ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದ ವಿಡಿಯೋ ಎಂದರೆ ಅದು ಟ್ರಾಫಿಕ್ ಪೇದೆಯೊಬ್ಬ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೊ. ನಿಯತ್ತಾಗಿ ಕರ್ತವ್ಯವನ್ನು ಮಾಡುವುದನ್ನು ಬಿಟ್ಟು ಕೋಪ ತಡೆದುಕೊಳ್ಳಲಾಗದೇ ಚಾಲಕನ ಮೇಲೆ ಕೈ ಮಾಡಿದ್ದ ಟ್ರಾಫಿಕ್ ಪೇದೆಯ ವಿಡಿಯೋವನ್ನು ಚಾಲಕ ಸುನೀಲ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ.
ತನಗೆ ನಿಜವಾದ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯ ಮೇಲೆ ವಿಡಿಯೋ ಮಾಡಿದ್ದ ಚಾಲಕ ಸುನೀಲ್ಗೆ ಆಗಿದ್ದು ಭಾರಿ ಹಿನ್ನಡೆ ಯಾಕೆಂದರೆ ಚಾಲಕ ಸುನೀಲ್ ವಿರುದ್ಧವೇ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಎಂಬ ಕಾರಣಕ್ಕೆ ಸುನೀಲ್ ವಿರುದ್ಧ ಪೊಲೀಸರಿಂದ ಎಫ್ಐಆರ್ ದಾಖಲಾಗಿದ್ದು ಹುಡುಕಾಟ ನಡೆಸುತ್ತಿದ್ದರೆ ಆತ ಹೆದರಿಕೊಂಡು ಮನೆಗೆ ಬಂದಿಲ್ಲ. ಹೌದು ಚಾಲಕ ಸುನೀಲ್ ಭಯಗೊಂಡು ಮನೆಗೆ ಬಾರದೆ ಎತ್ತಲೋ ಹೊರಟು ಹೋಗಿದ್ದಾನೆ. ಇನ್ನು ಮಗ ಮನೆಗೆ ಬಂದಿಲ್ಲ ಎಂಬ ಕಾರಣದಿಂದ ಆತಂಕಕ್ಕೆ ಒಳಗಾಗಿರುವ ತಾಯಿ ರತ್ನಮ್ಮ ಅವರಿಗೆ ಇತ್ತೀಚೆಗಷ್ಟೇ ರಾತ್ರಿ ಮನೆಗೆ ಬಂದ ದುಷ್ಕರ್ಮಿಗಳ ಗುಂಪೊಂದು ನಿನ್ನ ಮಗ ಎಲ್ಲಿ ಎಂದು ಅವಾಜ್ ಹಾಕಿದ್ದಾರೆ. ಅವನಿಗೆ ಕೈಕಾಲು ಮುರಿಯುತ್ತೇವೆ ಸುಮ್ಮನೆ ಬಿಡುವುದಿಲ್ಲ ಎಂದು ರತ್ನಮ್ಮ ಅವರಿಗೆ ಬೆದರಿಕೆಯನ್ನು ಹಾಕಿ ಹೋಗಿದ್ದಾರೆ. ಇತ್ತ ಮಗ ಮನೆಗೆ ಬರದೇ ನೊಂದಿದ್ದ ರತ್ನಮ್ಮ ಅವರಿಗೆ ಈ ಘಟನೆ ತುಂಬಾ ಭಯವನ್ನು ಉಂಟು ಮಾಡಿದ್ದು ಸ್ಥಳೀಯ ಪೊಲೀಸರಿಗೆ ಈ ಘಟನೆಯ ಕುರಿತಾಗಿ ದೂರು ನೀಡಿದ್ದಾರೆ.