ಚಿಯಾನ್ ‘ವಿಕ್ರಮ್ 58’ ಎಂದು ಕರೆಯಲ್ಪಡುವ ಈ ಪ್ರಾಜೆಕ್ಟ್ ನಲ್ಲಿ ಶ್ರೀನಿಧಿ ವಿಕ್ರಮ್ ಅವರಿಗೆ ಜೋಡಿಯಾಗಿ ಕೆಜಿಎಫ್ ಕ್ಯಾತಿಯ ಶ್ರೀನಿಧಿ ಶೆಟ್ಟಿ ನಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ ಚಿತ್ರದಲ್ಲಿ ಪ್ರಿಯಾ ಭವಾನಿ ಶಂಕರ್ ಸಹ ಪ್ರಮುಖ ಪಾತ್ರಗಳಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ. ಚಿತ್ರವು ತಮಿಳು, ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದ್ದು, ವಯಾಕಾಮ್ 18 ಮೋಷನ್ ಪಿಕ್ಚರ್ಸ್ ಸಹಯೋಗದೊಂದಿಗೆ ಬೃಹತ್ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದೆ.