣ್ಣವರಾಗುವುದಿಲ್ಲ ಎಂದಿರುವ ಸುದೀಪ್ ಒಂದು ಪುಟದಷ್ಟು ಪತ್ರ ಬರೆದಿದ್ದಾರೆ.
ಈ ಎಲ್ಲಾ ಬೆಳವಣಿಗೆ ಸ್ಯಾಂಡಲ್​ ವುಡ್​ ನ ಸ್ಟಾರ್ ವಾರ್ ದೊಡ್ಡ ಮಟ್ಟಿಗೆ ಸದ್ದು ಮಾಡುವ ಲಕ್ಷಣಗಳಿವೆ. ಅಭಿಮಾನಿಗಳ ಹೆಸರಲ್ಲಿ ಕೆಲವು ಕಿಡಿಗೇಡುಗಳು ಹಚ್ಚಿಸುವ ಬೆಂಕಿಗೆ ಯಾರು ತುಪ್ಪ ಸುರಿಯದೆ.. ನೀರೆರೆಚಿದರೆ ಒಳಿತು.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...