ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರು ಈ ಹಿಂದೆ ಯುವ ದಸರಾ ವೇದಿಕೆಯ ಮೇಲೆ ಪ್ರೇಮ ನಿವೇದನೆ ಮಾಡಿಕೊಳ್ಳುವುದರ ಮೂಲಕ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ ಈ ವಿವಾದ ತಣ್ಣಗಾಗಿದ್ದೇ ತಡ ಸಾಂಪ್ರದಾಯಿಕವಾಗಿ ಇಂದು ಮೈಸೂರಿನಲ್ಲಿ ಅವರು ಕುಟುಂಬದ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದು ಯುವ ದಸರಾ ವೇದಿಕೆ ಮೇಲೆ ಜನರ ಮುಂದೆ ನಾವು ಪ್ರಪೋಸ್ ಮಾಡಿಕೊಂಡರೆ ಒಳ್ಳೆಯದು ಎಂಬ ಉದ್ದೇಶದಿಂದ ಪ್ರಪೋಸ್ ಮಾಡಿದ್ದೆ ಎಂದು ಹೇಳಿಕೊಂಡಿದ್ದರು ಚಂದನ್ ಶೆಟ್ಟಿ.
ಅಂದು ಜನರ ಆಶೀರ್ವಾದ ಸಿಗಲಿ ಎಂದು ಜನರ ಮುಂದೆ ಪ್ರೇಮ ನಿವೇದನೆ ಮಾಡಿದ್ದ ಚಂದನ್ ಶೆಟ್ಟಿ ಅವರು ಇಂದು ನಿಶ್ಚಿತಾರ್ಥವನ್ನು ಸಾಮಾನ್ಯ ಜನರಿಗೆ ತಿಳಿಸದೆ ಯಾವ ಸಾಮಾನ್ಯ ಜನರನ್ನು ಸಹ ಕರೆಯದೆ ತಮ್ಮ ಪಾಡಿಗೆ ತಾವು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ , ಈಗ ನಿಮಗೆ ಜನ ಬೇಡ್ವಾ ಸ್ವಾಮಿ ಎಂದು ನೆಟ್ಟಿಗರು ಚಂದನ್ ಶೆಟ್ಟಿ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಹೌದು ಅಂದು ಜನರ ಮುಂದೆ ಪ್ರಪೋಸ್ ಮಾಡಿದರೆ ಒಳ್ಳೆಯದು ಎಂದು ಪ್ರಪೋಸ್ ಮಾಡಿದ್ರಿ ಇಂದು ನಿಶ್ಚಿತಾರ್ಥ ಮಾಡಿಕೊಳ್ಳುವಾಗ ಜನ ಬೇಡ್ವಾ? ಈಗ ಜನರ ಆಶೀರ್ವಾದ ಬೇಡ್ವಾ ? ಒಂದೊಳ್ಳೆ ಪ್ರಚಾರಕ್ಕೋಸ್ಕರ ವೇದಿಕೆ ಬಳಸಿಕೊಂಡಿದ್ರಿ ಎಂದು ಜನ ಕಿಡಿಕಾರುತ್ತಿದ್ದಾರೆ.