ಯುವ ದಸರಾ ಸಂಗೀತ ಕಾರ್ಯಕ್ರಮಕ್ಕೆ ಕನ್ನಡದ ಸಿಂಗರ್ ಚಂದನ್ ಶೆಟ್ಟಿ ಅವರನ್ನು ಪರ್ಫಾಮೆನ್ಸ್ ನೀಡಲೆಂದು ಕರೆಸಲಾಗಿತ್ತು. ಇದೇ ವೇಳೆ ನಿವೇದಿತಾ ಗೌಡ ಅವರು ಸಹ ಚಂದನ್ ಶೆಟ್ಟಿ ಅವರ ಜೊತೆಗೆ ಆಗಮಿಸಿ ಒಂದೇ ವೇದಿಕೆಯ ಮೇಲೆ ಜನರನ್ನು ಹಾಡಿ ನಲಿಸಿದರು ಚಂದನ್ ಶೆಟ್ಟಿ. ಇನ್ನು ಕಾರ್ಯಕ್ರಮವೆಲ್ಲಾ ಮುಗಿದ ನಂತರ ವೇದಿಕೆಯ ಮೇಲೆಯೇ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಲವ್ ಪ್ರಪೋಸ್ ಮಾಡಿ ಎಲ್ಲರಿಗೂ ಶಾಕ್ ನೀಡಿದರು.
ಇನ್ನು ಚೆನ್ನಶೆಟ್ಟಿ ಅವರು ಲವ್ ಪ್ರಪೋಸ್ ಮಾಡಿದ್ದನ್ನು ಹಲವಾರು ಮಂದಿ ಖಂಡಿಸುತ್ತಿದ್ದರೆ ಕೆಲವೊಂದಿಷ್ಟು ಜನ ಅವರ ಪರ ಮಾತನಾಡುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಹ ಒಳ್ಳೆಯ ಜಾಗದಲ್ಲಿ ಲವ್ ಪ್ರಪೋಸ್ ಮಾಡಿದ್ದು ತಪ್ಪು ಎಂದು ಹಲವಾರು ಮಂದಿ ವಾದ ಮಾಡುತ್ತಿದ್ದರೆ ಇನ್ನೂ ಕೆಲವು ಕಡೆ ಇವರಿಬ್ಬರ ನಡುವೆ ನಿಶ್ಚಿತಾರ್ಥ ನಡೆಯಿತು ಎಂಬ ಸುದ್ದಿಗಳು ಹರಿದಾಡುತ್ತಿವೆ. ಇನ್ನು ಈ ಸುದ್ದಿ ಬಗ್ಗೆ ಚಂದನ್ ಶೆಟ್ಟಿ ಅವರು ಪ್ರತಿಕ್ರಿಯೆ ನೀಡಿದ್ದು ಎಂಗೇಜ್ಮೆಂಟ್ ನಡೆದಿಲ್ಲ ಅದೆಲ್ಲ ಸುಳ್ಳು ಫೇಕ್ ನ್ಯೂಸ್ , ನಾನು ನಿವೇದಿತಾಗೆ ಪ್ರಪೋಸ್ ಮಾಡಿದ್ದು ಮಾತ್ರ ನಿಜ ಎಂದು ಹೇಳಿದ್ದಾರೆ. ರಥೋತ್ಸವ ಮಾಡಿದ್ದನ್ನು ನಿಶ್ಚಿತಾರ್ಥ ನಡೆಯಿತು ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅದನ್ನು ನಂಬಬೇಡಿ ಇನ್ನೂ ಮನೆಯವರಿಗೆ ತಿಳಿಸಿ ಮುಂದಿನ ಕಾರ್ಯ ನೋಡಲಿದ್ದೇವೆ ಎಂದು ಹೇಳಿದ್ದಾರೆ.