ನಂದಿಧ್ವಜಕ್ಕೆ ಪೂಜೆ ಸಲ್ಲಿಸಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಹಾರಾಜ ಯದುವೀರ್ . ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಂಜೆ ಪಂಜಿನ ಕವಾಯತು ನಡೆಯಲಿದೆ. ರಾಜ್ಯಪಾಲರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರಿನ ದಸರಾ ಎಂದರೆ ಎಲ್ಲ ರಾಜ್ಯಗಳಿಂದಲೂ ಹಾಗೂ ಹಲವಾರು ಜನ ಸಂಭ್ರಮವನ್ನು ನೋಡಲು ಮೈಸೂರಿಗೆ ಬರುತ್ತಾರೆ ಅಂಬಾರಿಯನ್ನು ಹೊತ್ತ ಅರ್ಜುನ ಮೆರವಣಿಗೆ ಬರುತ್ತಿದ್ದಾನೆ ಎಂದರೆ ಆ ಕ್ಷಣವನ್ನು ನೋಡಲು ಜನ ಕಾತುರದಿಂದ ಕಾಯ್ತಾ ಇರ್ತಾರೆ ಹಾಗೂ ಜಂಬೂಸವಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿಯವರು ಎರಡು ತಿಂಗಳಿನಿಂದ ಉಸ್ತುವಾರಿ ಸಚಿವರು, ಸಂಸದರು, ಅಧಿಕಾರಿ ವರ್ಗದವರು, ಸಿಬ್ಬಂದಿ, ಜನಪ್ರತಿನಿಧಿಗಳು ದಸರಾ ಮಹೋತ್ಸವ ಯಶಸ್ಸಿಗೆ ಶ್ರಮಿಸಿದ್ದಾರೆ ಎಂದು ಹೇಳಿದ್ದಾರೆ.