ಡಿಕೆ ಶಿವಕುಮಾರ್ ಅವರು ತಹಾರ್ ಜೈಲಿನಲ್ಲಿ ನನಗೆ ವಿನಾಯಿತಿ ಬೇಡ, ಕೂರಲು ಒಂದು ಚೇರ್ ಕೊಡಿ ಸ್ವಾಮಿ ಎಂದು ಮನವಿ ಮಾಡಿದ್ದು, ಜೈಲಲ್ಲಿ ಇದ್ದು ಅವರ ಮುಖ ಕಳೆಗುಂದಿದೆ. ರಾಜನಂತೆ ಮೆರೆದು ಈಗ ಗಡ್ಡಬಿಟ್ಟಿರುವ ಡಿಕೆಶಿಯನ್ನು ಕಂಡು ಬೆಂಬಲಿಗರು ಕಂಗಾಲಾಗಿದ್ದಾರೆ. ಕಾನೂನಿನ ಬಿಗಿ ಹಿಡಿತಕ್ಕೆ ಡಿಕೆಶಿ ವಿಲವಿಲ ಎನ್ನುವಂತಾಗಿದ್ದಾರೆ.
ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ತಿಹಾರ್ ಜೈಲಿನಿಂದ ಇಡಿ ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಇಡಿ ಅಧಿಕಾರಿಗಳು ತಿಹಾರ್ ಜೈಲಿನಲ್ಲಿ ನನ್ನನ್ನು ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ. ಚೇರ್ ಕೊಡದೆ ವಿಚಾರಣೆ ನಡೆಸಿದ್ದಾರೆ. ನನಗೆ ಸೊಂಟ ಬೆನ್ನು ನೋವು ಇದೆ.ಕುಳಿತುಕೊಳ್ಳಲು ಒಂದು ಕುರ್ಚಿ ಕೊಡಿ. ಲೈಬ್ರರಿಯಲ್ಲಿ ನನಗೆ ಕುರ್ಚಿ ಕೊಡುತ್ತಿಲ್ಲ ಎಂದು ನ್ಯಾಯಾಧೀಶರಲ್ಲಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.