ನಿರ್ದೇಶಕ ಪಿ ವಾಸು ಅವರು ಈ ಹಿಂದೆ ಶಿವಲಿಂಗ ಎಂಬ ಚಿತ್ರವನ್ನು ಶಿವಣ್ಣ ಅವರಿಗೆ ನಿರ್ದೇಶನ ಮಾಡಿ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಅನ್ನು ನೀಡಿದ್ದರು.ಇನ್ನು ಅದೇ ಜೋಡಿ ಇದೀಗ ಮತ್ತೆ ಬರುತ್ತಿದ್ದು ಆಯುಷ್ಮಾನ್ ಭವ ಎಂಬ ಟೈಟಲ್ನೊಂದಿಗೆ ಇದೆ ಕನ್ನಡ ರಾಜ್ಯೋತ್ಸವ ದಿಂದ ದೊಡ್ಡ ತೆರೆಯ ಮೇಲೆ ರಾರಾಜಿಸಲಿದೆ. ಇನ್ನು ಈ ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ಅವರು ಕಾಣಿಸಿಕೊಂಡಿದ್ದು ಇತ್ತೀಚೆಗಷ್ಟೆ ನಡೆದ ಪ್ರೆಸ್ ಮೀಟ್ ಸಂದರ್ಭದಲ್ಲಿ ಈ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ ಪ್ರೇಕ್ಷಕರಿಂದ ಇದಕ್ಕೆ ಕೆಟ್ಟ ಅಥವಾ ಒಳ್ಳೆಯ ಅಭಿಪ್ರಾಯ ಬಂದರೆ ಅದಕ್ಕೆ ಪಿ ವಾಸು ಅವರೇ ಹೊಣೆ ಎಂದು ಹೇಳಿದರು.
ಇನ್ನು ರಚಿತಾ ರಾಮ್ ಅವರ ಈ ಹೇಳಿಕೆಯಿಂದ ಕೋಪಗೊಂಡಿರುವ ಪಿ ವಾಸು ಅವರು ಇತ್ತೀಚೆಗಷ್ಟೇ ನಡೆದ ಮತ್ತೊಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಚಿತಾ ಅವರು ನನ್ನ ಬಗ್ಗೆ ಈ ರೀತಿ ಮಾತನಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ ಅವರ ನಟನೆಯ ಬಗ್ಗೆ ನಾನೆಂದೂ ಆಕ್ಷೇಪ ವ್ಯಕ್ತಪಡಿಸಿಲ್ಲ ಚಿತ್ರದಲ್ಲಿನ ಅವರ ಪಾತ್ರವನ್ನು ಜನ ಖಂಡಿತಾ ಮೆಚ್ಚಿಕೊಳ್ಳುತ್ತಾರೆ ಎಂದು ರಚಿತಾ ಅವರ ವಿರುದ್ಧ ತಮ್ಮ ಕೋಪವನ್ನು ಹೊರಹಾಕಿದರು.