ಪೈಲ್ವಾನ್ ಸಿನಿಮಾ ಪೈರಸಿ ಯಾಗಿದೆ ಎಂದು ಸಪ್ನಾ ಕೃಷ್ಣ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರೂ ಇದರ ಬೆನ್ನಲ್ಲೇ ಪೊಲೀಸರು ಇದೀಗ ಪೊಲೀಸರು ಪೈರಸಿ ಮಾಡಿದ್ದ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾಗ ಆ ವ್ಯಕ್ತಿ ನಾನು ಡಿ ಬಾಸ್ ದರ್ಶನ್ ಅಭಿಮಾನಿ ತಾನು ಪೈಲ್ವಾನ್ ಸಿನಿಮಾವನ್ನು ಪೈರಸಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ .
ಹಾಗು ಯಾಕೆ ಹೀಗೆ ಮಾಡಿದ್ದು ಎಂದು ಪೋಲಿಸರು ಕೇಳಿದಾಗ ನಾನು ದರ್ಶನ್ ಅಭಿಮಾನಿ. ನಮಗೆ ಡಿ ಬಾಸ್ ಸಿನಿಮಾಗಳೆ ಗ್ರೇಟ್. ದರ್ಶನ್ ಮೇಲಿನ ಅಭಿಮಾನಕ್ಕಾಗಿ ‘ಪೈಲ್ವಾನ್’ ಸಿನಿಮಾವನ್ನು ಲೀಕ್ ಮಾಡಿದೆ. ನಾನು ದುಡ್ಡಿಗಾಗಿ ಈ ಕೆಲಸ ಮಾಡಿಲ್ಲ. ಎಂದು ರಾಕೇಶ್ ಪೊಲೀಸರ ಎದುರು ತಪ್ಪು ಒಪ್ಪಿಕೊಂಡಿದ್ದಾನೆ. ವಿಚಾರಣೆಯ ವೇಳೆ ರಾಕೇಶ್ ಅಸಲಿ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.