ಸಾರ್ವಜನಿಕರು ದುಬಾರಿ ಹಣದಿಂದ ಖರೀದಿಸುವ ಮೊಬೈಲ್‍ಗಳನ್ನು ತಾವೇ ಜೋಪಾನ ಮಾಡಿಕೊಳ್ಳುವುದರ ಮೂಲಕ ಮೊಬೈಲ್ ಕಳ್ಳತನ ಪ್ರಕರಣಗಳನ್ನು ಸಾಧ್ಯವಾದಷ್ಟು ತಪ್ಪಿಸಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕಿವಿಮಾತು ಹೇಳಿದರು.
ಕೇಂದ್ರ ವಿಭಾಗದ ಪೊಲೀಸರು ಪತ್ತೆಹಚ್ಚಿರುವ ಮೊಬೈಲ್ ಕಳವು-ಸುಲಿಗೆ ಜಾಲದ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ನಗರದಲ್ಲಿ ಪ್ರತಿನಿತ್ಯ ಮೊಬೈಲ್ ಸುಲಿಗೆ ಹಾಗೂ ಕಳ್ಳತನದ ದೂರುಗಳು ದಾಖಲಾಗುತ್ತಿವೆ. ತಮ್ಮ, ತಮ್ಮ ಮೊಬೈಲ್‍ಗಳ ಬಗ್ಗೆ ತಾವೇ ಜಾಗೃತರಾಗುವುದು ಅತಿಮುಖ್ಯ ಎಂದರು