ಕಥೆಗಾರ `ಪ್ಲೀನಿ' ಸೃಷ್ಟಿಸಿದ ದೆವ್ವಗಳ ಜಗತ್ತು..!! `ಭೂತವಿಲ್ಲ… ಪಿಶಾಚಿಯಿಲ್ಲ..!!'

Date:

ಮಧ್ಯರಾತ್ರಿ..!
ಅದೆಲ್ಲೋ ನಾಯಿ ಕೂಗಾಡುತ್ತಿರುವ ಶಬ್ಧ. ಎದೆಯ ಲಯ ತಪ್ಪುವ ಹೊತ್ತಿಗೆ ಸರಿಯಾಗಿ ಗೂಬೆ ಊಳಿಡುತ್ತಿತ್ತು. ರಾತ್ರಿ ಹನ್ನೆರಡರ ನಂತರ ನಿರ್ಜನ ದಾರಿ ಇಷ್ಟೊಂದು ಭಯಾನಕವಾಗಿರುತ್ತಾ..? ತಪ್ಪು ಮಾಡಿದೆ ಎನಿಸುವಷ್ಟರಲ್ಲಿ ಹೆಜ್ಜೆಯ ಸಪ್ಪಳ. ಆ ಕ್ಷಣವೇ ಭೂಮಿ ಬಿರಿಯಬಾರದಿತ್ತೇ ಎನ್ನಿಸಿದ್ದು ಸುಳ್ಳಲ್ಲ. ಈ ಭಯದಲ್ಲೇ ಭಾರವಾದ ಹೆಜ್ಜೆಯೊಂದಿಗೆ ಮುಂದಡಿಯಿಡುವಷ್ಟರಲ್ಲಿ, ಯಾರೋ ಬಲವಾಗಿ ನನ್ನ ತಳ್ಳಿದ್ದರು. ಜೋರಾಗಿ ಕೂಗಿ ನಡುಗುತ್ತಿದ್ದ ನನ್ನನ್ನು ಸಂತೈಸುತ್ತಿತ್ತು ಹಲವಾರು ಕೈಗಳು. ಅದು ಕನಸು ಎಂದನಿಸುವಾಗ ನಾಚಿಕೆ, ಜೊತೆಗೆ ದಿಗಿಲು ನನ್ನನ್ನು ಅತಂತ್ರಗೊಳಿಸಿತ್ತು.

ನಿಜ, ಅದು ಭೀಭತ್ಸ ಕನಸು. ಆದರೆ ಆ ಕೆಟ್ಟ ಕನಸಿನಲ್ಲಿ ನನ್ನ ತಳ್ಳಿದ್ದು ಯಾರು…? ಅದ್ಯಾವ ಅತೀಂದ್ರಿಯ ಶಕ್ತಿ ನನ್ನ ಮೇಲೆ ದಾಳಿ ಮಾಡಿತ್ತು..? ಈ ಗೊಂದಲದಲ್ಲಿದ್ದ ನನಗೆ ಮತ್ತೊಂದು ರೀತಿಯ ಆತಂಕ ಶುರುವಾಗಿತ್ತು. ನಮ್ಮ ಕುಟುಂಬದಲ್ಲಿ ಘಟಿಸಿದ್ದ ಹಿರಿಯಕ್ಕನ ಸಾವು. ಅವಳು ದೆವ್ವವಾಗಿದ್ದಾಳಾ..? ಅಷ್ಟಕ್ಕೂ ನಿನ್ನೆ ರಾತ್ರಿ ಮಲಗಿದ್ದು ನಾನು ಇದೇ ಕೋಣೆಯಲ್ಲಿ. ಅಕ್ಕ- ನಾನು ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗುತ್ತಿದ್ದದ್ದು ಇದೇ ಕೋಣೆಯಲ್ಲಿ. ಎಕ್ಸ್ಯಾಕ್ಟ್ ಇದೇ ಮಂಚದಲ್ಲಿ. ಇದೇ ಫ್ಯಾನಿಗೆ ನೇಣು ಬಿಗಿದುಕೊಂಡು ಸತ್ತವಳು ದೆವ್ವವಾಗಿರಬಹುದಾ..? ಅವಳೇ ಕನಸಿನಲ್ಲಿ ಕಾಡಿರಬಹುದಾ..? ನಾಳೆ ನಿಜವಾಗಿ ನನ್ನ ಹಿಂಸಿಸುತ್ತಾಳಾ..?

ಅವಳು ಮನಸ್ವಿನಿ. ಅವಳ ಅಂತರಂಗದಲ್ಲಿ ದೆವ್ವ ಭೂತದ ಸ್ಪಷ್ಟ ಪರಿಕಲ್ಪನೆ ಮೂಡಿತ್ತು. ಅಕ್ಕನ ಸಾವು ಅವಳ ಅಂತರಂಗದಲ್ಲಿ ಯಾವ ಪರಿ ಆವರಿಸಿತ್ತೆಂಬುದಕ್ಕೆ ಮನಸ್ವಿನಿಯ ಆತಂಕಕ್ಕಿಂತ ಬೇರೆ
ದೃಷ್ಟಾಂತವಿರಲಿಲ್ಲ. ಹಾಗಾದ್ರೇ ದೆವ್ವ ಇದೆಯಾ..? ಅದಕ್ಕೆ ಉತ್ತರ ಅವಳ ತುಮುಲಗಳಲ್ಲೇ ಅಡಕವಾಗಿದೆ. ಹೌದು. ದೆವ್ವಗಳು ಸತ್ಯವಾಗಿಯೂ ಇರಲ್ಲ. ಅದೆಲ್ಲ ಕೇವಲ ಕಟ್ಟುಕಥೆಗಳು. ನಾವೇನು ಅಂದುಕೊಳ್ಳುತ್ತೀವೋ ಅದನ್ನ ನಮ್ಮ ಮೆದುಳು ಕಲ್ಪಿಸಿಕೊಳ್ಳುತ್ತೆ. ಗಂಡು ದೆವ್ವಗಳಿವೆಯಾ ಅಂತ ನೀವೇ ಒಂದು ಬಾರಿ ಯೋಚನೆ ಮಾಡಿ ನೋಡಿ. ದೆವ್ವಗಳಿರೋದೆ ನಿಜವಾದರೆ ಗಂಡಸರಿಗೆ ಯಾಕೆ ಕಾಡೋದಿಲ್ಲ. ಒಂದು ಪಕ್ಷ ಆ ತರಹದ ಸುದ್ದಿಗಳೇನಾದರೂ ನೀವು ಕೇಳಿದ್ದರೆ ಕೇವಲ ಹೆಣ್ಣು ದೆವ್ವ ಮಾತ್ರ ಅವರಲ್ಲಿ ಮೆಟ್ಟಿಕೊಂಡಿರುತ್ತೆ ಅಂತ ಹೇಳಿರುತ್ತಾರೆ. ನಮ್ಮ ಪ್ರಶ್ನೆ ತುಂಬಾ ಸಿಂಪಲ್ ಕೇವಲ ಹೆಣ್ಣು ದೆವ್ವಗಳು ಮಾತ್ರ ಯಾಕಿರಬೇಕು? ಪ್ರತಿಯೊಂದಕ್ಕೂ ವೈಜ್ಞಾನಿಕವಾಗಿ ಯೋಚನೆ ಮಾಡುವ ಈ ಕಾಲದಲ್ಲಿ ಈ ತರಹದವರು ಬಹುತೇಕರಿದ್ದಾರೆ.

ಅಷ್ಟಕ್ಕೂ ದೆವ್ವಗಳ ಸಿನಿಮಾಗಳು ಬಂದಿರುವುದು ಅದನ್ನ ಜಸ್ಟ್ ಎಂಜಾಯ್ ಮಾಡೋಕಷ್ಟೆ. ಆದ್ದರಿಂದ ಇನ್ಮುಂದೆ ಇಂತ ವಿಷಯಗಳನ್ನು ನಂಬುವದನ್ನು ಬಿಟ್ಟು ಅಂತಹ ಕಥೆಗಳೇನಾದರೂ ನಿಮಗೆ ಕೇಳಿ ಬಂದರೆ ಹೆದರುವುದನ್ನು ಬಿಟ್ಟು ಸುಮ್ಮನೆ ಕೇಳಿ ಮಜಾ ತಗೊಳ್ಳಿ. ಅದೆಷ್ಟೇ ರಾತ್ರಿಯಿದ್ದರೂ ಒಬ್ಬರೇ ಓಡಾಡಿ ( ಕಳ್ಳರ ಬಗ್ಗೆ ಎಚ್ಚರ ). ಅಕಸ್ಮಾತ್ತಾಗಿ ಯಾರಾದರೂ ಪರಿಚಯಸ್ತರು ಸಿಕ್ಕರೆ ಹರಟೆ ಹೊಡಿಯುವ ನಾವು, ನಾಯಿ ಕೂಗಿದರೆ, ಗೂಬೆ ಎಲ್ಲಾದ್ರು ಕುಳಿತಿದ್ದರೆ ಯಾಕೆ ಹೆದರಬೇಕು ಹೇಳಿ..? ಪಾಪ ಅವುಗಳು ಏನು ಮಾಡುತ್ತವೆ..? ಈ ವಿಶಾಲವಾದ ಪರಿಸರದಲ್ಲಿ ಅವುಗಳೂ ಓಡಾಡಿಕೊಂಡು ಇರಲಿ. ಮನುಷ್ಯರು ಸತ್ತಮೇಲೆ, ಬದುಕಿದ್ದಾಗ ಬಾಕಿಯಿರಿಸಿಕೊಂಡ ಆಸೆಗಳನ್ನು ತೀರಿಸಿಕೊಳ್ಳಲು ದೆವ್ವವಾಗಿ ಬರ್ತಾರೆ ಎಂಬ ಕೆಟ್ಟ ನಂಬಿಕೆಯಿದೆ. ಬದುಕಿದ್ದಾಗಲೇ ಏನೂ ಮಾಡೋದಕ್ಕೆ ಆಗದವನು ಇನ್ನು ಸತ್ತ ಮೇಲೆ ಬಂದು ಆಸೆ ತೀರಿಸಿಕೊಳ್ಳುತ್ತಾನಾ..? ಹಂಗೇನಾದ್ರೂ ನಡೆಯೋ ಹಾಗಿದ್ರೆ ಇಡೀ ಜಗತ್ತನ್ನೇ ಗೆಲ್ಲಲು ಹೊರಟಿದ್ದ ಅಲೆಗ್ಸಾಂಡರ್ ಸತ್ತ ಮೇಲೂ ದೆವ್ವವಾಗಿ ಬಂದು ದಾಳಿಮಾಡಬಹುದಿತ್ತಲ್ವಾ..? ಬಹುಮನಿ ರಾಜ ಸತ್ತ ನಂತರ ಅರ್ಧಕ್ಕೆ ಸ್ಥಗಿತಗೊಂಡ ವಿಜಾಪುರದ ಇತಿಹಾಸಕ್ಕೆ ಪೂರಕವಾಗಬೇಕಿದ್ದ ಬಾರಾ ಕಮಾನ್ ಅನ್ನು ಆ ಬಹಮನಿ ರಾಜ ಸತ್ತಮೇಲೆಯಾದ್ರೂ ದೆವ್ವವಾಗಿ ಬಂದು ಪೂರ್ಣಗೊಳಿಸಬಹುದಿತ್ತಲ್ವಾ..? ಇವೆಲ್ಲ ಸಣ್ಣ ಎಕ್ಸಾಂಪಲ್ಗಳಷ್ಟೆ..!

ಇವೆಲ್ಲ `ಜನ ಮರುಳೋ, ಜಾತ್ರೆ ಮರುಳೋ’ ಎಂಬಂತಿದೆ. ಯಾವತ್ತೋ ಒಂದು ದಿನ ಸುಮ್ಮನೆ ಕುಳಿತು ನೆಟ್ ಬ್ರೌಸ್ ಮಾಡುತ್ತಿರುವಾಗ ಗೂಗಲ್ ತಾಣದಲ್ಲಿ ಆರ್ಟಿಕಲ್ ನೋಡಿದೆ. ಏನೋ ಇಂಟ್ರೆಸ್ಟಿಂಗ್ ಇದೆ ಅಂತ ಕುಳಿತು ಓದಿ ಮುಗಿಸಿದ ಮೇಲೆ ನನಗೆ ನಿಜವಾಗಿಯೂ ನಗಬೇಕೋ, ಅಳಬೇಕೋ ಗೊತ್ತಾಗ್ಲಿಲ್ಲ. ನಮಗೆ ಬೇಕಾಗಿರುವ ಏಲ್ಲಾ ಮಾಹಿತಿಗಳನ್ನು ಕೊಡುವ ಗೂಗಲ್, ಒಂದೇ ಬಾರಿ ಸರಿಸುಮಾರು ಎಂಬತ್ತು ಲಕ್ಷಕ್ಕೂ ಹೆಚ್ಚು ದೆವ್ವವಿರುವ; ಅದರಲ್ಲಿಯೂ ಐನ್ ಸ್ಟೀನ್ ಥಿಯರಿ “ಸಾಪೇಕ್ಷಿತ ಸಿದ್ಧಾಂತ”ಕ್ಕೆ ಲಿಂಕ್ ಇದೆಯಂದು ಮಾಹಿತಿಯನ್ನು ಕೊಡುತ್ತಿತ್ತು.

ಐನ್ ಸ್ಟೀನ್ `ಶಕ್ತಿಯನ್ನು ಸೃಷ್ಟಿಸಲು ಆಗೋದಿಲ್ಲ, ಅಳಿಸಲೂ ಆಗುವುದಿಲ್ಲ. ಆದರೆ ಅದನ್ನು ಒಂದರಿಂದ ಇನ್ನೊಂದಕ್ಕೆ ಪರಿವರ್ತಿಸಬಹುದು ಅಂದಿದ್ದರು. ಅದನ್ನೆ ಕಾನ್ಸೆಪ್ಟಾಗಿ ಇಟ್ಟುಕೊಂಡು ಕೆಲ ವಿಜ್ಞಾನಿಗಳು ಮತ್ತಷ್ಟು ಮರ್ಮಗಳನ್ನು ಕಂಡುಹಿಡಿದರು. `ಮನುಷ್ಯರು ಸತ್ತುಹೋದ ಮೇಲೆ ಅವರ ದೇಹದಲ್ಲಿರುವ ವಿದ್ಯುತ್ ತರಂಗಗಳು ಪ್ರಕೃತಿಯಲ್ಲಿ ಸೇರಿಕೊಳ್ಳುತ್ತವೆ. ಹೆಚ್ಚಾಗಿ ಸಸ್ಯಗಳು ಆ ತರಂಗಗಳನ್ನು ಸೆಳೆದುಕೊಳ್ಳುತ್ತವೆ. ಅದನ್ನೇ ನಾವು ಸೇವಿಸಿದಾಗ ಅದರಲ್ಲಿದ್ದ ಆ ಶಕ್ತಿಗಳು ತಮಗಿಷ್ಟ ಬಂದ ಹಾಗೆ ನಮ್ಮಲಿರುವ ಯೋಚನೆಗಳನ್ನೇ ಬದಲಾಯಿಸಿಬಿಡುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಇದು ನಿಜವಾಗಿಯೂ ಆಗುವ ಹಾಗಿದ್ದರೆ ಜನರ ಯೋಚನೆಗಳು ಯಾಕೆ ಇನ್ನೂ ಬದಲಾಗಿಲ್ಲ? ಆ ಮಹಾನ್ ವಿಜ್ಞಾನಿಯನ್ನು ದೆವ್ವದ ಸೃಷ್ಟಿಕರ್ತ ಎಂದು ಹೇಳಿ ಬಿಡೋಣವೇ?? ಅಥವಾ ಆಗಲೇ ಆಟಂಬಾಂಬ್ ತಯಾರಿಸಿ ಅಪಕೀರ್ತಿಗೊಳಗಾಗಿದ್ದ ಅವರನ್ನ ಮತ್ತೂಮ್ಮೆ ಸುದ್ದಿಗೊಳಗಾಗುವಂತೆ ಮಾಡಬೇಕಾ?

ಇನ್ನೊಂದು ಇಂಟ್ರೆಸ್ಟಿಂಗ್ ಸ್ಟೋರಿ ನಾನು ನಿಮಗೆ ಹೇಳಲೇಬೇಕು. ಜಗತ್ತಿನಲ್ಲಿ ಮುಂದುವರೆದ ರಾಷ್ಟ್ರವೆನಿಸಿಕೊಂಡಿರುವ ಹಾಗೂ ವಿಶ್ವಕ್ಕೆ “ಹಿರಿಯಣ್ಣ” ಎನಿಸಿಕೊಂಡಿರುವ ಅಮೆರಿಕಾದಲ್ಲೇ ಅತೀ ಹೆಚ್ಚು ದೆವ್ವಗಳನ್ನು ನಂಬುತ್ತಾರೆ. ಅಷ್ಟೇ ಯಾಕೆ, ಸ್ವತಃ ಅಮೆರಿಕಾದ ಮಾಜಿ ಅಧ್ಯಕ್ಷ `ಅಬ್ರಹಾಂ ಲಿಂಕನ್’ ಕೂಡ ದೆವ್ವವಾಗಿ ವೈಟ್ ಹೌಸ್ ನಲ್ಲಿ ನೆಲೆಸಿದ್ದಾರೆ, ಪ್ರತೀರಾತ್ರಿ ಅವರು ತಮ್ಮ ಕೋಣೆಯಲ್ಲಿ ಪ್ರತ್ಯಕ್ಷರಾಗುತ್ತಾರೆ ಎಂದು ಬಲವಾಗಿ ನಂಬುವ ಅದೆಷ್ಟೋ ಅಧಿಕಾರಿಗಳಿಗಳಿದ್ದಾರೆ. ಆದರೆ ನನ್ನ ಪ್ರಕಾರ ಲಿಂಕನ್ ರವರಿಗೆ ಅದೆಷ್ಟೋ ವಿರೋಧಿಗಳಿದ್ದುದ್ದರಿಂದ, ಅವರ ಅಪಪ್ರಚಾರಕ್ಕಾಗಿ ಈ ಕತೆ ಹುಟ್ಟಿಹಾಕಿರಬಹುದು. ಎಲ್ಲಿವರೆಗೂ ನಂಬುವವರಿತ್ತಾರೋ, ಅಲ್ಲಿವರೆಗೂ ಮೋಸ ಮಾಡುವವರಿರುತ್ತಾರೆ. ಮತ್ತದೇ ನಿಜ.

ಇಷ್ಟೆಲ್ಲಾ ಓದಿದ ಮೇಲೆ ಇಂತ ಕಥೆಗಳು ಹೇಗೆ ಹುಟ್ಟಿಕೊಂಡವು ಅಂತ ನಿಮಗೇನಾದರೂ ಅನುಮಾನವಿದ್ದರೆ ಇದನ್ನ ಜಸ್ಟ್ ಓದಿ ಬಗೆಹರಿಸಿಕೊಳ್ಳಿ. ಬಹುಶಃ ಬೈಬಲ್ ಬಂದಾಗಿನಿಂದಲೂ ದೆವ್ವಗಳ ಕಥೆಗಳಿದ್ದರೂ, ಇವುಗಳು ಕ್ರಿಸ್ತಪೂರ್ವದಲ್ಲಿ ಫೇಮಸ್ ಆಗಿದ್ದವು. ಆಗಿನ ಬರಹಗಾರ `ಪ್ಲೀನಿ’ಯ ಕಥೆಗಳು ಇವುಗಳಿಗೆ ಪುಷ್ಠಿ ನೀಡುತ್ತವೆ. ಪ್ಲೀನಿ, ತನ್ನ ಮನೆಯಲ್ಲಿ ವಿಚಿತ್ರವಾದ ಉದ್ದುದ್ದದ ಗಡ್ಡಬಿಟ್ಟು, ಮೈತುಂಬಾ ಸರಪಳಿಗಳನ್ನು ಕಟ್ಟಿಕೊಂಡು ಓಡಾಡುತ್ತಿರುವ ದೆವ್ವದ ಬಗ್ಗೆ ಕಥೆ ರೂಪಿಸಿದ್ದ. ಆಗಿನಿಂದ ಈ ತರಹದ ಕಥೆಗಳನ್ನು ನಾವು ಬರೆಯಬಹುದು ಎಂದು ಜನರಿಗನಿಸಿತ್ತು. ಸೋ ಇವನೇ ದೆವ್ವಗಳ ಸೃಷ್ಠಿಕರ್ತ ಎಂದೇ ನೀವು ಕರೆಯಬಹುದು. ಇನ್ನು ಎರಡು ವಿಶ್ವ ಯುದ್ದಗಳು ಮುಗಿದ ನಂತರ ಈ ರೀತಿಯ ಕಥೆಗಳು ಮತ್ತಷ್ಟು ಜನಪ್ರಿಯವಾದವು. ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಅದೆಷ್ಟೋ ಯೋಧರಿಗೆ ಬದುಕೋ ಆಸೆಯಿತ್ತು, ಅವ್ರೆಲ್ಲಾ ಸಡನ್ನಾಗಿ ಸತ್ತಿದ್ದಕ್ಕೆ ದೆವ್ವಗಳಾಗಿದ್ದಾರೆ ಎಂದು ವದಂತಿಗಳು ಹುಟ್ಟಿಕೊಂಡವು. ಇವುಗಳೇ ಮುಂದೆ ಸಿನಿಮಾಗಳಾದವು. ವಿಜ್ಞಾನದಲ್ಲಿ ಒಂದು ಸಿದ್ದಾಂತವಿದೆ. ನಾವು ಯಾವುದನ್ನ ಕಣ್ಣಿನಿಂದ ನೋಡಿರುತ್ತೀವೋ, ಅಂತಹ ವಿಚಾರಗಳು ನಮ್ಮ ಮೆದುಳಿನಲ್ಲಿ ಅತೀ ಹೆಚ್ಚು ಕಾಲ ನೆನಪಲ್ಲಿ ಉಳಿಯುತ್ತವೆ. ಹೀಗಾಗಿ ಇಂಥಹ ದೃಶ್ಯಗಳು ಪರದೆಯಲ್ಲೋ, ಟಿವಿಯಲ್ಲೋ ನೋಡಿದ ಜನರಿಗೆ ಕಣ್ಣು ಕಟ್ಟಿದಂತಾಗಿ ತಮ್ಮ ತಮ್ಮ ಇಮ್ಯಾಜಿನೇಷನ್ಗೆ ತಕ್ಕಂತೆ ದೆವ್ವಗಳಿಗೆ ಆಕಾರ ಕೊಟ್ಟಿದ್ದಾರೆ; ಕೊಡುತ್ತಲೇ ಇದ್ದಾರೆ.

  • ರಾ ಚಿಂತನ್, ವಿಶ್ವ

POPULAR  STORIES :

ನೋ ಮೊಹಮ್ಮದ್.. ನೋ ಮೆಕ್ಕಾ..!! ಲೋಗೊವೇ ಲೋಕಾ..!!?

ನೀವು ಸಾಹಸಪ್ರಿಯರಾ..? ಧಮ್ ಇದ್ರೇ ಟ್ರೈ ಮಾಡಿ..!?

9,50,00,000 ಬೆಲೆಯ ಆ್ಯಪ್ ನ 4 ನಿಮಿಷದಲ್ಲಿ ಅಭಿವೃದ್ಧಿ ಪಡಿಸಿದ ಭಾರತೀಯ..!

ಸ್ಯಾಂಡಲ್ ವುಡ್ ನಲ್ಲಿ ಅಪ್ಪ ಮಗನ ನಡುವೆ ಪೈಪೋಟಿ ಶುರುವಾಗಲಿದೆ..!

ಐಪಿಎಲ್ ಸೀಸನ್ 9ರಲ್ಲಿ ಪ್ರೇಕ್ಷಕನೇ 3ನೇ ಅಂಪೈರ್ ಅಂತೆ..!

ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?

ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!

`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...