ಕನ್ನಡಿಗರ ಮನಗೆದ್ದ ಆರತಿ ಲೈಫ್ ಸ್ಟೋರಿ.. ಬಹಶಃ ನಿಮಗಿದು ಗೊತ್ತಿಲ್ಲ..!

Date:

ನಿಮಗೆಲ್ಲರಿಗೂ ಗೊತ್ತಿರುವ ಕನ್ನಡದ ಖ್ಯಾತ ನಟಿ ಆರತಿ. ಅಂದಿನ ಟಾಪ್ ನಟಿ. 70, 80ರ ದಶಕದಲ್ಲಿ ಶ್ರೀನಾಥ್, ಅಶೋಕ್, ಶಂಕರ್ ನಾಗ್, ಅನಂತ್ ನಾಗ್, ವಿಷ್ಣುವರ್ಧನ್ ಸೇರಿ ಕನ್ನಡದ ಎಲ್ಲ ಹೀರೋಗಳ ಜೊತೆ ಆಕ್ಟ್ ಮಾಡಿರೋ ಹಿರೋಯಿನ್ .
ಬೇಡಿಕೆ ಇರುವಾಗ್ಲೇ ಇವರು ಸಿನಿರಂಗದಿಂದ ದೂರವಾದ್ರು. ತಮ್ಮ ಮಗಳ ಒಂಟಿತನದ ಬೇಗೆ ನಿವಾರಿಸಲು, ಚಿತ್ರರಂಗದಿಂದ ದೂರಾದರು. ಆದರೆ ತೆರೆಮರೆಯಲ್ಲಿ ಇದ್ದುಕೊಂಡು ಅವರು ಮಾಡುತ್ತಿರುವ ಸಮಾಜ ಸೇವೆ ಮಾತ್ರ ಎಂಥವರನ್ನು ಅಚ್ಚರಿಯಲ್ಲಿ ಮುಳುಗಿಸುತ್ತದೆ. ತಾನು ಚಿತ್ರ ನಟಿಯಾಗಿದ್ದಾಗ ಗಳಿಸಿದ ಸಂಪತ್ತನ್ನೆಲ್ಲ, ಸಮಾಜ ಸೇವೆಗಾಗಿ, ಬಡವರ ಉದ್ದಾರಕ್ಕಾಗಿ ಈ ನಟಿ ಬಳಸುತ್ತಿದ್ದಾರೆ ಎಂಬುದು ಅದೆಷ್ಟೋ ಜನಕ್ಕೆ ತಿಳಿದೇ ಇಲ್ಲ. ಆದರೆ, ಅವರ ನಿಸ್ವಾರ್ಥ ಸೇವೆಯು ಮಾತ್ರ ವಾಸ್ತವ.
ಆರತಿ ಸದ್ಯ ತಮ್ಮ ಪತಿ ಚಂದ್ರಶೇಖರ ದೇಸಾಯಿ ಗೌಡರ ಜೊತೆ ಅಮೆರಿಕದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ವೇಳೆ ತಮ್ಮ ಸಮಾಜ ಸೇವೆಯನ್ನೂ ವಿಸ್ತರಿಸಿಕೊಂಡೇ ಬರುತ್ತಿದ್ದಾರೆ. ಇನ್ನು ಆರತಿಯವರ ಸಮಾಜ ಸೇವೆಗೆ ಪ್ರೇರಣೆ ಆದವರು ಜಿ.ಎಸ್. ಶಿವರುದ್ರಪ್ಪ ಅವರ ಮಗ ಪ್ರೊ. ಜಿ.ಎಸ್. ಜಯದೇವ. ಅವರು ನಡೆಸುತ್ತಿರೋ ದೀನಬಂಧು ಆಶ್ರಯ ಮನೆ ಆರತಿಯವರಿಗೆ ಸ್ಫೂರ್ತಿ. ಇಲ್ಲಿನ ವಿದ್ಯಾರ್ಥಿಗಳಿಗೆ ವಿಶಾಲವಾದ ಹಾಸ್ಟಲ್ ನಿರ್ಮಾಣ ಮಾಡಿಸಿದ್ದಾರೆ. ಅಷ್ಟೇ ಅಲ್ಲ ಸುಮಾರು ಎರಡು ಕೋಟಿ ರೂಪಾಯಿ ಫಿಕ್ಸ್ ಡೆಪಾಸಿಟ್ ಇಟ್ಟು, ಅದರಿಂದ ಬರುವ ಬಡ್ಡಿ ಹಣವನ್ನು ವಿದ್ಯಾರ್ಥಿ ವೇತನ ನೀಡಲು ವ್ಯವಸ್ಥೆ ಮಾಡಿದ್ದಾರೆ.
ಆರತಿಯವರು ಬೆಂಗಳೂರಿನ ಜೆಪಿ ನಗರದಲ್ಲಿ ತಮಗಾಗಿ ಭವ್ಯ ಬಂಗ್ಲೆ ಕಟ್ಟಿಸಿದ್ರು. ಅದಕ್ಕೆ ‘ಬೆಳ್ಳಿ ತೆರೆ’ ಎಂದು ಹೆರಿಡಲಾಗಿತ್ತು. ಸುಮಾರು 18 ಕೋಟಿ ರೂಪಾಯಿಗಳಿಗೆ ಅದನ್ನು ಮಾರಾಟ ಮಾಡಿ, ಬಂದ ಹಣವನ್ನು ಅವರು ಸಮಾಜ ಸೇವೆಗೆ ವಿನಿಯೋಗ ಮಾಡಿದರು. ಆರತಿಯವರು ಸುಮಾರು 40 ಶಾಲೆಗಳನ್ನು ದತ್ತು ಪಡೆದಿರುವುದು ಮಾತ್ರವಲ್ಲದೆ, ಅಲ್ಲಿನ ಅನೇಕ ಬಡ ವಿದ್ಯಾರ್ಥಿಗಳ ವೆಚ್ಚ ಭರಿಸುತ್ತಿರೋದು ವಿಶೇಷ.
ಇನ್ನು ಅರತಿ ಅವರ ಸಮಾಜ ಸೇವೆ ಇಷ್ಟಕ್ಕೆ ಸೀಮಿತವಾಗಿಲ್ಲ. ಆರತಿ ಮತ್ತು ಅವರ ಪತಿ ಇಬ್ಬರೂ ಉತ್ತರ ಕರ್ನಾಟಕದ 20ಕ್ಕೂ ಹೆಚ್ಚು ಹಳ್ಳಿಗಳನ್ನು ದತ್ತು ಪಡೆದಿದ್ದಾರೆ. ಹಳ್ಳಿಗಳಿಗೆ ಶೌಚಾಲಯ ವ್ಯವಸ್ಥೆ, ಶಾಲೆಗಳ ವ್ಯವಸ್ಥೆ, ಹೆಣ್ಣು ಮಕ್ಕಳಿಗಾಗಿ ಸ್ವಯಂ ಉದ್ಯೋಗ ತರಬೇತಿಗಳನ್ನು ನೀಡುವಂತಹ ಮಹತ್ವದ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದಾರೆ.
ಏನೇ ಹೇಳಿ, ಕನ್ನಡ ಚಿತ್ರರಂಗದಲ್ಲಿ ಅತ್ಯುನ್ನತ ಸ್ಥಾನದಲ್ಲಿ ಮೆರೆದ ಈ ನಟಿ, ಸಾಮಾಜಿಕ ಕಳಕಳಿಯಿಂದ ನಿಸ್ವಾರ್ಥ ಮನೋಭಾವದಿಂದ ಮಾಡುತ್ತಿರುವ ಸಮಾಜ ಸೇವೆ ಶ್ಲಾಘನೀಯ. ಯಾವುದೇ ಪ್ರಚಾರಕ್ಕೂ, ಹೆಸರಿಗಾಗಿ ಸೇವೆ ಮಾಡದೆ ನಿಸ್ವಾರ್ಥವಾಗಿ ದುಡಿಯುತ್ತಿರುವ ಆರತಿಯವರು ಬಹಳಷ್ಟು ಜನರಿಗೆ ಮಾದರಿಯಾಗಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...