ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?

Date:

 

ನಮ್ಮ ಸುತ್ತಮುತ್ತ ಅದೆಷ್ಟೋ ಕಂಪನಿ ಬ್ರ್ಯಾಂಡ್ಗಳ “ಲೋಗೋ”ಗಳನ್ನು ನೋಡಿರುತ್ತೀವಿ. ಈ ಲೋಗೋಗಳೂ ಸಹ ಕಂಪನಿಯ ಅಭಿವೃಧಿಗೆ ಪಾತ್ರವಾಗಿರುತ್ತವೆ ಹಾಗೂ ಪ್ರತಿಯೊಂದು ಚಿಹ್ನೆಗಳಲ್ಲಿ ಏನಾದರೂ ಮಾಹಿತಿ ಅಡಗಿರುತ್ತವೆ ಎಂದು ನಿಮಗೆ ಗೊತ್ತಿದೆಯಾ? ಇಲ್ಲವಾದರೆ ಕೆಲವು ಲೋಗೋಗಳ ಮಾಹಿತಿ ನಾವು ಕೊಡುತ್ತಿದ್ದೇವೆ. ಇದನ್ನು ತಿಳಿದುಕೊಂಡ ಬಳಿಕ ಬೇರೆ ಕಂಪನಿಯ ಚಿಹ್ನೆಗಳ ಮಾಹಿತಿ ಹುಡುಕಲು ನೀವು ಪ್ರಯತ್ನಿಸಿರಿ.

ಆ್ಯಪಲ್
ಆ್ಯಪಲ್ ಕಂಪನಿ ಯಾರಿಗೆ ಗೊತ್ತಿಲ್ಲ ಹೇಳಿ..? ಸ್ಟೀವ್ ಜಾಬ್ಸ್ ಎಂಬ ವ್ಯಕಿ ಚಿಕ್ಕ ಗ್ಯಾರೇಜ್ ಒಂದರಲ್ಲಿ ಸ್ಥಾಪಿಸಿದ ಈ ಸಂಸ್ಥೆ ಐಫೋನ್, ಐಪ್ಯಾಡ್ ಗಳ ಮೂಲಕ ಮನೆ ಮಾತಾಗಿದೆ. ಆ್ಯಪಲ್ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಚೂರು ತಿಂದಿಟ್ಟಿರುವಂತಿರುವ ಸೇಬು. ವಿಶೇಷವೆಂದರೆ ಆ ಲೋಗೋದಲ್ಲೂ ರಹಸ್ಯವಿದೆ. ಬೈಬಲ್ನಲ್ಲಿರುವ ಆ್ಯಡಮ್ ಹಾಗೂ ಈವ್ ನ ಕತೆಯನ್ನು ಇದು ಪ್ರತಿನಿಧಿಸುತ್ತದೆ. ಈವ್ ಮಾತಿಗೆ ಮರುಳಾಗಿ ಆ್ಯಡಮ್ ಪವಿತ್ರವಾದ ಹಣ್ಣು ತಿನ್ನಬಾರದಾಗಿತ್ತು. ಆದರೂ ಅದನ್ನು ತಿಂದಿದ್ದನಂತೆ. ಅದನ್ನೇ ಆ್ಯಪಲ್ ಕಂಪನಿಯ ಸಿಂಬಲ್ ಆಗಿ ಬಳಸಲಾಗುತ್ತಿದೆ.

ಆಡಿಡಾಸ್
ಅಡಿಡಾಸ್ ಎಂದರೆ ಥಟ್ಟನೆ ನೆನಪಿಗೆ ಬರುವುದು ಸ್ಫೋಟ್ಸರ್್.ಅಥರ್ಾತ್ ಕ್ರೀಡಾಲೋಕದಲ್ಲಿ ಅಡಿಡಾಸ್ ಗೆ ಇರುವ ಮಹತ್ವ ಅಂತದ್ದು. ವಿಶ್ವಕ್ರಿಕೆಟ್ ಚಾಂಪಿಯನ್ ಆಸ್ಟ್ರೇಲಿಯಾ, ಇಂಗ್ಲೇಂಡ್ ನ ಆಟಗಾರರಿಗೆ ಬಟ್ಟೆಗಳನ್ನು ಪ್ರಾಯೋಜತ್ವ ನೀಡುವುದು ಇದೇ ಅಡಿಡಾಸ್. ಇಷ್ಟೇ ಅಲ್ಲದೇ ನಮ್ಮ ರೈನಾ, ಕೆ.ಎಲ್ ರಾಹುಲ್, ಜಡೇಜಾ, ವಿಂಡೀಸ್ ನ ಬ್ರಾವೋರಂಥಹ ಘಟಾನುಘಟಿ ಆಟಗಾರರಿಗೆ ಅಡಿಡಾಸ್ ಬ್ಯಾಟೇ ಬೇಕು. ಈ ಅಡಿಡಾಸ್ ನ ಲೋಗೋದಲ್ಲಿ ಏರು ಮುಖದಲ್ಲಿರುವ 3 ದಪ್ಪನೆಯ ಗೆರೆಗಳಿವೆ. ಇವುಗಳು ಅಡಿಡಾಸ್ ಕಂಪನಿಯು ಯಾವುದೇ ಸವಾಲುಗನ್ನು ಎದುರಿಸಲು ಸಿದ್ಧ ಎನ್ನುವಂತೆ ವಿನ್ಯಾಸ ಮಾಡಲಾಗಿದೆ.

ಫೆಡ್ ಎಕ್ಸ್
ನಮ್ಮಲ್ಲಿರುವ ವಸ್ತುಗಳನ್ನು ಸುರಕ್ಷಿತವಾಗಿ ಬೇರೆಡೆ ಸಾಗಿಸಬೇಕಿದ್ದರೆ ಥಟ್ಟನೆ ನೆನಪಿಗೆ ಬರುವುದು ಫೆಡ್ ಎಕ್ಸ್. ಅಮೆರಿಕಾದ ಈ ಕಂಪನಿ ಭಾರತೀಯರ ಮನದಲ್ಲೂ ಅಚ್ಚೊತ್ತಿಕೊಂಡಿದೆ. ಫೆಡ್ ಎಕ್ಸ್ನ ಲೋಗೋದಲ್ಲೂ ಒಂದು ಅಚ್ಚರಿಯಿದೆ. ಸಾಮಾನ್ಯವಾಗಿ ಆ ಲೋಗೋವನ್ನು ನೋಡಿದಾಗ ಕೇವಲ ಇಂಗ್ಲೀಷ್ ಅಕ್ಷರದಲ್ಲಿ ಫೆಡ್ ಎಕ್ಸ್ ಎಂದು ಬರೆದಿರುವುದು ಕಾಣಿಸುತ್ತದೆ. ಆದರೆ ಈ ಮತ್ತು ಎಕ್ಸ್ ಅಕ್ಷರಗಳ ಮಧ್ಯೆ ಸೂಕ್ಷ್ಮವಾಗಿ ಗಮನಿಸಿದಾಗ ಒಂದು ಬಾಣದ ಗುರುತು ಕಾಣಿಸುತ್ತದೆ. ಫೆಡ್ ಎಕ್ಸ್ ಕಂಪನಿ ಪ್ರಕಾರ ವೇಗವಾಗಿ ವಸ್ತುಗಳನ್ನು ಡೆಲಿವರಿ ಮಾಡುವುದರ ಗುರಿಯನ್ನು ಈ ಲೋಗೋ ತೋರಿಸುತ್ತದೆ.

ಅಮೆಜಾನ್
ಈಗ ಎಲ್ಲೆಲ್ಲೂ ಆನ್ ಲೈನ್ ಶಾಪಿಂಗ್ ನದ್ದೇ ಮಾತು. ಮೊಬೈಲ್ ನಿಂದ ಹಿಡಿದು ಪೆನ್ ವರೆಗೂ ಎಲ್ಲವೂ ಆನ್ ಲೈನ್ ನಲ್ಲಿ ದೊರೆಯುತ್ತವೆ. ಅಮೆರಿಕಾ ಮೂಲದ ಅಮೆಜಾನ್ ಕೂಡಾ ಆನ್ ಲೈನ್ ಮಾರುಕಟ್ಟೆಯಲ್ಲಿ ದೊಡ್ಡ ಹೆಸರನ್ನೇ ಮಾಡಿದೆ. ಆನ್ ಲೈನ್ ಶಾಪಿಂಗ್ ನ ದಿಗ್ಗಜ ಎಂದೇ ಹೆಸರುವಾಸಿಯಾಗಿರುವ ಅಮೆಜಾನ್ ನ ಲೋಗೋವನ್ನು ನೀವು ಗಮನಿಸಿದರೆ ಅಮೆಜಾನ್ ಎಂದು ಆಂಗ್ಲ ಭಾಷೆಯಲ್ಲಿ ಬರೆದಿರುವುದು ಕಾಣಿಸುತ್ತದೆ. ಆದರೆ ಎ ಮತ್ತು ಝೆಡ್ ಅಕ್ಷರ ಅಕ್ಷರಗಳ ಕೆಳಗೆ ಇರುವ ಒಂದು ಬಾಣ ನಿಮಗೆ ಕಾಣಿಸಿದರೂ ಅಷ್ಟೊಂದು ಅಚ್ಚರಿಯಿಂದ ನೋಡಿರುವುದಿಲ್ಲ. ಆದರೆ, ಆ ಬಾಣದಲ್ಲೇ ಒಂದು ಟ್ವಿಸ್ಟ್ ಇದೆ. ಅಮೆಜಾನ್ ಸಂಸ್ಥೆಯು ಎ ಟು ಝೆಡ್ ಸವರ್ಿಸ್ ಒದಗಿಸುತ್ತದೆ ಎಂಬುದನ್ನು ಆ ಬಾಣವೇ ಪ್ರತಿನಿಧಿಸುತ್ತದೆ.

ಬಾಸ್ಕಿನ್ ರಾಬಿನ್ಸ್
ಐಸ್ ಕ್ರೀಮ್ ಪ್ರಿಯರು ನೀವಾಗಿದ್ದಲ್ಲಿ ಬಾಸ್ಕಿನ ರಾಬಿನ್ಸ್ ಹೆಸರು ಕೇಳಿರಲೇಬೇಕು. ವಿಧವಿಧದ ಐಸ್ ಕ್ರೀಮ್ ಗಳನ್ನು ತಯಾರಿಸುವ ಅಮೆರಿಕಾದ ಈ ಕಂಪನಿ ಜಗತ್ತಿನೆಲ್ಲೆಡೆಯ ಜನರಿಗೆ ಐಸ್ಕ್ರೀಮ್ ರುಚಿಯನ್ನು ಉಣಬಡಿಸುತ್ತಿದೆ. ಬಾಸ್ಕಿನ್ ರಾಬಿನ್ಸ್ ಸುಮಾರು 31 ವಿಧವಾದ ಐಸ್ಕ್ರೀಮ್ಗಳನ್ನು ಮಾರಾಟ ಮಾಡುತ್ತಿದೆ. ಅದನ್ನು ಜಗತ್ತಿಗೆ ತಿಳಿಸಲು ರಾಬಿನ್ಸ್ ವಿಭಿನ್ನ ತಂತ್ರ ಹೆಣೆದಿದೆ. ಅದೇನೆಂದರೆ ಬಾಸ್ಕಿನ್ ರಾಬಿನ್ಸ್ನ ಲೋಗೋದ ಮಧ್ಯೆ 31 ಎಂಬಂತೆ ಸಂಖ್ಯೆಯನ್ನು ಮುದ್ರಿಸಲಾಗಿದೆ. ಅದೇ ಬಾಸ್ಕಿನ್ ರಾಬಿನ್ಸ್ನ 31 ವಿಧದ ರುಚಿಯನ್ನು ಪ್ರತಿನಿಧಿಸುತ್ತದೆ.

ಸೋನಿ ವೈಯೋ
ಸೋನಿ ಕಂಪನಿಯು ವೈಯೋ ಹೆಸಸರಿನಲ್ಲಿ ಲ್ಯಾಪ್ ಟಾಪ್ಗಳನ್ನು ತಯಾರಿಸುತ್ತಿರುವುದು ಜಗತ್ತಿಗೇ ತಿಳಿದಿರುವ ವಿಚಾರ. ಜಪಾನ್ ಮೂಲದ ಈ ಕಂಪನಿ ತನ್ನ ಗುಣಮಟ್ಟದಿಂದಲೇ ಅಪಾರ ಪ್ರಮಾಣದ ಗ್ರಾಹಕರನ್ನು ಹೊಂದಿದೆ. ಸೋನಿಯು ತನ್ನ ಮೊದಲ ಲ್ಯಾಪ್ ಟಾಪ್ ಗೆ ವೈಯೋ ಅಂತ ಹೆಸರಿಟ್ಟಿದೆ. ಆದರೆ ಅದರ ಲೋಗೋ ಒಮ್ಮೆ ನೀವು ನೋಡಿ ಇಂಗ್ಲೀಷ್ ನ ವಿ ಮತ್ತು ಎ ಅಕ್ಷರಗಳನ್ನು ಒಂದು ರೀತಿಯಲ್ಲಿ ಬರೆದರೆ ಐ ಮತ್ತು ಓ ಅಕ್ಷರಗಳನ್ನು ಇನ್ನೊಂದು ರೀತಿಯಲ್ಲಿ ಬರೆದಿದ್ದಾರೆ. ಮೊದಲ ಎರಡು ಅಕ್ಷರ ಎಲೆಕ್ಟ್ರಾನಿಕ್ಸ್ನ ಸೂಚಕ ಅನಾಲಾಗ್ ಹಾಗೂ ಇನ್ನುಳಿದ ಎರಡು ಅಕ್ಷರ ಡಿಜಿಟಲ್ ಎಂಬುದನ್ನು ಪ್ರತಿನಿಧಿಸುತ್ತವೆ.

ಮರ್ಸಿಡೀಸ್ ಬೆಂಝ್
ಕಾರ್ ಕೊಂಡುಕೊಂಡರೆ ಅದು ಮರ್ಸಿಡೀಸ್ ಬೆಂಝ್ ಆಗಿರಬೇಕು ಎಂಬುದು ಪಡ್ಡೆ ಹೈಕ್ಳ ವರಾತ. ತನ್ನ ಗುಣಮಟ್ಟದಿಂದ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಮರ್ಸಿಡೀಸ್ ಶ್ರೀಮಂತಿಕೆಯ ಸಂಕೇತವಾಗಿ ಗುರುತಿಸಿಕೊಂಡಿದೆ. ವಿಶೇಷವೆಂದರೆ ಈ ಕಂಪನಿಯ ಎಲ್ಲಾ ಕಾರುಗಳ ಪ್ರಾರಂಭಿಕ ಬೆಲೆಯೇ 25 ಲಕ್ಷಕ್ಕೂ ಹೆಚ್ಚು. ವಿಶ್ವದ ದುಬಾರಿ ಕಾರು ಎನಿಸಿಕೊಂಡಿರುವ ಮರ್ಸಿಡೀಸ್ ನ ಲೋಗೊ ನೋಡಿದಾಗ ಕೇವಲ ಮೂರು ಮುಳ್ಳು ಗೋಚರಿಸುತ್ತದೆ. ಅವುಗಳು ಮೂರು ದಿಕ್ಕುಗಳನ್ನು ಪ್ರತಿನಿಧಿಸುತ್ತವೆ. ಮರ್ಸಿಡೀಸ್ ನ ಪ್ರಕಾರ ಆಕಾಶ, ಭೂಮಿ ಹಾಗೂ ನೀರಿನಲ್ಲೂ ಪ್ರಭುತ್ವ ಸಾಧಿಸಿದ್ದೇವೆ ಎನ್ನುತ್ತದೆ.

ಆದ್ದರಿಂದ ವೋಕ್ಸ್ ವ್ಯಾಗನ್
ಭಾರತದಲ್ಲಿ ಧೂಳೆಬ್ಬಿಸುತ್ತಿರುವ ಕಾರ್ ಕಂಪನಿಗಳ ಪಟ್ಟಿಯಲ್ಲಿ ಆದ್ದರಿಂದ ವೋಕ್ಸ್ ವ್ಯಾಗನ್ ಗೆ ಪ್ರಮುಖ ಸ್ಥಾನವಿದೆ. ಜರ್ಮನಿ ಮೂಲದ ಈ ಕಾರು ತಯಾರಿಕಾ ಕಂಪನಿಯು ಭಾರತದಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡುವ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದ್ದರಿಂದ ವೋಕ್ಸ್ ವ್ಯಾಗನ್ ಲೋಗೋವನ್ನು ಗಮನಿಸಿದಾಗ ದೊಡ್ಡ ಡಬ್ಲ್ಯೂ ಮೇಲೆ ಒಂದು ಚಿಕ್ಕ ವಿ ಅಕ್ಷರವಿದೆ. ಜರ್ಮನಿಯಲ್ಲಿ ಆದ್ದರಿಂದ ವೋಕ್ಸ್ ಎಂದರೆ ಜನ ಹಾಗೂ ವ್ಯಾಗನ್ ಎಂದರೆ ವಾಹನ ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ವೋಕ್ಸ್ ವ್ಯಾಗನ್ ಕಾರನ್ನು ಜನಸಾಮಾನ್ಯರ ಕಾರು ಎಂದು ಕರೆಯಲು ಅಡ್ಡಿಯಿಲ್ಲ ಎಂಬುದು ಆ ಕಂಪನಿಯ ಅಂಬೋಣ.

ಕೋಕೋ ಕೋಲಾ
ಸಾಫ್ಟ್ ಡ್ರಿಂಕ್ಸ್ ಹೆಸರು ಹೇಳಿದಾಕ್ಷಣ ನೆನಪಿಗೆ ಬರುವ ಹೆಸರು ಕೋಕ್. ಜಗತ್ತಿನಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಮಾರಾಟವಾಗುವ ತಂಪು ಪಾನೀಯಗಳ ಪಟ್ಟಿಯಲ್ಲಿ ಕೋಕಾ ಕೋಲಾಗೆ ಅಗ್ರಸ್ಥಾನ. ಹೆಚ್ಚು ಕಡಿಮೆ ವಿಶ್ವದ ಎಲ್ಲಾ ದೇಶಗಳಲ್ಲೂ ಕೋಕ್ ನ ಕಂಪು ಹರಡಿದೆ. ಕೋಕಾ ಕೋಲಾದ ಲೋಗೋದಲ್ಲಿ ಒಂದು ಬೃಹತ್ ಅಚ್ಚರಿ ಇದೆ ಎಂದರೆ ನೀವು ಅಚ್ಚರಿಪಡುತ್ತೀರಿ. ಯೆಸ್ ಅದರಲ್ಲಿ ಲೋಗೋದಲ್ಲಿ ವಿಭಿನ್ನ ಅಕ್ಷರದಲ್ಲಿ ಕೋಕಾ ಕೋಲಾ ಎಂದು ಬರೆಯಲಾಗಿದೆ. ಆದರೆ ಈ ತರಹ ಬರೆದಿರುವುದರಲ್ಲೂ ಒಂದು ಮರ್ಮ ಅಡಗಿದೆ. ಕೋಕ್ ನ ಲೋಗೋವನ್ನು ಹಿಮ್ಮುಕವಾಗಿ ಓದಿದಾಗ ಅರೇಬಿಕ್ ಭಾಷೆಯಲ್ಲಿ ನೋ ಮೊಹಮ್ಮದ್ ನೋ ಮೆಕ್ಕಾ ಅಂತ ಕಾಣಿಸುತ್ತದೆ. ಇದು ಮೊಹಮ್ಮದ್ ಪೈಗಂಬರ್ ಇಲ್ಲದೇ ಮೆಕ್ಕಾ ಕೂಡ ಇರುತ್ತಿರಲಿಲ್ಲ ಎಂದು  ಅರ್ಥೈಸುತ್ತದೆ.

ಪೆಪ್ಸಿ
ಕೋಲ್ಡ್ ಡ್ರಿಂಕ್ಸ್ ಎಂದರೆ ಪೆಪ್ಸಿ ಎನ್ನುವವರ ಸಂಖ್ಯೆ ಕಡಿಮೆಯೇನಿಲ್ಲ. ಜನಸಾಮಾನ್ಯರ ಆಹಾರದ ಭಾಗವಾಗಿರುವ ಪೆಪ್ಸಿ ವರ್ಷಕ್ಕೆ ಸುಮಾರು 8 ಬಿಲಿಯನ್ ಡಾಲರ್ ನಷ್ಟು ವಹಿವಾಟು ನಡೆಸುತ್ತದೆ. ಅಲ್ಲದೇ ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಪೆಪ್ಸಿ ತನ್ನ ವಹಿವಾಟು ನಡೆಸುತ್ತಿದೆ. ತಂಪುಪಾನಿಯ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ಪೆಪ್ಸಿ ತನ್ನ ಲೋಗೋದಿಂದಲೇ ಸುದ್ದಿಗೆ ಬಂದಿದೆ. ಪೆಪ್ಸಿ ಲೋಗೋ 2008 ತನಕ ಕೆಂಪು ಹಾಗೂ ನೀಲಿ ಬಣ್ಣದ ಬಾಲ್ ನಂತಿತ್ತು. ಈಗ ಅದರಲ್ಲಿ ಸ್ವಲ್ಪಮಟ್ಟದ ಬದಲಾವಣೆಯಾಗಿದೆ. ಈ ಲೋಗೋ ತಯಾರಿಸುವುದಕ್ಕೆ ಪೆಪ್ಸಿ ಕಂಪನಿ ಕನಿಷ್ಟ ಒಂದು ಮಿಲಿಯನ್ ಡಾಲರ್ ಖರ್ಚು ಮಾಡಿದೆಯಂತೆ. ಅದು ಡಾವಿಂಚಿಕೋಡ್ ನ ಮಾದರಿಯಂತಿದೆ ಅಂತ ಪೆಪ್ಸಿ ಹೇಳಿಕೊಂಡಿದೆ.

  •  ರಾ ಚಿಂತನ್.

POPULAR  STORIES :

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...