ನಟರೊಬ್ಬರು ಯೋಧರಿಗೆ ಜಮೀನು ಕೊಟ್ಟಿದ್ದಾರೆ. ಈ ಸ್ಟೋರಿ ನೀವಿನ್ನೂ ಓದಿಲ್ವಾ? ಹಾಗಾದ್ರೆ ಇದನ್ನು ಓದಲೇ ಬೇಕು. ಯೋಧರಿಗೆ 170 ಎಕರೆ ಜಮೀನನ್ನ ಕೊಟ್ಟಿರುವ ನಟ ಮತ್ಯಾರು ಅಲ್ಲ ಅವರೇ ಕನ್ನಡದ ಖ್ಯಾತ ನಟ ಸುಮನ್. ಮೂಲತಃ ನಮ್ಮ ಕಡತಲತಡಿಯ ಮಂಗಳೂರಿನವರು. ಇವರ ಮೂಲ ಹೆಸರು ಸುಮನ್ ತಲ್ವಾರ್. ನಮ್ಮವರೇ ಆದರೂ ತಮ್ಮ ಚಿತ್ರ ಜೀವನ ಶುರು ಮಾಡಿದ್ದು, ಫೇಮಸ್ ಆಗಿದ್ದು, ಎಲ್ಲವೂ ಕಾಲಿವುಡ್ ಮತ್ತು ಟಾಲಿವುಡ್ ನಲ್ಲಿ. ತಮ್ಮ ಸಿನಿಮಾಗಳ ಮೂಲಕ ಸಮಾಜದಲ್ಲಿ ಗೌರವ ಪಡೆದಿದ್ದಾರೆ.
ಖ್ಯಾತ ನಟ ಸುಮನ್ ತೆಲುಗು, ತಮಿಳಿನಲ್ಲಿ ಸಾಕಷ್ಟು ಹೆಸರು ಮಾಡಿದ ಕಲಾವಿದರು. ಕನ್ನಡದ ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ತೆಲುಗಿನ ಭಕ್ತಿ ಪ್ರಧಾನ ಸಿನಿಮಾಗಳಲ್ಲಿ ತಿರುಪತಿ ತಿಮ್ಮಪ್ಪನ ಪಾತ್ರಗಳು ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದೆ. ಅವರು ಪೋಷಿಸಿರುವ ಪಾತ್ರ ನೋಡಿದವರು ಸಾಕ್ಷಾತ್ ಶ್ರೀನಿವಾಸನೇ ಪ್ರತ್ಯಕ್ಷರಾದಂತಿರುತ್ತದೆ.
ಇದೀಗ ಇವರು ತಮ್ಮ ಬೆಲೆಬಾಳುವ 175 ಎಕರೆ ಜಮೀನನ್ನು ವೀರ ಯೋಧರ ಕುಟುಂಬಕ್ಕೆ ದಾನವಾಗಿ ನೀಡಿದ್ದಾರೆ. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾಗಿವೆ. ಆದರೆ, ಸಮಾಜಕ್ಕೆ ಏನು ಮಾಡಿದ್ದೇನೆ ಎಂಬ ಪ್ರಶ್ನೆ ಕಾಡುತ್ತಿತ್ತು. ಆಗ ತಮ್ಮ ಪತ್ನಿ ಸಲಹೆ ನೀಡಿದರು. ಹೈದರಾಬಾದ್ ನಗರದಿಂದ ಹೊರವಲಯಲ್ಲಿ ಸ್ಟುಡಿಯೋ ಮಾಡಬೇಕು ಎಂದು ತೆಗೆದುಕೊಂಡ 175 ಎಕರೆ ಜಾಗ ಇದೆ. ಇದನ್ನು ಕಾರ್ಗಿಲ್ ವಾರ್ ಹೀರೋಸ್ ನೀಡುತ್ತಿದ್ದೇನೆಂದು ನಮ್ಮ ಬೆಂಗಳೂರಿನಲ್ಲೇ ಘೋಷಿಸಿದ್ದರು.
ನಮ್ಮ ವೀರ ಯೋಧರಿಗೆ ಬೆಲೆಬಾಳುವ ಭೂಮಿ ಬಿಟ್ಟುಕೊಡುವ ಬಗ್ಗೆ ನಟ ಸುಮನ್ ಅವರಿಗೆ ಪತ್ನಿ ಶಿರೀಶಾ ಸಲಹೆ ನೀಡಿದಂತೆ. ಇನ್ನು ಸುಮನ್ ಅವರ ಕುಟುಂಬದ ಹೆಸರಿನಲ್ಲಿ 175 ಎಕರೆ ಆಂಧ್ರ ಪ್ರದೇಶದಲ್ಲಿದೆ. ಅದು ಹೈದರಾಬಾದ್ ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ ಈ ಜಾಗ. ಯಾದಗಿರಿ ಗುಟ್ಟ ಎಂಬ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನ ಇದೆ. ಆ ಜಾಗ ಸ್ವಲ್ಪ ಗುಡ್ಡಗಳಿಂದ ಕೂಡಿದೆ. ಈ ವರ್ಷಾಂತ್ಯಕ್ಕೆ ಅದನ್ನು ಸಮತಟ್ಟಾಗಿ ಮಾಡಿ ವೀರಯೋಧರ ಕುಟುಂಬಗಳಿಗೆ ಹಸ್ತಾಂತರಿಸಲು ಮುಂದಾಗಿರುವುದಾಗಿ ಅವರು ಹೇಳಿದ್ದಾರೆ.
ನಾವು ಸೈಟ್ ನೀಡುತ್ತೇವೆ. ಅವರು ಮನೆ ಕಟ್ಟಿಕೊಳ್ಳಬಹುದು. ಸಿನಿಮಾ ಕ್ಷೇತ್ರಕ್ಕೆ ಬಂದು 40 ವರ್ಷಗಳಾಗಿದೆ, ಇದುವೆಗೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಸಮಾಜಕ್ಕೆ ಏನು ಮಾಡಿದ್ದೇನೆ ಎಂದು ಕೇಳಿಕೊಂಡಾಗ. ಇದನ್ನು ಮಾಡೋಣ ಅನ್ನಿಸಿತು. ನನ್ನ ಪತ್ನಿ ಈ ರೀತಿ ಮಾಡಿ ಎಂದಾಗ ಓಕೆ ಎಂದು ಹೇಳಿದೆ. ಆ ಜಾಗದಲ್ಲಿ ಸ್ಟುಡಿಯೋ ಮಾಡಬೇಕು ಎಂಬ ಕನಸಿತ್ತು. ಅದನ್ನು ಈಗ ಮರೆತಿದ್ದೇನೆ. ಒಬ್ಬ ನಟನಾಗಿ ನಾನು ಈ ರೀತಿ ಮಾಡಿದರೆ ನಮ್ಮ ರಾಜ್ಯಕ್ಕೂ ಹೆಮ್ಮೆಯ ಸಂಗತಿ ಎಂದಿದ್ದಾರೆ ನಟ ಮಂಗಳೂರು ಸುಮನ್ ಅವರು.
ಕನ್ನಡಿಗ, ಬಹುಭಾಷಾ ನಟ ಸುಮನ್ ಅವರು ದೇಶಕಾಯೋ ಯೋಧರಿಗಾಗಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಬರೋಬ್ಬರಿ 175 ಎಕರೆ ತಮ್ಮ ಸ್ವಂತ ಭೂಮಿಯನ್ನು ನೀಡಲು ಮುಂದಾಗಿರುವ ಅವರ ಹೃದಯ ಶ್ರೀಮಂತಿಕೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ನಟ ಸುಮನ್ ಅವರು ಪ್ರತಿಯೊಬ್ಬರಿಗೂ ಪ್ರೇರಕ ಶಕ್ತಿಯಾಗಿದ್ದಾರೆ.
ವೀರ ಸೈನಿಕರಿಗೆ 170 ಎಕರೆ ಜಮೀನು ಕೊಟ್ಟ ಖ್ಯಾತ ನಟ
Date: