ಭಾರತದ ಸ್ಫೋಟಕ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಚುಟುಕು ಕ್ರಿಕೆಟ್ ಪಂದ್ಯದಲ್ಲಿ ಆರಂಭಿಕರಾಗಿ ಬಂದರೆ ಎದುರಾಳಿ ಬೌಲರ್ಗಳನ್ನು ಮನಬಂದಂತೆ ದಂಡಿಸುತ್ತಾರೆ. ಇನ್ನು ಈಗ ನಡೆಯುತ್ತಿರುವ ಸೌತ ಆಫ್ರಿಕಾ ಮತ್ತು ಭಾರತ ತಂಡಗಳ ನಡುವಿನ ಮೂರನೇ ಟಿ೨೦ ಪಂದ್ಯಕ್ಕೆ ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸುವ ವೇಳೆ ಶಿಖರ್ ಧವನ್ ಅವರ ವಿಚಿತ್ರ ವಿಡಿಯೋ ಒಂದು ಸೆರೆಯಾಗಿದೆ.
ಹೌದು ರೋಹಿತ್ ಶರ್ಮಾ ಅವರು ತಮ್ಮ ಮೊಬೈಲ್ ನಲ್ಲಿ ಶಿಖರ್ ಧವನ್ ಅವರ ಈ ವಿಚಿತ್ರ ವಿಡಿಯೋ ಒಂದನ್ನು ಸೆರೆ ಹಿಡಿದಿದ್ದು ನಿದ್ರೆ ಮಾಡುವ ವೇಳೆ ಶಿಖರ್ ಧವನ್ ಅವರು ಗುನುಗುವ ವಿಡಿಯೋವನ್ನು ರೋಹಿತ್ ಅವರು ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ರೋಹಿತ್ ಶರ್ಮಾ ಅವರು ಶಿಖರ್ ನನ್ನ ಜೊತೆ ಮಾತನಾಡುತ್ತಿಲ್ಲ ಬದಲಾಗಿ ತನ್ನ ಕನಸಿನ ಗೆಳೆಯನ ಜೊತೆ ನಿದ್ರೆಯಲ್ಲಿ ಮಾತನಾಡುತ್ತಿದ್ದಾನೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ವಿಡಿಯೋ ಸಖತ್ ವೈರಲ್ ಆಗಿದ್ದು ಶಿಖರ್ ಧವನ್ ಅವರು ಸಹ ಈ ವಿಡಿಯೋಗೆ ರಿಪ್ಲೈ ಮಾಡಿದ್ದು ಶಾಯರಿ ಅಭ್ಯಾಸ ನಡೆಸುತ್ತಿದ್ದೆ ಎಂದು ಕಾಮೆಂಟ್ ಹಾಕಿದ್ದಾರೆ.