ನಿನ್ನೆಯಷ್ಟೇ ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬವನ್ನು ದೇಶದಾದ್ಯಂತ ಜನ ಆಚರಿಸಿದರು ಮತ್ತು ಹುಟ್ಟುಹಬ್ಬದ ದಿನದಂದು ಭೌತಿಕವಾಗಿ ಮಾತ್ರ ನಮ್ಮನ್ನು ಅಗಲಿರುವ ಮಹಾನ್ ವ್ಯಕ್ತಿಯಾದ ಕಲಾಂ ಅವರನ್ನು ಜನರು ನೆನೆದರು. ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತಿಯನ್ನು ಪಡೆದಿರುವ ಅಬ್ದುಲ್ ಕಲಾಂ ಅವರು ಬದುಕಿದ್ದಾಗ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಕೇವಲ 38 ಜನರನ್ನು ಮಾತ್ರ ಫಾಲೋ ಮಾಡುತ್ತಿದ್ದರು.
ಇನ್ನು ಕಲಾಂ ಅವರು ಫಾಲೋ ಮಾಡುತ್ತಿದ್ದ 38 ಜನರ ಪೈಕಿ ಅಲ್ಲಿ ಸ್ಥಾನ ಪಡೆದುಕೊಂಡಿದ್ದ ಕ್ರಿಕೆಟಿಗ ಮಾತ್ರ ಒಬ್ಬರೇ. ಹೌದು ಮಹಾನ್ ವ್ಯಕ್ತಿಯಾದ ಎಪಿಜೆ ಅಬ್ದುಲ್ ಕಲಾಂ ಅವರು ಫಾಲೋ ಮಾಡುತ್ತಿದ್ದ ಆ ಕ್ರಿಕೆಟಿಗ ಬೇರೆ ಯಾರೂ ಅಲ್ಲ ನಮ್ಮ ಭಾರತೀಯ ಕ್ರಿಕೆಟ್ ತಂಡದ ಪರ ಆಡುತ್ತಿದ್ದ ಲೆಜೆಂಡರಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್. ಹೌದು ಕಲಾಂ ಜಿ ಅವರು ಫಾಲೋ ಮಾಡುತ್ತಿದ್ದ ಏಕೈಕ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್.