ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ.! ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆ..!

Date:

ಮಾಜಿ ಸಿ.ಎಂ ಯಡಿಯೂರಪ್ಪರವರಿಗೆ ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಳ್ಳುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ.

ಕಹಿಯುಂಡ ನಾಯಕನಿಗೆ ಯುಗಾದಿ ಸಿಹಿ

ಯುಗಾದಿ ಹಬ್ಬಕ್ಕೆ ಬಿ ಎಸ್ ಯಡಿಯೂರಪ್ಪಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ರಾಜ್ಯ ಬಿಜೆಪಿ ಸಾರಥ್ಯ ಬಿ ಎಸ್ ವೈ ಹೆಗಲೇರಿದೆ. ಹೌದು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಬಿ ಎಸ್ ವೈ ಆಯ್ಕೆಯಾಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜವಾಬ್ದಾರಿಯನ್ನು ಬಿ ಎಸ್ ವೈ ಗೆ ನೀಡಿದ್ದಾರೆ.

ಮಾ. 24ಕ್ಕೆ ರಾಜ್ಯಾಧ್ಯಕ್ಷರಾಗಿ ಮೂರು ವರ್ಷ ಪೂರೈಸಿರುವ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ  ಪ್ರಹ್ಲಾದ್  ಜೋಶಿ ಅವರ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಕೂರಿಸಬೇಕೆಂಬುದು ಈ ಮೊದಲೇ ನಿರ್ಧಾರವಾಗಿತ್ತು. ಇದಕ್ಕೆ ಪೂರಕವಾಗಿ ರಾಷ್ಟ್ರೀಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿ ಎಸ್‌ ವೈ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರುವ ಉತ್ಸಾಹ ತೋರಿದ್ರು. ಅಧ್ಯಕ್ಷ  ಪಟ್ಟ ನೀಡಿದ್ದೇ  ಆದಲ್ಲಿ  ಪಕ್ಷವನ್ನು ಅಧಿಕಾರಕ್ಕೆ ತರುವುದಾಗಿ ಸ್ವತಃ ಬಿ ಎಸ್ ವೈ ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿ ಕೊಟ್ಟಿದ್ರು.
ಇದೀಗ ರಾಜ್ಯ ಬಿಜೆಪಿ ಸಾರಥ್ಯವನ್ನು ಬಿಎಸ್‌ವೈ ಹೆಗಲಿಗೇರಿಸಿ, 2018ರ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಹೊಣೆಗಾರಿಕೆಯು ಬಿ ಎಸ್ ವೈ ಮೇಲಿದೆ. ಕರ್ನಾಟಕದಲ್ಲಿ ಬಿ ಜೆ ಪಿ ಯನ್ನು ತಳಮಟ್ಟದಿಂದ ಬಲಪಡಿಸಿ ಅಧಿಕಾರಕ್ಕೇ ತಂದವರು ಬಿ ಎಸ್ ವೈ. ಜೆ ಡಿ ಎಸ್ ಜೊತೆ 20 – 20 ಸಮ್ಮಿಶ್ರ ಸರ್ಕಾರ ನಡೆಸಿ ಮುಖಭಂಗ ಕೂಡ ಅನುಭವಿಸಿದ್ರು. ಆದ್ರು ಛಲ ಬಿಡದ ಬಿ ಎಸ್ ವೈ ಪಕ್ಷವನ್ನು ಏಕಾಂಗಿಯಾಗಿ ಗದ್ದುಗೆ ಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಎರಡನೇ ಬಾರಿ ಸಿ ಎಂ ಆಗಿ ಮೂರು ವರ್ಷಗಳ ಕಾಲ ಆಡಳಿತ ನಡೆಸಿದ ಬಿ ಎಸ್ ವೈ ಹಲವಾರು ಜನಪ್ರಿಯ ಯೋಜನೆಗಳಿಂದ ಜನಮನಗೆದ್ದರು. ಆದರೆ ಒಡನಾಡಿಗಳ ಪಿತೂರಿ ಹಾಗೂ ಡಿ ನೋಟಿಫಿಕೇಶನ್ ಪ್ರಕರಣ ಬಿ ಎಸ್ ವೈ ಕೊರಳಿಗೆ ಉರುಳಾಗಿ ಪರಿಣಮಿಸಿತ್ತು. ಬಳಿಕ ಸಿ ಎಂ ಸ್ಥಾನದಿಂದ ಕೆಳಗಿಳಿದ ಬಿ ಎಸ್ ವೈ ಜೈಲು ಕಂಬಿ ಕೂಡ ಎಣಿಸುವಂತ ಪರಿಸ್ಥಿತಿ ಎದುರಾಯ್ತು.

ಪಕ್ಷದೊಳಗಿನ  ಆಂತರಿಕ ಬಿಕ್ಕಟ್ಟಿನಿಂದ ಬಿ ಎಸ್ ವೈ  ಮಾನಸಿಕವಾಗಿ ಜರ್ಜರಿತ ಗೊಂಡಿದ್ರು. ಅಲ್ಲದೇ 40 ವರ್ಷಗಳಿಂದ ತಾನೇ ಕಟ್ಟಿ ಬೆಳೆಸಿದ ಪಕ್ಷದಿಂದಲೂ ಹೊರನಡೆದ್ರು . ಬಿಜೆಪಿ ಗೆ ಪರ್ಯಾಯವಾಗಿ ಕೆಜೆಪಿ ಪಕ್ಷವನ್ನು ಸ್ಥಾಪಿಸಿದ್ರು . 2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಾನು ಎಷ್ಟು ಅನಿವಾರ್ಯ ಅನ್ನೋದನ್ನು ತೋರಿಸಿಕೊಟ್ರು. ಅಧಿಕಾರದಲ್ಲಿದ್ದ ಬಿಜೆಪಿ ವಿರೋಧಪಕ್ಷದಲ್ಲಿ ಕೂರುವಂತೆ ಮಾಡಿದ್ದು ಕೂಡ ಬಿ ಎಸ್ ವೈ ನ ಸೇಡಿನ ರಾಜಕಾರಣ.

2014 ರಲ್ಲಿ ರಾಷ್ಟ್ರರಾಜಕಾರಣದಲ್ಲಿ ಮೋದಿ ಅಲೆ ಜೋರಾಗಿ ಸುನಾಮಿ ಸ್ವರೂಪವನ್ನುಪಡೆದುಕೊಂಡಿತ್ತು. ಆಗ ಬಿ ಎಸ್ ವೈ ಕೂಡ ಮನಸ್ಸು ಬದಲಾಯಿಸಿದ್ರು. ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅನ್ನೋ ಒಂದೇ ಒಂದು ಕಾರಣ ಹೇಳಿ ಬಿ ಎಸ್ ವೈ ತವರು ಪಕ್ಷ ಬಿಜೆಪಿ ಗೆ ಮರು ಸೇರ್ಪಡೆಗೊಂಡ್ರು

ರಾಜ್ಯಾದ್ಯಂತ ಪ್ರಚಾರ ನಡೆಸಿದ ಬಿ ಎಸ್ ವೈ ರಾಜ್ಯದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದ ರನ್ನು ದೆಹಲಿಗೆ ಕಳುಹಿಸಿಕೊಟ್ಟರು. ಶಿಕಾರಿಪುರ ವಿಧಾನಸಭಾ ಕ್ಷೇತ್ರಕ್ಕೆ ರಾಜಿನಾಮೆ ನೀಡಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸಂಸತ್ತ್ ಮೆಟ್ಟಿಲು ಹತ್ತಿದ್ರು . ಆದ್ರೂ ಬಿ ಎಸ್ ವೈ ಗೆ ಕೇಂದ್ರ ಸಚಿವರಾಗುವ ಅದೃಷ್ಟ ಮಾತ್ರ ಒಲಿಯಲಿಲ್ಲ. ಡಿ ನೋಟಿಫಿಕೇಶನ್ ಅನ್ನೋ ಕಪ್ಪುಚುಕ್ಕೆ ಬಿ ಎಸ್ ವೈ  ಜನಪ್ರಿಯತೆಗೆ ಆಗಾಗ ಧಕ್ಕೆ ಉಂಟುಮಾಡುತ್ತಿತ್ತು. ಪ್ರಕರಣದಿಂದ ಮುಕ್ತಿ ಪಡೆಯಲು ಕಾನೂನು ಹೋರಾಟ ನಡೆಸಿದ್ರು. ಕೊನೆಗೂ ಡಿ ನೋಟಿಫಿಕೇಶನ್  ಪ್ರಕರಣ ರದ್ದುಗೊಂಡು ಬಿ ಎಸ್ ವೈ ಗೆ ದೊಡ್ಡ ರಿಲೀಫ್ ಸಿಕ್ಕಿದೆ. ಇದೀಗ ಬಿ ಎಸ್ ವೈ ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ  ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಬಿಜೆಪಿ ಕಾರ್ಯಕರ್ತ ರಲ್ಲೂ ಹೊಸ ಚೈತನ್ಯ ಬಂದಿದೆ. ಈ ನಡುವೆ ಬಿ ಎಸ್ ವೈ ಆಯ್ಕೆಗೆ ಅಪಸ್ವರ ಕೂಡ ಎದ್ದಿದೆ. ಆದರೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದ್ರೆ ಬಿಜೆಪಿ ಗೆ ಶಿಕಾರಿಪುರದ ಛಲದಂಕಮಲ್ಲ ಅನಿವಾರ್ಯ .ಎರಡುವರ್ಷಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ನಡೆಸಿ ಪಕ್ಷವನ್ನುಅಧಿಕಾರಕ್ಕೇರಿಸುವ ಮಹತ್ತರವಾದ ಜವಾಬ್ದಾರಿ ಬಿ ಎಸ್ ವೈ ಮೇಲಿದೆ. ಇದನ್ನೆಲ್ಲ ಬಿ ಎಸ್ ವೈ ಎಷ್ಟರ ಮಟ್ಟಿಗೆ ಸಾಕಾರಗೊಳಿಸ್ತಾರೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

  •  ಶ್ರೀ

 POPULAR  STORIES :

ಹಾಯ್ ಸ್ವೀಟು… ನಿನ್ನಲ್ಲಿರೋ ಪ್ರಶ್ನೆಗಳಿಗೆ ನನ್ನ ಹತ್ತಿರ ಉತ್ತರ ಇಲ್ಲ..!

100% ಕಾಮಿಡಿ, ಸಖತ್ ಮೂವಿ ಈಗಲೇ ನೋಡಿ ಸ್ವಾಮಿ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಟ್ಯಾಂಕರ್ ಮುಷ್ಕರದ ಎಫೆಕ್ಟ್..! ಪೆಟ್ರೋಲ್ ಸಿಗ್ದಿದ್ರೇ ಏನಾಗುತ್ತೆ ಗೊತ್ತಾ..?

ಆರು ಪ್ರಶ್ನೆ ಪತ್ರಿಕೆಗಳು `ಲೀಕ್’, ಬೆಚ್ಚಿಬೀಳಿಸಿದ ಸಿಐಡಿ ತನಿಖೆ..!?

ಭಾರತೀಯ ನಟಿ ಜೊತೆ ಒಬಾಮಾ ಡಿನ್ನರ್..!

ನಾನ್ “ವೆಜ್” ಅಂದ್ರೂ ಪ್ರಾಬ್ಲಂ…!

ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ..!? ಈ ಜನ್ಮದಲ್ಲಿ ಇವ್ರಿಗೆ ಬುದ್ಧಿ ಬರಲ್ಲ ಬಿಡಿ..!!

ಅಶ್ಲೀಲ ಚಿತ್ರಗಳನ್ನು ನೋಡುವುದು ತಪ್ಪಲ್ಲ..!? ಲವ್ ಗೇಮ್ ಚಿತ್ರದಲ್ಲಿ ಅಂಥದ್ದೇನಿದೆ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...