ಬದುಕುವುದು ಕನ್ನಡ ನಾಡಲ್ಲಿ, ತಿನ್ನುವುದು ಕನ್ನಡದ ಅನ್ನ, ಕುಡಿಯುವುದು ಕನ್ನಡದ ನೀರು. ಆದರೆ ಒಂದಿಷ್ಟು ಮಂದಿಗೆ ಕನ್ನಡ ಬೇಡ..! ಪರ ರಾಜ್ಯಗಳಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿರುವವರ ಕಥೆ ಬಿಟ್ಟಾಕಿ. ನಮ್ಮ ಕನ್ನಡದವರಿಗೇ ಕನ್ನಡ ಅಂದ್ರೆ ತಾತ್ಸಾರವಾಗಿ ಬಿಟ್ಟಿದೆ. ಅದರಲ್ಲೂ ನಮ್ಮ ರಾಜಧಾನಿ ಬೆಂಗಳೂರಲ್ಲಿ ಯಾವ್ದೇ ಅಂಗಡಿ ತೆಗೆದುಕೊಂಡರೂ ಬರೀ ಆಂಗ್ಲಮಯ! ಎಷ್ಟೋ ಅಂಗಡಿಗಳ ನಾಮಫಲಕಗಳು ಕನ್ನಡದಲ್ಲಿಲ್ಲ..! ಕೆಲವೊಮ್ಮೆ ನಿಜಕ್ಕೂ ನಾವು ಕರ್ನಾಟಕದಲ್ಲೇ ಇದ್ದೀವಾ ಅನಿಸಿಬಿಡುತ್ತೆ. ಹೊರ ರಾಜ್ಯಗಳಿಂದ ಬಂದವರೂ ಕೂಡ ಕನ್ನಡ ಬೋರ್ಡು ಕಾಣದೆ.. ಅರೆ, ನಾವು ಕರ್ನಾಟಕಕ್ಕೆ ಬಂದ್ವಾ? ಅಂತ ಪ್ರಶ್ನೆಯನ್ನು ಕೇಳಿಕೊಂಡರೂ ಅಚ್ಚರಿ ಇಲ್ಲ.
ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕನ್ನಡ ಭಾಷೆಯ ಬಳಕೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಹತ್ವದ ಆದೇಶ ಹೊರಡಿಸಿದೆ. ನವೆಂಬರ್ 1ರಿಂದ ನಗರದ ಪ್ರತೀ ಅಂಗಡಿ -ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲೇ ಇರಬೇಕು ಎಂದು ಬಿಬಿಎಂಪಿ ಆಯುಕ್ತ ಬಿ ಎಚ್ ಅನಿಲ್ ಕುಮಾರ್ ಆದೇಶಿಸಿದ್ದಾರೆ.
ಕನ್ನಡದಲ್ಲಿ ನಾಮಫಲಕ ಕಾಣದೇ ಇದ್ದರೆ ಉದ್ದಿಮೆಗಳು, ಅಂಗಡಿ ಮೊದಲಾದ ವಾಣಿಜ್ಯ ಕಟ್ಟಡಗಳ ಟ್ರೇಡ್ ಲೈಸೆನ್ಸ್ ರದ್ದುಗೊಳಿಸುವುದುಆಗಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಕನ್ನಡ ಬೋರ್ಡಿಲ್ಲ ಅಂತಾದ್ರೆ ನಿಮ್ಮ ಅಂಗಡಿ ಎತ್ತಂಗಡಿ!
Date: