ಕಲ್ಯಾಣ ಕರ್ನಾಟಕ ದಿನಾಚರಣೆ ಹಿನ್ನೆಲೆ ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಲಕ್ಷ್ಮಣ ಸವದಿ ಅವರು, ಬಳ್ಳಾರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಮಾರ್ಪಡಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು. ನನಗೆ ಎಲ್ಲ ಅವಕಾಶಗಳು ಅನಿರೀಕ್ಷಿತವಾಗಿ ಸಿಕ್ಕಿದೆ.
ನಾನು ಡಿಸಿಎಂ ಆಗಿದ್ದು, ರಾಜಕೀಯಕ್ಕೆ ಬಂದಿದ್ದು ಅನಿರೀಕ್ಷಿತ. ಪ್ರಧಾನಿ ಮೋದಿ, ಅಮಿತ್ ಶಾ ಗುಜರಾತ್‍ನಲ್ಲಿ ಸ್ಥಳೀಯರಿಗೆ ಸಚಿವ ಸ್ಥಾನ ನೀಡದೆ ಬೇರೆಯವರಿಗೆ ಅವಕಾಶ ನೀಡುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಿದ್ದರು. ಈಗ ಕರ್ನಾಟಕ ರಾಜ್ಯದಲ್ಲಿ ಸಹ ಇದೇ ಪ್ರಯೋಗ ಅನುಸರಿಸಿದ್ದಾರೆ. ಬಳ್ಳಾರಿ ಉಸ್ತುವಾರಿ ನನಗೆ ಸಿಕ್ಕಿದ್ದಕ್ಕೆ ಶ್ರೀರಾಮುಲುಗೂ ಸಂತಸ ತಂದಿದೆ. ರಾಮ ಲಕ್ಷ್ಮಣ ಸಹೋದರು, ಅದೇ ರೀತಿ ಅಣ್ಣ ಅಲ್ಲಿ ಹೋದರೆ ತಮ್ಮ ಇಲ್ಲಿಗೆ ಬಂದಿದ್ದಾನೆ ಎಂದರು