ಬಡರೋಗಿಗಳ ಪಾಲಿನ ಜೀವಧಾತೆ, ಬಡವರ ಕಣ್ಮಣಿ ಕೂಡ. ಡಾ.ಆಶಾ ಬೆನಕಪ್ಪ ಅವರದು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ತುಂಬಾ ದೊಡ್ಡ ಹೆಸರು. ರಾಜಧಾನಿ ಬೆಂಗಳೂರಿನಲ್ಲಿ ತಂದೆಯವರು ಡಾ.ಬೆನಕಪ್ಪ ಅವರು ಸ್ಥಾಪಿಸಿರುವ ದೇಶದ ಪ್ರತಿಷ್ಠಿತ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ನಿರ್ದೇಶಕರಾಗಿ ಇಂದು ದೇಶ ವಿಖ್ಯಾತಿ ಪಡೆದಿದ್ದಾರೆ.
ಡಾ. ಆಶಾ ಬೆನಕಪ್ಪನವರು ಮೂಲತಃ ಬೆಂಗಳೂರಿನವರಲ್ಲ. ಮೂಲ ಮಲೆನಾಡಿನ ಹಳ್ಳಿಗರು, ಮತ್ತೆ ಅಪ್ಪಟ ಕನ್ನಡಿಗರು ಹೌದು. ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಲಿಂಗದಹಳ್ಳಿ ಗ್ರಾಮ. ಪ್ರಾಥಮಿಕ ಶಿಕ್ಷಣ ಕನ್ನಡ ಮಾಧ್ಯಮದಲ್ಲೇ. ತಂದೆ ಡಾ. ಬೆನಕಪ್ಪನವರು ಇಂಗ್ಲೆಂಡ್ ನಲ್ಲಿ ಇದ್ರು, ಮಗಳು ಮಾತ್ರ, ಹಳ್ಳಿಯಲ್ಲಿ, ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಯಲ್ಲಿ. ತದನಂತರ ಬೆಂಗಳೂರಿಗೆ ವರ್ಗಾವಣೆ ಗೊಂಡಿದ್ದು ವಿಶೇಷ.
ಡಾ. ಆಶಾ ಬೆನಕಪ್ಪನವರು ಬೆಂಗಳೂರಿನ ಬಸವನಗುಡಿಯಲ್ಲಿ ವಾಸ್ತವ್ಯ. ಹಾಗಾಗಿ ಅಲ್ಲೇ ಶಿಕ್ಷಣ. ಚಿಕ್ಕಂದಿನಿಂದಲೂ ಅಪಾರ ಸ್ನೇಹಿತ ವಲಯವನ್ನು ಸಂಪಾದಿಸಿದವರು. ತಂದೆಯಂತೆ ಮತ್ತೊಬ್ಬರಿಗೂ ಸಹಾಯ ಮಾಡುವ ಪರೋಪಕಾರಿಯೂ ಗುಣ ಅವರಲ್ಲಿ ಮೈಗೂಡಿತ್ತು. ಕಿರಿಯ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ರು ಅಷ್ಟೇ ಅಲ್ಲ, ಬಡ ಸಹವರ್ತಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ರು. ಡಾ. ಆಶಾ ಬೆನಕಪ್ಪನವರು. ನೋಡಿ, ಪಿಯುಸಿಯಲ್ಲಿ ಶೇಕಡ 90 ಅಂಕ ತೆಗೆದ್ರು ಮೆಡಿಕಲ್ ಸೀಟ್ ಸಿಗಲಿಲ್ಲವಂತೆ. ಕೊನೆಗೆ ಶ್ಶಾಮನೂರು ಶಿವಶಂಕರಪ್ಪ ಅವರು ಸೀಟು ಕೊಡಿಸಿದರಂತೆ.
ಇಂದು ಡಾ. ಆಶಾ ಬೆನಕಪ್ಪನವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಬದುಕಿನಲ್ಲಿ ಪ್ರಭಾವ ಬೀರಿದವರು ಇಬ್ಬರಂತೆ. ಅದರಲ್ಲಿ ಅವರ ತಂದೆ ಡಾ. ಆಶಾ ಬೆನಕಪ್ಪನವರು ಮತ್ತು ಮೆಡಿಕಲ್ ಕಾಲೇಜಿನಲ್ಲಿ ಗುರುಗಳಾಗಿದ್ದ ಡಾ. ನಿರ್ಮಲಾ ಕೇಸರಿ ಮೇಡಂ ಅವರಂತೆ. ಏನೇ ತೊಂದರೆಗಳಿದ್ದರೂ ಅವರ ಬಳಿ ಹೇಳಿಕೊಳ್ಳುತ್ತಿದ್ರರಂತೆ. ಬರೀ ಪಠ್ಯ ಮಾತ್ರವಲ್ಲ, ಲೈಫಿನ ಕುರಿತಂತೆ ಕೂಡ ಡಾ. ನಿರ್ಮಲಾ ಮೇಡಂ, ಡಾ. ಆಶಾ ಬೆನಕಪ್ಪನವರ ಮೇಲೆ ಪ್ರಭಾವ ಬೀರಿ ಬದುಕಿನಲ್ಲಿ ಬದಲಾವಣೆ ತಂದ್ರು ಎಂದು ನೆನಸಿಕೊಳ್ಳುತ್ತಾರೆ ಡಾ. ಆಶಾ ಬೆನಕಪ್ಪನವರು.
ಬಡವರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಕೇಂದ್ರ ತೆರೆಯಬೇಕೆಂದು ಡಾ. ಬೆನಕಪ್ಪನವರು ಪ್ರೇರಣೆಗೊಂಡ್ರು. ಇನ್ನು ಬೆಂಗಳೂರಿನಲ್ಲಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಂಥ ದೊಡ್ಡ ಸಂಸ್ಥೆಯನ್ನು ಕಟ್ಟುವುದು ಅಷ್ಟೊಂದು ಸಲೀಸಾಗಿರಲಿಲ್ಲ. ಡಾ. ಬೆನಕಪ್ಪನವರು ಮಕ್ಕಳ ತಜ್ಞರೆಂದು ರಾಜ್ಯ, ದೇಶ ವಿದೇಶಗಳೆಲ್ಲೆಲ್ಲಾ ಹೆಸರು ಮಾಡಿದ್ದರೂ ಕೂಡ ಆ ಸಂಸ್ಥೆ ಕಟ್ಟುವಾಗ ಅದೆಷ್ಟೋ ಪಡಿಪಾಟಲು ಎದುರಿಸಿದ್ರೂ ಅವಮಾನ ನುಂಗಿದ್ರು. ಬಡವರಿಗಾಗಿ ದೊಡ್ಡ ಆಸ್ಪತ್ರೆ ಕಟ್ಟಿಸಿದ್ರು.
ಬಡವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಕೊಡಬೇಕೆಂಬ ತಂದೆ ಡಾ.ಬೆನಕಪ್ಪನವರ ಆಶಯದಂತೆ ಡಾ. ಆಶಾ ಬೆನಕಪ್ಪನವರು ಕೂಡ ಬಡವರಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಇಂದಿರಾಗಾಂಧಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ದೊರಕಿಸುವ ಮೂಲಕ ಸಾವಿರಾರು ಮಕ್ಕಳ ಜೀವಧಾತೆ ಎನಿಸಿಕೊಂಡಿದ್ದಾರೆ. ಸರಳತನಕ್ಕೆ ಹೆಸರುವಾಸಿ, ಹಣ, ಅಂತಸ್ತು, ಅಧಿಕಾರಕ್ಕಾಗಿ ಆಸೆಪಡದ ಅಪರೂಪದ ವೈದ್ಯೆರೆನಿಸಿಕೊಂಡಿದ್ದಾರೆ.
ಒಟ್ಟಿನಲ್ಲಿ ಡಾ. ಆಶಾ ಬೆನಕಪ್ಪನವರು ಬಡ ರೋಗಿಗಳನ್ನು ಕಂಡರೆ ಅವರಿಗೆ ಎಲ್ಲಿಲ್ಲದ ಮಮತೆ, ಪ್ರೀತಿ. ವೃತ್ತಿಯನ್ನೂ ಮೀರಿದ ಅಕ್ಕರೆ. ಮಾತೃಹೃದಯಿ. ಅಪ್ಪನ ಮಾತನ್ನು ಉಳಿಸಿಕೊಳ್ಳೋಕೆ ಜೀವನವನ್ನೇ ತೇದಿದ್ದಾರೆ. ಅನೇಕ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಹಣವೇ ತಮ್ಮ ಜೀವಾಳ ಎಂದುಕೊಂಡಿರುವ ಅನೇಕ ವೈದ್ಯರಿಗೆ ಡಾ.ಆಶಾ ಬೆನಕಪ್ಪನವರು ಮಾದರಿ ಆಗಿದ್ದಾರೆ.