ಮೇಯರ್ ಅಭ್ಯರ್ಥಿ ಆಯ್ಕೆಗೆ ರಚಿಸಲಾಗಿದ್ದ ಶಾಸಕ ರಘು ನೇತೃತ್ವದ ಸಮಿತಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಏಕಾಏಕಿ ರದ್ದು ಮಾಡಿದ್ದಾರೆ.
ಕಟೀಲ್ ಅವರ ಈ ನಿರ್ಧಾರದ ಹಿಂದೆ ಆರ್‍ಎಸ್‍ಎಸ್‍ನ ಸಂತೋಷ್ ಜಿ ಕೈವಾಡವಿರುವುದು ಸಾಬೀತಾಗಿದೆ. ಒಂದು ವೇಳೆ ತಾವು ಸೂಚಿಸುವವರನ್ನು ಮೇಯರ್ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡದಿದ್ದರೆ ಸಂತೋಷ್ ಜಿ ಅವರು ಬೆಂಬಲಿಸುವ 25ಕ್ಕೂ ಹೆಚ್ಚು ಬಿಜೆಪಿ ಸದಸ್ಯರು ಮೇಯರ್ ಚುನಾವಣೆಯನ್ನು ಬಹಿಷ್ಕರಿಸುವ ಸಾಧ್ಯತೆ ಇದೆ.ಕಳೆದ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ಇದ್ದವು. ಆದರೆ ಇದೀಗ ಮೇಯರ್ ಕುರ್ಚಿಗಾಗಿ ಬಿಜೆಪಿಯಲ್ಲಿ ಉಂಟಾಗಿರುವ ಆಂತರಿಕ ಕಲಹವನ್ನು ಬಂಡವಾಳ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದಾರೆ