ರೈಲ್ವೆ ನಿಲ್ದಾಣಗಳಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕಿ ರಾನು ಮೊಂಡಲ್ ಅವರನ್ನು ಬಾಲಿವುಡ್ ಸಂಗೀತ ನಿರ್ದೇಶಕರೊಬ್ಬರು ಗುರುತಿಸಿ ಅವರನ್ನು ಕರೆದುಕೊಂಡು ಹೋಗಿ ರಾಮು ಮಂಡಲ್ ಅವರ ಅದ್ಭುತ ಕಂಠದಿಂದ ಹಾಡನ್ನು ಹಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಳಿಸಿದ್ದರು. ರಾನು ಮೊಂಡಲ್ ಅವರ ಅದ್ಭುತ ಧ್ವನಿಗೆ ಇಡೀ ದೇಶವೇ ಮರುಳಾಲಾಯಿತು. ಇನ್ನು ದೇಶದಾದ್ಯಂತ ಅಪಾರವಾದ ಖ್ಯಾತಿಯನ್ನು ಪಡೆದ ನಂತರ ರಾನು ಮೊಂಡಲ್ ಅವರನ್ನು ಈ ಬಾರಿಯ ದಸರಾದ ಪ್ರಮುಖ ಕಾರ್ಯಕ್ರಮವಾದ ಯುವ ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.
.ಆದರೆ ಪ್ರಚಾರವೆಲ್ಲ ಆದ ನಂತರ ಇದೀಗ ರಾನು ಮೊಂಡಲ್ ಅವರು ಯುವದಸರಾದ ಸಂಗೀತ ಕಾರ್ಯಕ್ರಮಕ್ಕೆ ಹಾಡಲು ಬರುವುದಿಲ್ಲ ಎಂದು ವಿಡಿಯೋ ಮುಖಾಂತರ ತಿಳಿಸಿದ್ದಾರೆ. ಹೌದು ಅನಾರೋಗ್ಯದಿಂದ ಬಳಲುತ್ತಿರುವ ರಾನು ಮೊಂಡಲ್ ಅವರು ಯುವದಸರಾದ ಸಂಗೀತ ಕಾರ್ಯಕ್ರಮಕ್ಕೆ ಬರಲು ಆಗುತ್ತಿಲ್ಲ ಹೀಗಾಗಿ ನನ್ನನ್ನು ಕ್ಷಮಿಸಿ ಎಂದು ವಿಡಿಯೊ ಮಾಡುವ ಮುಖಾಂತರ ಮೈಸೂರು ಜನತೆಗೆ ಕ್ಷಮಾಪಣೆಯನ್ನು ಕೇಳಿದ್ದಾರೆ.