ಈ ಬಾರಿಯ ಬಿಗ್ಬಾಸ್ ಸೀಸನ್ ಯಾವಾಗ ಆರಂಭವಾಗುತ್ತದೆ ಯಾವ ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಕುತೂಹಲ ಮತ್ತು ಕಾತುರ ಎಲ್ಲರಲ್ಲಿಯೂ ಇತ್ತು. ಇನ್ನು ಇಂದು ಆ ಎಲ್ಲಾ ಕಾರಿಗೆ ಬ್ರೇಕ್ ಬೀಳಲಿದ್ದು ಇಂದು ಸಂಜೆಯಿಂದ ಬಿಗ್ ಬಾಸ್ ಕಾರ್ಯಕ್ರಮದ ಪ್ರಸಾರ ಆರಂಭವಾಗಲಿದೆ. ಇನ್ನು ಇದಕ್ಕೂ ಮೊದಲೇ ಹಿಡಿದ ರೋಮಾ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು ಬಿಗ್ ಬಾಸ್ ಮನೆ ಒಳಗಡೆ ಕಾಲಿಟ್ಟಿರುವ ಕುರಿ ಪ್ರತಾಪ್ ಮತ್ತು ರವಿ ಬೆಳಗೆರೆ ಅವರ ನಡುವಿನ ಮಾತುಕತೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್ ಅವರು ಮನೆ ಸುತ್ತಾ ಓಡಾಡುತ್ತಾ ಪರಸ್ಪರ ಮಾತನಾಡಿಕೊಂಡು ಟಿ ಕುಡಿಯುವುದರ ಬಗ್ಗೆ ಮತ್ತು ಸಿಗರೇಟ್ ಸೇರುವುದರ ಬಗ್ಗೆ ಚರ್ಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಬಿಗ್ ಬಾಸ್ ಮನೆಗೆ ಕಾಲಿಟ್ಟ ಕ್ಷಣದಲ್ಲಿಯೇ ರವಿ ಬೆಳಗೆರೆ ಅವರು ಸಿಗರೇಟ್ ಬೇಕು ಎಂದು ಕುರಿ ಅವರ ಬಳಿ ಕೇಳಿದಾಗ ಕ್ಯಾಮೆರಾದಲ್ಲಿ ಹೇಳೋಣ ಬನ್ನಿ ಎಂದು ಕರೆದುಕೊಂಡು ಹೋಗಿ ಕ್ಯಾಮೆರಾ ಮೂಲಕ ಸಿಗರೇಟ್ ಬೇಕೆಂದು ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್ ಅವರು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದಾರೆ. ಇನ್ನು ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್ ಅವರು ಮಾಡಿರುವ ಈ ಕೆಲಸ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.