ಬಿಗ್ ಬಾಸ್, ಬಿಗ್ ಬಾಸ್, ಬಿಗ್ ಬಾಸ್…ಸದ್ಯ ಎಲ್ಲಿ ಕೇಳಿದ್ರೂ ಬಿಗ್ ಬಾಸ್ ನದ್ದೇ ಸದ್ದು…ಸೌಂಡು…ಕನ್ನಡ ಬಿಗ್ ಬಾಸ್ ಸೀಸನ್ 7 ಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 13ರಿಂದ ಬಿಗ್ ಬಾಸ್ ಆರಂಭ..!
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಈ ರಿಯಾಲಿಟಿ ಶೋ ಸಿಕ್ಕಾಪಟ್ಟೆ ಜನಪ್ರಿಯ. ಜೀವನದಲ್ಲಿ ಒಮ್ಮೆಯಾದ್ರು ಬಿಗ್ ಬಾಸ್ ಗೆ ಹೋಗ್ಬೇಕು ಅನ್ನೋದು ಬಹುತೇಕರ ಕನಸು..ಜೀವನದ ಪರಮ ಗುರಿಯೇ ಎಂದರೂ ತಪ್ಪಾಗಲಿಕ್ಕಿಲ್ಲ…ಆದರೆ, ಬಿಗ್ ಬಾಸ್ ಗೆ ಎಂಟ್ರಿ ಕೊಡಲು ಸಹಜವಾಗಿ ಕೆಲವೊಂದು ಮಾನದಂಡ, ಅರ್ಹತೆ ಪರಿಗಣನೆ ಆಗುತ್ತದೆ ಎನ್ನುವುದೂ ಕೂಡ ಅಷ್ಟೇ ಸತ್ಯ…
ಅವೆಲ್ಲಾ ಬಿಟ್ಟಾಕಿ…ನೇರಾ ನೇರವಾಗಿ ವಿಷಯಕ್ಕೆ ಬಂದು ಬಿಡೋಣ. ಬಿಗ್ ಬಾಸ್ ಮನೆಗೆ ಯಾವೆಲ್ಲಾ ತಾರೆಯರ ಎಂಟ್ರಿ ಆಗಲಿದೆ ಎನ್ನುವ ಲೆಕ್ಕಾಚಾರ ಜೋರಾಗಿದೆ. ಎಲ್ಲೆಲ್ಲೂ ಅದರದ್ದೇ ಮಾತಾಗಿ ಬಿಟ್ಟಿದೆ…ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬ ಅಂತೆ ಕಂತೆ ಸುದ್ದಿಗಳಿಗೇನು ಬರವಿಲ್ಲ….
ಅವೆಲ್ಲದರ ಆಚೆ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಸಿಕ್ಕಿದೆ..! ಇದು ಸತ್ಯಕ್ಕೆ ಬಹಳ ಹತ್ತಿರ…ಹತ್ತಿರ…ಹತ್ತಿರ..
ನಿಮ್ಗೆ ಗೊತ್ತೇ ಇದೆ..ಕನ್ನಡದ ಹೆಸರಾಂತ ನಿರೂಪಕ ಚಂದನ್ ಶರ್ಮಾ…ಪವರ್ ಟಿವಿಯ ಎಕ್ಸಿಕ್ಯೂಟಿವ್ ಎಡಿಟರ್..ಅತೀ ಚಿಕ್ಕ ವಯಸ್ಸಲ್ಲಿ ಸುದ್ದಿವಾಹಿನಿಯ ಸಾರಥ್ಯವಹಿಸಿರುವ ಸ್ಟಾರ್ ನಿರೂಪಕ. ಕಳೆದ ಕೆಲವು ಸೀಸನ್ ಗಳಿಂದಲೇ ಇವರು ಬಿಗ್ ಬಾಸ್ ಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.ಆದರೆ ಚಂದನ್ ಸದ್ಯಕ್ಕೆ ಬಿಗ್ ಬಾಸ್ ಸಹವಾಸ ಬೇಡವೇ ಬೇಡ ಎಂಬ ನಿರ್ಧಾರದಲ್ಲಿದ್ದರು. ಆದರೆ, ಬಿಗ್ ಬಾಸ್ ನಿಂದ ಈ ಬಾರಿಯೂ ಚಂದನ್ ಶರ್ಮಾ ರವರಿಗೆ ಕರೆ ಬಂದಿದೆ. ನಿರೂಪಕನಾಗಿ ಟಿವಿ ಪರದೆಯಲ್ಲಿ ಮಿಂಚಿರುವ, ನಟರಾಗಿಯೂ ಅದೃಷ್ಟ ಪರೀಕ್ಷೆ ಎದುರಿಸಿರುವ ಚಂದನ್ ಶರ್ಮಾ..ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವುದು ಬಹುತೇಕ ಖಚಿತ..! ಆದರೆ, ಪವರ್ ಟಿವಿಯ ನೇತೃತ್ವವಹಿಸಿರುವ ಚಂದನ್ ಶರ್ಮಾ…ಚಾನಲ್ ಕಟ್ಟಿ ಬೆಳೆಸುವ ಉದ್ದೇಶದಿಂದ ಬಿಗ್ ಬಾಸ್ ಗೆ ಹೋಗುವುದರಿಂದ ಹಿಂದೆ ಸರಿದರೂ ಸರಿಯಬಹುದೆಂದು ಹೇಳಲಾಗುತ್ತಿದೆ.
ಚಂದನ್ ಶರ್ಮಾ ಅವರನ್ನು ಹೊರತುಪಡಿಸಿದರೆ ನಟ ಕುರಿ ಪ್ರತಾಪ್, ಕಾಮಿಡಿ ಕಿಲಾಡಿ ಶಿವರಾಜ್ ಕೆ.ಆರ್ ಪೇಟೆ, ಸರಿಗಮಪ ಖ್ಯಾತಿಯ ಹನುಮಂತ, ನಟಿ ಶ್ವೇತಾ ಪ್ರಸಾದ್ ಮತ್ತು ಶರ್ಮಿತಾ ಮಂಡ್ರೆ ಹೆಸರು ಕೂಡ ಈ ಬಾರಿ ಬಿಗ್ ಬಾಸ್ ಗೆ ಹೋಗುವವರ ಪಟ್ಟಿಯಲ್ಲಿದೆ.