ಹಿಂದೂಸ್ತಾನ್ ಎಂಬ ಹೆಸರಿರುವ ನಮ್ಮ ಭಾರತ ದೇಶವನ್ನು ಹಿಂದೂ ರಾಷ್ಟ್ರ ಎಂದರೆ ತಪ್ಪೇನು? ಹೀಗೆ ಹಿಂದೂ ರಾಷ್ಟ್ರ ಎಂದು ಹೇಳಿದ ಮಂಜುನಾಥ್ ಎಂಬ ಯುವಕನಿಗೆ ಸಾರ್ವಜನಿಕರ ಗುಂಪೊಂದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಂಗಳೂರಿನ ಫೋರಂ ಫೀಜಾ ಮಾಲ್ ನಲ್ಲಿ ನಡೆದಿದೆ. ಕಾಫಿ ಕುಡಿಯಲೆಂದು ಮಾಲ್ ಗೆ ತೆರಳಿದ್ದ ಮಂಜುನಾಥ್ ಸಮೀಪದಲ್ಲೇ ವಿದ್ಯಾರ್ಥಿಗಳ ಗುಂಪೊಂದು ಯುವತಿಯರನ್ನು ಚುಡಾಯಿಸುತ್ತಿದ್ದುದನ್ನು ಗಮನಿಸಿದ್ದಾರೆ.
ಹೀಗೆ ಈ ಘಟನೆಯನ್ನು ಗಮನಿಸಿದ ಮಂಜುನಾಥ್ ಆ ವಿದ್ಯಾರ್ಥಿಗಳಿಗೆ ಹೀಗೆಲ್ಲ ಮಾಡುವುದು ನಮ್ಮ ಸಂಸ್ಕೃತಿಯಲ್ಲ ಇದು ಹಿಂದೂ ರಾಷ್ಟ್ರ ಎಂದು ಬುದ್ಧಿ ಹೇಳಿದ್ದಾನೆ. ಇದರಿಂದ ಕೋಪಗೊಂಡ ಯುವಕರ ಗುಂಪು ಮಂಜುನಾಥ್ ನನ್ನು ಹಿಡಿದು ಸ್ಥಳದಲ್ಲಿಯೇ ಹಿಗ್ಗಾಮುಗ್ಗಾ ಹೊಡೆದು ನಂತರ ಈಗ ಹೇಳು ಎಂದು ಅವಾಜ್ ಹಾಕಿದೆ. ಈ ಘಟನೆಯನ್ನು ಕಿಡಿಗೇಡಿಗಳ ಗುಂಪಿನಲ್ಲಿ ಒಬ್ಬ ವಿಡಿಯೊ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾನೆ. ಇನ್ನು ವಿಡಿಯೊ ವೈರಲ್ ಆಗುತ್ತಿದ್ದಂತೆ ಮಂಜುನಾಥ್ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು ಈಗಾಗಲೇ ಪೊಲೀಸರು ಮೊಯ್ದಿನ್ ಸಫಾನ್, ಅಬ್ದುಲ್ ರಹೀಂ ಸಾದ್ ಮತ್ತು ಇನ್ನೋರ್ವ ಯುವಕನನ್ನು ಬಂಧಿಸಿದ್ದು ಇನ್ನಿತರ ತಲೆಮರೆಸಿಕೊಂಡ ಕಿಡಿಗೇಡಿಗಳನ್ನು ಹುಡುಕುವ ಯತ್ನದಲ್ಲಿದ್ದಾರೆ.