ಇನ್ನೆರಡು ತಿಂಗಳು ಸ್ಟಾರ್ ನಟರ ಹಾವಳಿ…! ಸಿನಿ ಪ್ರೇಮಿಗಳಿಗಾಗಿ.

Date:

ಕನ್ನಡ ಚಿತ್ರರಂಗ ಬಹು ಎತ್ತರಕ್ಕೆ ಬೆಳೀತಾ ಇದೆ. ಕನ್ನಡದಲ್ಲಿ‌ ಸಾಕಷ್ಟು ಸಿನಿಮಾಗಳು ಬರ್ತಿವೆ. ಬಹುತೇಕ ಸಿನಿಮಾಗಳು ದಾಖಲೆಗಳನ್ನು‌ ನಿರ್ಮಿಸುವುದರ ಜೊತೆಗೆ ಜನಮೆಚ್ಚುಗೆ ಯನ್ನೂ ಪಡೆದಿವೆ.
2019ರ ಮೊದಲಿಂದಲೂ ಹೊಸಬರ, ಸ್ಟಾರ್ ಗಳ ಸಿನಿಮಾಗಳು ಬರುತ್ತಿವೆ.
ಮುಖ್ಯವಾಗಿ ಸ್ಟಾರ್ ನಟರ ಸಿನಿಮಾಗಳನ್ನೇ ನೋಡುವುದಾದರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕವಚ, ರುಸ್ತುಂ ಸಿನಿಮಾಗಳಿಂದ ಮಿಂಚಿದ್ದಾರೆ. ಪವರ್ ಸ್ಟಾರ್ ಅಪ್ಪು ನಟಸಾರ್ವಭೌಮ ಆಗಿ ಹಿಟ್ ಸಿನಿಮಾ ಕೊಟ್ಟಿದ್ದಾರೆ. ಚಾಲೆಂಜ್ ಸ್ಟಾರ್ ದರ್ಶನ್ ಯಜಮಾನನಾಗಿ ದರ್ಶನ ನೀಡಿ..ಕುರುಕ್ಷೇತ್ರ ಸಿನಿಮಾದಲ್ಲಿ ದುರ್ಯೋಧನನಾಗಿ ಮಿಂಚುತ್ತಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪೈಲ್ವಾನ್ ಆಗಿ ವಿಶ್ವದಾದ್ಯಂತ ಹವಾ ನಿರ್ಮಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣಿ ಸಿನಿಮಾಗಳು ಗೆದ್ದಿವೆ‌.‌ ಐಲವ್ ಯು ಎಂ ಉಪೇಂದ್ರಗೆ ಅಭಿಮಾನಿಗಳು ಲವ್ ಯು ಟೂ ಅಂದಿದ್ದಾರೆ.
ಇನ್ನು ಈ ವರ್ಷ ಮುಗಿಯಲು ಎರಡು ತಿಂಗಳಿದ್ದು ( ಅಕ್ಟೋಬರ್ ಹೊರತು ಪಡಿಸಿ) ಇನ್ನೂ ಕೆಲವು ಸ್ಟಾರ್ ನಟರ ಸಿನಿಮಾಗಳು ತೆರೆಗೆ ಅಪ್ಪಳಿಸಲಿವೆ.


ಯಜಮಾನ , ಕುರುಕ್ಷೇತ್ರದ ದುರ್ಯೋಧನ ದರ್ಶನ ನೀಡಿರುವ ದರ್ಶನ್ ಒಡೆಯನಾಗಿ ಬರುತ್ತಿದ್ದಾರೆ.
ಈ ವರ್ಷ ನಟಸಾರ್ವಭೌಮ ಆಗಿ ಸದ್ದು ಮಾಡಿದ್ದ ಪವರ್ ಸ್ಟಾರ್ ಪು‌ನೀತ್ ರಾಜ್ ಕುಮಾರ್ ಯುವರತ್ನನಾಗಿ ಈ ವರ್ಷವೇ ಬರಲಿದ್ದಾರೆ. ಶಿವಣ್ಣ ಆಯುಷ್ಮಾನ್ ಭವ ಸಿನಿಮಾ ಮೂಲಕ ಬರ್ತಿದ್ದಾರೆ. ಇದು ಈ ವರ್ಷದ ಅವರ ಮೂರನೇ ಸಿನಿಮಾ. ರೋರಿಂಗ್ ಸ್ಟಾರ್ ಶ್ರೀಮುರಳಿ ಭರಾಟೆ ಸಿನಿಮಾ ಈ ವರ್ಷ ತೆರೆಕಾಣಲಿದೆ. ರಕ್ಷಿತ್ ಶೆಟ್ಟಿಯವರ ಅವನೇ ಶ್ರೀಮನ್ನಾರಣ ಸಿನಿಮಾ ಬರ್ತಿದೆ. ಹೀಗೆ ಸಾಲು ಸಾಲು ಸ್ಟಾರ್ ನಟರ ಸಿನಿಮಗಳು ಎರಡು ತಿಂಗಳಲ್ಲಿ ತೆರೆ ಕಾಣುತ್ತಿವೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...