ಅನಿತಾ ಪ್ರಭಾ ಶರ್ಮಾ. ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಕೋಟ್ಮಾ ಹಳ್ಳಿಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದ ಭರವಸೆಯ ವಿದ್ಯಾರ್ಥಿಯಾಗಿದ್ದಳು ಮತ್ತು 10ನೇ ತರಗತಿಯ ಪರೀಕ್ಷೆಯಲ್ಲಿ ಶೇಕಡ 92 ಪ್ರತಿಶತ ಅಂಕಗಳನ್ನು ಪಡೆದರು. ಜೀವನದಲ್ಲಿ ಮಹತ್ತರವಾದದನ್ನು ಮಾಡುವ ದೊಡ್ಡ ಕನಸುಗಳನ್ನು ಹೊಂದಿದ್ದರು.
ಆದರೆ, ತನ್ನ ಕನಸುಗಳು ಛಿದ್ರಗೊಳ್ಳಲು ದೀರ್ಘ ಸಮಯ ತೆಗೆದುಕೊಳ್ಳಲಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಹುಡುಗಿಯರು ಮದುವೆಯಾಗಬೇಕೆಂಬುದು ಆ ಹಳ್ಳಿಯ ಸಂಪ್ರದಾಯವಾಗಿತ್ತು. ಪೋಷಕರು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದರು. ಅನಿತಾ ಆರಂಭದಲ್ಲಿ ಬಿಟ್ಟುಕೊಡಲಿಲ್ಲ ಹೇಗಾದರೂ ಓದಲೇಬೇಕೆಂದು ಗ್ವಾಲಿಯರ್ನಲ್ಲಿರುವ ತನ್ನ ಸಹೋದರನ ಮನೆಗೆ ಹೋಗಿ ಅಲ್ಲಿ ತಮ್ಮ ಓದು ಮುಂದುವರಿಸಿದರು.
ಅನಿತಾ, 12 ತರಗತಿಯ ಪರೀಕ್ಷೆ ಬರೆದು ಬಂದ ತಕ್ಷಣ ಎಷ್ಟೇ ವಿರೋಧ ಮಾಡಿದರೂ ಪೋಷಕರ ಒತ್ತಡಕ್ಕೊಳಗಾಗಿ 17 ನೇ ವಯಸ್ಸಿನಲ್ಲಿ 27 ವರ್ಷ ವಯಸ್ಸಿನ ವ್ಯಕ್ತಿಯನ್ನು ಮದುವೆಯಾದರು. ಮತ್ತೆ ಆರ್ಥಿಕ ನಿರ್ಬಂಧಗಳನ್ನು ಎದುರಿಸಿದರು. ನಂತರ ವಿವಾಹ ವಿಚ್ಛೇದನವನ್ನು ಪಡೆದರು. ಜೀವನ ಇನ್ನೇನು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಮುಂದಿನ ಪೀಳಿಗೆಗಾಗಿ ಎಂದಾದರೂ ಮಾಡಲೇ ಬೇಕೆಂದು ಮನಸ್ಸು ಮಾಡಿದರು.
ಮದುವೆ ಮಾಡಿಕೊಂಡು ಅತ್ತೆ ಮನೆಗೆ ಮರಳಿದ ಮೇಲೂ ಅವರು ಓದುತ್ತಾ ತನ್ನ ಗುರಿಯನ್ನು ತಲುಪುವ ಕಡೆಗೆ ನಡೆದರು. ಡಿಗ್ರಿಯ ಕೊನೆಯ ವರ್ಷದಲ್ಲಿರುವಾಗ ಅವರ ಗಂಡನಿಗೆ ಅಫಘಾತವಾಯಿತು. ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಿತು. ಎಲ್ಲ ಜವಾಬ್ದಾರಿಗಳು ಅನಿತಾ ಮೇಲೆ ಬಿದ್ದವು ನಂತ್ರ, ಅನಿತಾ ಒಂದು ಬ್ಯೂಟಿ ಪಾರ್ಲರ್ ನಲ್ಲಿ ಕೆಲ್ಸಸಕ್ಕೆ ಸೇರಿ ಅಲ್ಲಿಂದ ಬಂದ ದುಡ್ಡನ್ನು ಕುಟುಂಬ ನಡೆಸಲು ಬಳಸುತ್ತಿದ್ದರು.
ಸರ್ಕಾರಿ ಕೆಲಸವನ್ನು ಹುಡುಕಿ ಜೀವನವನ್ನು ಹೇಗಾದರೂ ಸರಿ ಮಾಡಿಕೊಳ್ಳಬೇಕೆಂದು ಬಯಸಿ 2013 ರಲ್ಲಿ, ಅರಣ್ಯ ಕಾವಲು ಪರೀಕ್ಷೆಗೆ ಅರ್ಜಿ ಹಾಕಿದರು . ನಾಲ್ಕು ಗಂಟೆಗಳಲ್ಲಿ 14 ಕಿಲೋಮೀಟರುಗಳವರೆಗೆ ನಡೆಯುತ್ತಿದ್ದರು. ಅವರ ಹೋರಾಟ ಅಂತಿಮವಾಗಿ ಫಲ ಕೊಟ್ಟಿತು ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಬಾಲಘಾಟ್ ಜಿಲ್ಲೆಯಲ್ಲಿ ಕೆಲಸಕ್ಕೆ ಸೇರಿದ್ರು. ಅವರು ಮತ್ತೊಮ್ಮೆ ಸಬ್-ಇನ್ಸ್ಪೆಕ್ಟರ್ ಹುದ್ದೆಗೆ ಪರೀಕ್ಷೆಗಾಗಿ ಸ್ಪರ್ಧಿಸಲು ನಿರ್ಧರಿಸಿದರು.ದೈಹಿಕ ಪರೀಕ್ಷೆಯ ಸುತ್ತಿನಲ್ಲಿ ವಿಫಲರಾದರು.
ಅದನ್ನೇ ಒಂದು ಸವಾಲಾಗಿ ತೆಗೆದುಕೊಂಡು ತನ್ನ ಮುಂದಿನ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಿದರು . ಪರೀಕ್ಷೆಯ ಎರಡು ತಿಂಗಳ ಮುಂಚೆ ಅಂಡಾಶಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಏತನ್ಮಧ್ಯೆ, ವಿಚ್ಛೇದನ ಪ್ರಕರಣವು ನ್ಯಾಯಾಲಯಕ್ಕೆ ಬಂದಿತು. ತಮ್ಮ ವಯಸ್ಸಿನ ವ್ಯತ್ಯಾಸ ಮತ್ತು ಹೊಂದಾಣಿಕೆಯ ಸಮಸ್ಯೆಗಳಿಂದಾಗಿ ವಿಚ್ಛೇದನ ಕ್ರಿಯೆ ಸಂಪೂರ್ಣವಾಗಿ ಸಫಲವಾಯಿತು.
ಡಿಎಸ್ ಪಿ ಪರೀಕ್ಷೆಯ ಮಹಿಳೆಯರ ವಿಭಾಗದಲ್ಲಿ 17 ನೇ ಶ್ರೇಯಾಂಕವನ್ನು ಪಡೆದರು ಮತ್ತು ಎಲ್ಲಾ ವಿಭಾಗಗಳಲ್ಲಿ 47 ನೇ ಸ್ಥಾನವನ್ನು ಪಡೆದರು. ಡೆಪ್ಯುಟಿ ಪೊಲೀಸ್ ಕಮಿಷನರ್ ಉನ್ನತ ಹುದ್ದೆಗಾಗಿ ಮತ್ತೊಮ್ಮೆ ಏಪ್ರಿಲ್ 2016 ರಲ್ಲಿ ಎಂಪಿಪಿಎಸ್ಸಿ ಪರೀಕ್ಷೆಗೆ ಹಾಜರಾದರು. ಕೊನೆಗೂ ಅಂದುಕೊಂಡಂತೆ ಅವರು ಡಿವೈಎಸ್ಪಿಯಾದ್ರು. ಅನಿತಾ ಪ್ರಭಾ ಅವರು ಮಹಿಳಾ ಸಬಲೀಕರಣದ ನೈಜ ಉದಾಹರಣೆಯಾದ್ರು.