ಬಿಸಿಸಿಐ ವಿರೋಧದ ನಡುವೆಯೂ ವರ್ಷಕ್ಕೊಂದು ವಿಶ್ವಕಪ್ ಆಡಿಸಲು ಐಸಿಸಿ ನಿರ್ಧಾರ…!

Date:

ದುಬೈ : ಐಸಿಸಿ ( ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ) ಮತ್ತು ಬಿಸಿಸಿಐ ( ಭಾರ​ತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ನಡುವೆ ಆಗಾಗ ಏನಾದರೂ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಈಗ ಟೂರ್ನಿ ಆಯೋಜನೆ ವಿಷಯದಲ್ಲಿ ಐಸಿಸಿಯ ವಿರುದ್ಧ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿರುವ ಬಿಸಿಸಿಐ ಕಿಡಿಕಾರುತ್ತಿದ್ದು, ಐಸಿಸಿ ಮತ್ತು ಬಿಸಿಸಿಐ ನಡುವೆ ಮತ್ತೊಮ್ಮೆ ತಿಕ್ಕಾಟ ಆರಂಭ​ವಾ​ಗುವ ಸಾಧ್ಯತೆ ಹೆಚ್ಚಾಗಿದೆ.
ಬಿಸಿ​ಸಿ​ಐ ವಿರೋ​ಧದ ನಡುವೆಯೂ ಮುಂಬರುವ ಭವಿ​ಷ್ಯದ ಕ್ರಿಕೆಟ್‌ ಸರ​ಣಿ​ಗಳ ವೇಳಾ​ಪ​ಟ್ಟಿ ವರ್ಷ​ಕ್ಕೊಂದು ವಿಶ್ವ​ಕಪ್‌ ಆಯೋ​ಜಿ​ಸಲು ಐಸಿಸಿ ಮುಂದಾ​ಗು​ತ್ತಿದೆ ಎಂದು ತಿಳಿದು ಬಂದಿದೆ.
2023-2028ರ ಅವ​ಧಿ​ಯಲ್ಲಿ ವರ್ಷ​ಕ್ಕೊಂದು ವರ್ಲ್ಡ್ ಕಪ್ (ಪು​ರುಷ ಹಾಗೂ ಮಹಿ​ಳಾ) ಆಯೋ​ಜಿ​ಸಲು ಐಸಿಸಿ ನಿರ್ಧ​ರಿ​ಸಿದೆ ಎಂದು ವರದಿಯಾಗಿದೆ.


2023 -2028ರ ಅವಧಿಯಲ್ಲಿ ಒಟ್ಟು ಎರಡು 50 ಓವರ್‌ ವಿಶ್ವ​ಕಪ್‌, 4 ಟಿ20 ವಿಶ್ವ​ಕಪ್‌ ಹಾಗೂ 2 ಹೊಸ ಟೂರ್ನಿ​ಗ​ಳನ್ನು ನಡೆ​ಸಲು ಐಸಿಸಿ ಯೋಜನೆ ರೂಪಿ​ಸಿದ್ದು, ಈ ಹೊಸ ಸರಣಿಕೂಡ 50 ಓವರ್‌ ಮಾದ​ರಿಯ ಟೂರ್ನಿಯೇ ಆಗಿ​ರಲಿದೆ… ಚಾಂಪಿ​ಯನ್ಸ್‌ ಟ್ರೋಫಿ ರೀತಿ​ಯಲ್ಲಿ 6 ತಂಡ​ಗಳ ನಡುವೆ ನಡೆ​ಯ​ಲಿದೆ ಎಂದು ಹೇಳಲಾಗುತ್ತಿದ್ದು, ಇದನ್ನು ಬಿಸಿಸಿಐ ವಿರೋಧಿಸಿದೆ.

ಐಸಿಸಿ ವರ್ಷ​ಕ್ಕೊಂದು ವರ್ಲ್ಡ್ ಕಪ್ ನಡೆ​ಸಿದರೆ ಬಿಸಿ​ಸಿಐಗೆ ಪ್ರಸಾರ ಹಕ್ಕು ನಷ್ಟವಾಗ​ಲಿದೆ. ಉದಾ​ಹ​ರಣೆಗೆ, ಸ್ಟಾರ್‌ ಸ್ಪೋಟ್ಸ್‌ರ್‍ ಇಲ್ಲವೇ ಸೋನಿ ವಾಹಿನಿ ಕ್ರಿಕೆಟ್‌ ಪಂದ್ಯ​ಗಳ ಪ್ರಸಾರ ಹಕ್ಕು (ಟೀವಿ, ರೇಡಿಯೋ, ಡಿಜಿ​ಟಲ್‌) ಪಡೆ​ಯಲು .100 ಬಂಡ​ವಾಳ ಹೂಡಲು ಇಚ್ಛಿ​ಸಿವೆ ಎಂದುಕೊಂಡರೆ, ಇಲ್ಲಿ ಐಸಿ​ಸಿ ಹಾಗೂ ಬಿಸಿ​ಸಿಐ ನಡುವೆ ಸ್ಪರ್ಧೆ ಏರ್ಪ​ಡ​ಲಿದೆ. ಬಿಸಿಸಿಐನ ಪ್ರತಿಷ್ಠಿತ ಐಪಿಎಲ್ ಸರಣಿ ಮತ್ತು ದ್ವಿಪಕ್ಷೀಯ ಸರಣಿಗಳ ಹಕ್ಕಿನ ಬದಲು ವಾಹಿನಿಗಳು ಅಂತಾರಾಷ್ಟ್ರೀಯ ಟೂರ್ನಿಗಳ ಪ್ರಸಾರದ ಹಕ್ಕನ್ನು ಹೊಂದಲು ಮುಂದಾಗುತ್ತವೆ. ಆದ್ದರಿಂದ ಬಿಸಿಸಿಐ ಸಾಲು ಸಾಲು ವಿಶ್ವಕಪ್ ಗೆ ವಿರೋಧ ವ್ಯಕ್ತಪಡಿಸಿದೆ.

ಇನ್ನು ಐಸಿಸಿಗೆ ಬಿಸಿಸಿಐಯೇ ಪ್ರಮುಖ ಹಾಗೂ ಪ್ರಬಲ ಆದಾಯದ ಮೂಲವಾಗಿದ್ದರೂ ಬಿಸಿಸಿಐಗೆ ಅಧಿಕ ಹಣ ಸಂದಾಯವಾಗುತ್ತಿದೆ.
ಐಸಿಸಿಗೆ ಬರುವ ಜಾಹೀ​ರಾತು, ಪ್ರಸಾರ ಹಕ್ಕು, ಪ್ರಯೋ​ಜ​ಕತ್ವ ಮೊತ್ತದ ಶೇ. ಶೇ 75-80ರಷ್ಟುಹಣ ಭಾರ​ತ​ದಿಂದಲೇ ಸಿಗ​ಲಿದೆ. ಹೀಗಿ​ರುವಾಗ ಸಹ​ಜ​ವಾ​ಗಿಯೇ ಬಿಸಿ​ಸಿಐ ಹೆಚ್ಚಿನ ಲಾಭ ಪಡೆ​ದು​ಕೊ​ಳ್ಳು​ತ್ತಿದೆ ಇದನ್ನು ತಪ್ಪಿಸುವು ಉದ್ದೇಶದಿಂದಲೇ ಐಸಿಸಿ ವರ್ಷಕ್ಕೊಂದು ವಿಶ್ವಕಪ್ ನಡೆಸಲು ತೀರ್ಮಾನಿಸಿದ್ದು, ಆ ಮೂಲಕ ಬಿಸಿಸಿಐ ಆದಾಯಕ್ಕೆ ಕತ್ತರಿ ಹಾಕಲು ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದ್ದು, ಆದರೆ ಐಸಿಸಿ ಬಿಸಿಸಿಐ ಒತ್ತಾಯಕ್ಕೆ ಮಣಿಯುವ ಸಾಧ್ಯತೆಯೇ ಹೆಚ್ಚಿದೆ ಎಂಬುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರ.

Share post:

Subscribe

spot_imgspot_img

Popular

More like this
Related

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ

ರಾಜ್ಯದ ಶಾಲೆಗಳಿಗೆ ಅ.18ವರೆಗೆ ದಸರಾ ರಜೆ ವಿಸ್ತರಣೆ: ಸಿಎಂ ಸಿದ್ದರಾಮಯ್ಯ ಬೆಂಗಳೂರು: ರಾಜ್ಯದಲ್ಲಿ...

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ ಎಷ್ಟು ತಿಳಿಯಿರಿ

ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆ! ನಿಮ್ಮ ನಗರದಲ್ಲಿ ಬಂಗಾರದ ಬೆಲೆ...

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ

ಸಿನಿಮಾ ಮಾಡುವುದಾಗಿ ಹೇಳಿ ನಟಿಗೆ ಕಿರುಕುಳ: ನಿರ್ಮಾಪಕ ಹೇಮಂತ್ ಬಂಧನ ಸಿನಿಮಾ ಮಾಡುವುದಾಗಿ...

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...