ಪೈಲ್ವಾನ್ ಸುನೀಲ್ ಶೆಟ್ಟಿ ಮಗಳ ಜೊತೆ ಕೆಎಲ್ ರಾಹುಲ್ ಡೇಟಿಂಗ್..!?ಬಾಲಿವುಡ್ನ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಬಗ್ಗೆ ನಿಮಗೆಲ್ಲ ತಿಳಿದೇ ಇರುತ್ತದೆ ಇವರು ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಸರ್ಕಾರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಇವರ ಮಗಳು ಅಥಿಯಾ ಶೆಟ್ಟಿ ಕೂಡ ಬಾಲಿವುಡ್ನಲ್ಲಿ ತನ್ನದೇ ಆದ ಹೆಸರನ್ನು ಹೊಂದಿದ್ದಾಳೆ. ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಇದೇ ಅಥಿಯಾ ಶೆಟ್ಟಿ ಕನ್ನಡದ ಕೆಎಲ್ ರಾಹುಲ್ ಅವರ ಜೊತೆ ಡೇಟ್ ಮಾಡುತ್ತಿದ್ದಾರೆ ಎಂಬುದು.
ಹೌದು ಖ್ಯಾತ ಕ್ರಿಕೆಟಿಗ ಮತ್ತು ಕನ್ನಡಿಗ ಕೆಎಲ್ ರಾಹುಲ್ ಅವರ ಜೊತೆ ಇತ್ತೀಚೆಗಷ್ಟೇ ರೆಸ್ಟೋರೆಂಟ್ ವೊಂದರಲ್ಲಿ ಅಥಿಯಾ ಶೆಟ್ಟಿ ಅವರು ಕಾಣಿಸಿಕೊಂಡಿದ್ದು ಈ ರೀತಿಯ ಸುದ್ದಿಗಳಿಗೆ ಕಾರಣವಾಗಿದೆ. ಇನ್ನು ಈ ಹಿಂದೆ ಸಾಕಷ್ಟು ಬಾರಿ ಈ ಜೋಡಿ ಬಗ್ಗೆ ಈ ರೀತಿಯ ಸುದ್ದಿಗಳು ಹರಿದಾಡಿದ್ದರೂ ಸಹ ಕೆಎಲ್ ರಾಹುಲ್ ಆಗಲಿ ಅಥವಾ ಅಥಿಯಾ ಶೆಟ್ಟಿ ಆಗಲೇ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಮೌನವನ್ನು ಮುರಿದಿಲ್ಲ. ಇನ್ನು ತಮ್ಮ ನಡುವಿನ ರಿಲೇಷನ್ ಶಿಪ್ ಯಾವ ರೀತಿಯದ್ದು ಎಂಬುದನ್ನು ಹೇಳದ ಕಾರಣ ಇವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಗಾಢ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ.