ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವ ಘಟನೆ ಇಂದು ನಡೆದಿದೆ. ಧ್ರುವ ಸರ್ಜಾ ಅಭಿನಯಿಸುತ್ತಿರುವ ಪೊಗರು ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ ನಡೆದಿತ್ತು. ಇನ್ನು ಇದೇ ಪೊಗರು ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಳ್ಳಾರಿಯಲ್ಲಿ ನಡೆಯುತ್ತಿದೆ.
ಇಂದು ಬಳ್ಳಾರಿಯಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿಗೆ ಬರುತ್ತಿದ್ದ ವೇಳೆಯಲ್ಲಿ ಧ್ರುವ ಸರ್ಜಾ ಅವರ ಕಾರಿನ ಅಡಿಗೆ ಅಭಿಮಾನಿಗಳು ಬಂದಿದ್ದಾರೆ. ಮಾತನಾಡಿಸಲು ಬಂದ ಅಭಿಮಾನಿಗಳ ಗುಂಪಿನಿಂದ ಮುಂದೆ ಹೋಗಲು ಕಾರನ್ನು ಡ್ರೈವರ್ ವೇಗವಾಗಿ ಚಲಾಯಿಸಿದ್ದಾನೆ ಆದರೆ ತದನಂತರ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಧ್ರುವ ಸರ್ಜಾ ಅವರಿಗೆ ತರಚಿದ ಗಾಯಗಳು ಆಗಿದ್ದು ಡ್ರೈವರ್ ಕ್ಕೆ ಕೊಂಚ ಪೆಟ್ಟಾಗಿದೆ.