ಸಂಚಾರಿ ನಿಯಮದ ಹೊಸ ಟ್ರಾಫಿಕ್ ದಂಡ ಜಾರಿಗೆ ಬಂದಾಗಿನಿಂದ ವಾಹನ ಸವಾರರು ಸಾವಿರಾರು ರೂಪಾಯಿಗಳನ್ನು ದಂಡದ ಮುಖಾಂತರ ಕಟ್ಟುತ್ತಿದ್ದಾರೆ. ಹೌದು ಈ ಹಿಂದೆ ಇದ್ದ ದರಕ್ಕಿಂತ ಹೆಚ್ಚುವರಿ ದಂಡವನ್ನು ದೇಶದಾದ್ಯಂತ ಜಾರಿ ಮಾಡಿದ ನಂತರ ದಂಡವನ್ನು ಕಟ್ಟಲು ಸಾಮಾನ್ಯ ಜನರು ಹರಸಾಹಸ ಪಡುತ್ತಿದ್ದಾರೆ. ಇನ್ನು ಈ ನಿಟ್ಟಿನಲ್ಲಿ ಗುಜರಾತ್ ರಾಜ್ಯ ಸರ್ಕಾರ ಜನರಿಗೆ ಕೊಂಚ ಅನುಕೂಲ ಆಗುವ ರೀತಿ ದಂಡ ಕಟ್ಟಲು ಹೆಚ್ಚುವರಿ ದಂಡದಲ್ಲಿ ಕಡಿತಗೊಳಿಸಲಾಗಿತ್ತು.
ಹೌದು ಗುಜರಾತ್ ಸರ್ಕಾರ ಹೆಚ್ಚುವರಿ ದಂಡದಲ್ಲಿ ಕಡಿತ ಉಂಟು ಮಾಡಿತ್ತು. ಇದೇ ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಸಹ ಹೆಚ್ಚುವರಿ ದಂಡದಲ್ಲಿ ಕಡಿತಗೊಳಿಸಲಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ. ನಾಳೆ ಸಂಜೆಯೊಳಗೆ ಈ ಒಂದು ಕಡಿತಗೊಳಿಸಿದ ಹೊಸ ದಂಡದ ವಿವರಣೆಯನ್ನು ನೀಡುವುದಾಗಿ ಲಕ್ಷ್ಮಣ್ ಸವದಿ ಅವರು ಇಂದು ತಿಳಿಸಿದ್ದಾರೆ.