ವಿಶ್ವವಿಖ್ಯಾತ ಮೈಸೂರು ದಸರಾ ಇನ್ನೇನು ಎರಡು ದಿನಗಳಲ್ಲಿ ಆರಂಭವಾಗಲಿದೆ. ಇನ್ನು ಕರ್ನಾಟಕ ರಾಜ್ಯವೇ ಮೈಸೂರು ದಸರಾ ಆರಂಭವಾಗಲಿದೆ ಎನ್ನುವ ಖುಷಿಯಲ್ಲಿ ಇದ್ದರೆ ಮೈಸೂರಿನ ನಗರದ ಒಳಗಡೆಯೇ ದಸರಾ ಕುರಿತಾಗಿ ಅಪಸ್ವರ ವೊಂದು ಕೇಳಿಬಂದಿದೆ. ಹೌದು ಅಶೋಕಪುರಂನ ಪಾರ್ಕ್ ನಲ್ಲಿ ಮಹಿಷಾ ದಸರಾವನ್ನು ಆಚರಣೆ ಮಾಡಿದ ಜನರು ಅಂಬೇಡ್ಕರ್ ಮತ್ತು ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಆಚರಣೆ ನಡೆಸಿದರು.
ಇನ್ನು ಇದೇ ವೇಳೆ ಪ್ರೊಫೆಸರ್ ಮಹೇಶ್ ಚಂದ್ರ ಗುರು ಅವರು ಮಹಿಷಾ ದಸರಾ ಕುರಿತು ಮಾತನಾಡಿ ಪ್ರತಾಪ್ ಸಿಂಹ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಾಮುಂಡಿ ಬೆಟ್ಟದಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಬೇಕಂತಲೇ ಮಹಿಷ ದಸರಾ ವೇದಿಕೆಯನ್ನು ತೆರವುಗೊಳಿಸಿದ್ದಾರೆ ಯಾರೂ ಸಹ ಮಹಿಷ ದಸರಾ ಆಚರಣೆ ಮಾಡಬಾರದು ಎಂಬ ನಿಟ್ಟಿನಿಂದ ಈ ರೀತಿಯಾಗಿ ನಡೆದುಕೊಂಡಿದ್ದಾರೆ “ಪ್ರತಾಪ್ ಸಿಂಹ ಅವರ ಅಪ್ಪಂದಲ್ಲ ಈ ಪ್ರಜಾಪ್ರಭುತ್ವ , ಪ್ರತಾಪ್ ಸಿಂಹ ಅವರ ಅವ್ವನಂದಲ್ಲ ಈ ಮಹಿಷಾ ಸಂಸ್ಕೃತಿ” ಎಂದು ವಾಗ್ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪ್ರತಾಪ್ ಸಿಂಹ ಅವರ ಭಾವಚಿತ್ರಕ್ಕೆ ಚಪ್ಪಲಿ ಇಂದ ಹೊಡೆದು ಅವರ & ಬಿಜೆಪಿ ವಿರುದ್ಧ ಘೋಷಣೆಯನ್ನು ಪ್ರಗತಿಪರರು ಕೂಗಿದರು.