ರಾಜ್ಯದ ಜನರ ಆಶೀರ್ವಾದದಿಂದ ವಿಧಾನಸಭೆಗೆ 8 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಅದೃಷ್ಟವಿದ್ದರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಉಮೇಶ್ ಕತ್ತಿ ಇಂದಿಲ್ಲಿ ಹೇಳಿದ್ದಾರೆ. ಹಾಗು ನನಗೆ ರಾಜಕೀಯದಲ್ಲಿ ಸಾಕಷ್ಟು ಅನುಭವ ಇದೆ ಹಾಗಾಗಿ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂದರು .
ಜನರ ವಿಶ್ವಾಸ ಇರುವವರೆಗೂ ಸಾರ್ವಜನಿಕ ಜೀವನ ದಲ್ಲಿ ಮುಂದುವರೆಯುತ್ತೇನೆ. ಮುಖ್ಯ ಮಂತ್ರಿಯೂ ಆಗುತ್ತೇನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಒಂದು ವೇಳೆ ಸಿಎಂ ಆದರೆ ಈ ಭಾಗದ ನೀರಾವರಿ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುತ್ತೇನೆ. ನಾನು ಸಚಿವ ಸ್ಥಾನದಿಂದ ವಂಚಿತನಾಗಿದ್ದೇನೆ. ಕೇಂದ್ರ ಸರ್ಕಾರ ಇದನ್ನು ಗಮನಿಸಿ ಪರಿಗಣಿಸುತ್ತದೆ ಎಂಬ ವಿಶ್ವಾಸವಿದೆ ಎಂದರು .