ದಿವಂಗತ ನಟಿ ಶ್ರೀದೇವಿ ಅವರ ಪತಿ ಬೋನಿ ಕಪೂರ್ ಅವರ ಮೇಲೆ ಕಳೆದ ಐದು ತಿಂಗಳ ಹಿಂದೆ ನಡೆದ ಒಂದು ಘಟನೆ ಕೆಟ್ಟ ಪರಿಣಾಮವನ್ನು ಬೀರಿತ್ತು. ಮದುವೆ ಸಮಾರಂಭವೊಂದರಲ್ಲಿ ದರ್ಶನ್ ಅಭಿನಯದ ಐರಾವತ ಚಿತ್ರದ ನಟಿ ಊರ್ವಶಿ ರೌಟೆಲಾ ಅವರು ಮತ್ತು ಬೋನಿ ಕಪೂರ್ ಅವರು ಪರಸ್ಪರ ಅಪ್ಪುಗೆ ನೀಡಿ ಮಾತನಾಡಿದ್ದರು. ಇದೇ ವೇಳೆ ಬೋನಿ ಕಪೂರ್ ಅವರು ಊರ್ವಶಿ ರೌಟೇಲಾ ಅವರ ಹಿಂಭಾಗವನ್ನು ಮುಟ್ಟುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿತ್ತು.
ಈ ವಿಡಿಯೋ ಸಖತ್ ವೈರಲ್ ಆಗಿ ಬೋನಿ ಕಪೂರ್ ಅವರು ಬೇಕಂತಲೇ ಊರ್ವಶಿ ರೌಟೇಲಾ ಅವರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿತ್ತು. ಇನ್ನು ಈ ವಿಡಿಯೋ ವೈರಲ್ ಆಗಿ ಐದು ತಿಂಗಳ ಬಳಿಕ ಇದೀಗ ಮೌನ ಮುರಿದಿರುವ ಊರ್ವಶಿ ರೌಟೆಲಾ ಅವರು ಬೋನಿ ಕಪೂರ್ ಅವರು ಒಬ್ಬ ಜಂಟಲ್ ಮ್ಯಾನ್ ಬೇಕಂತ ಅವರು ಈ ರೀತಿ ಮಾಡಿಲ್ಲ ,
ಸಾಮಾನ್ಯವಾಗಿ ಇರುವ ಒಂದು ವಿಡಿಯೋವನ್ನು ಕೆಟ್ಟದಾಗಿ ಬಿಂಬಿಸುವ ಅಗತ್ಯವಿಲ್ಲ ಎಂದು ಹರಿದಾಡುತ್ತಿದ್ದ ಎಲ್ಲ ಊಹಾಪೋಹಗಳಿಗೂ ಊರ್ವಶಿ ಅವರು ಬ್ರೇಕ್ ಹಾಕಿದ್ದಾರೆ.