ರಚಿತಾರಾಮ್ ಸಣ್ಣ ಪುಟ್ಟ ವಿಷಯಗಳಲ್ಲಿ ಖುಷಿ ಪಡುವಂತಹ ನಟಿ. ಸಾಮಾನ್ಯ ಜನರಂತೆ ಪ್ರತಿನಿತ್ಯ ಓಡಾಡ ಬೇಕೆಂದು ಹಲವಾರು ಸ್ಟಾರ್ಗಳು ಅಂದುಕೊಳ್ಳುತ್ತಾರೆ.ಆದರೆ ಅವರಿಗಿರುವ ನನ್ನ ಫಾಲೋಯಿಂಗ್ ನಿಂದ ಆ ರೀತಿ ಓಡಾಡುವುದು ತುಂಬಾ ಕಷ್ಟ. ಹೀಗಾಗಿ ಸ್ಟಾರ್ ಗಳು ಯಾರಿಗೂ ತಿಳಿಯದ ರೀತಿ ಮುಖಕ್ಕೆ ಮುಖವಾಡ ಹಾಕಿಕೊಂಡು ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಾರೆ.
ಈ ಹಿಂದೆ ಜಗ್ಗೇಶ್ ಅವರು ಸಹ ಮೈಸೂರಿನ ಸೌಂದರ್ಯವನ್ನು ರಾತ್ರಿ ವೇಳೆ ಸವಿಯಲು ಇದೇ ರೀತಿ ಮುಖಕ್ಕೆ ಬಟ್ಟೆ ಹಾಕಿಕೊಂಡು ಟಾಂಗಾ ರೈಡ್ ಮಾಡಿದ್ದರು. ಇದೀಗ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸಹ ಮೆಟ್ರೊದಲ್ಲಿ ಸಂಚರಿಸುವ ತಮ್ಮ ಬಹುದಿನದ ಆಸೆಯನ್ನು ಇಂದು ಈಡೇರಿಸಿಕೊಂಡಿದ್ದಾರೆ. ಹೌದು ತಮ್ಮ ಸ್ನೇಹಿತ ತೇಜು ಕ್ರಾಂತಿ ಅವರ ಜೊತೆ ಮುಖಕ್ಕೆ ಬಟ್ಟೆ ಹಾಕಿಕೊಂಡು ಮೆಟ್ರೋದಲ್ಲಿ ಸಂಚಾರ ಮಾಡುವುದರ ಮುಖಾಂತರ ತಮ್ಮ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.