ದಿ ಆಂಟ್ಸ್’ ಒಂದು ನ್ಯಾಯೋಚಿತ ವ್ಯಾಪಾರ ಸಂಸ್ಥೆ. ಈಶಾನ್ಯ ರಾಜ್ಯಗಳ ಮಹಿಳೆಯರು ತಯಾರಿಸಿದ ಸಗಟು ಉತ್ಪನ್ನಗಳನ್ನು ದಿ ಆಂಟ್ಸ್’ ಮಾರಾಟ ಮಾಡ್ತಿದೆ. ಬೆಂಗಳೂರಿನಲ್ಲಿ ದಿ ಆಂಟ್ಸ್ ಕೆಫೆ’ ಕೂಡ ಇದೆ. 14 ವರ್ಷಗಳ ಹಿಂದೆ ಸುನಿಲ್ ಕೌಲ್, ಮತ್ತವರ ಪತ್ನಿ ಜೆನ್ನಿಫರ್ ಲಿಯಾಂಗ್ ಹಾಗೂ ದಿವಂಗತ ರವೀಂದ್ರನಾಥ್ ಉಪಾಧ್ಯಾಯ ದಿ ಆಂಟ್’ ಅನ್ನು ಆರಂಭಿಸಿದ್ರು.
ಅಸ್ಸಾಂ ರಾಜ್ಯದ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳತ್ತ ಈ ಸಂಸ್ಥೆ ಹೆಚ್ಚಿನ ಗಮನಹರಿಸುತ್ತಿತ್ತು. ಆದ್ರೆ ಈಶಾನ್ಯ ಭಾರತದ ಅಭಿವೃದ್ಧಿಗಾಗಿ ಇನ್ನೇನಾದ್ರೂ ಮಾಡಲೇಬೇಕೆಂದು ದಿ ಆಂಟ್ ತಂಡಕ್ಕೆ ಅನಿಸಿತ್ತು. ತಪ್ಪು ಗ್ರಹಿಕೆ ಮತ್ತು ಬಡತನದಿಂದಾಗಿ ಈ ಪ್ರದೇಶ ರಾಜಕೀಯ ಮತ್ತು ಆರ್ಥಿಕ ಪ್ರತ್ಯೇಕತೆಗೆ ಗುರಿಯಾಗಿದೆ ಎಂಬುದನ್ನು ಅರ್ಥಮಾಡಿಕೊಂಡ ಪ್ರದೀಪ್ ಕೃಷ್ಣಪ್ಪ ಹಾಗೂ ಸ್ಮಿತಾ ಮೂರ್ತಿ 2002ರಲ್ಲಿ . ಕೊಂಚ ಬಂಡವಾಳ ಹಾಕಿ ದಿ ಆಂಟ್ಸ್’ ಸಂಸ್ಥೆಯನ್ನು ಕಟ್ಟಿದ್ರು.
ಈಶಾನ್ಯ ರಾಜ್ಯದಲ್ಲಿ ಅಡಗಿರುವ ಸಂಸ್ಕೃತಿಯನ್ನು ಭಾರತ ಹಾಗೂ ಇಡೀ ವಿಶ್ವಕ್ಕೆ ತೋರಿಸಿಕೊಡುವ ಉದ್ದೇಶ ಇವರದ್ದಾಗಿತ್ತು. ಈಶಾನ್ಯ ರಾಜ್ಯಗಳಲ್ಲಿ ಕೃಷಿಯನ್ನು ಬಿಟ್ರೆ ಜನರು ಹೆಚ್ಚು ಅವಲಂಬಿತರಾಗಿರೋದು ಕರಕುಶಲ ಕಲೆಗಳ ಮೇಲೆ. ಆದ್ರೆ ಕುಶಲಕರ್ಮಿಗಳಿಗೆ ತಮ್ಮ ರಾಜ್ಯವನ್ನು ಹೊರತುಪಡಿಸಿದ್ರೆ ಬೇರೆಡೆಗೆ ಮಾರ್ಕೆಟಿಂಗ್ಗೆ ಅವಕಾಶ ಸಿಗುತ್ತಿಲ್ಲ. ಈಶಾನ್ಯ ರಾಜ್ಯಗಳ ಕುಶಲಕರ್ಮಿಗಳಿಗೆ ಗುಣಮಟ್ಟದ ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಿಕೊಡಲು ದಿ ಆಂಟ್ಸ್’ ಮುಂದಾಗಿದೆ.
ದಿ ಆಂಟ್ಸ್’ ಅತ್ಯಲ್ಪ ಅವಧಿಯಲ್ಲೇ ಒಂದು ಸಮಾಜವಾಗಿ ಪರಿವರ್ತಿತವಾಗಿದೆ. ನೇಕಾರ ಮಂಡಳಿಯ ಮಹಿಳೆಯರು ತಾವು ತಯಾರಿಸುವು ಉತ್ಪನ್ನಗಳ ಬಗೆಯನ್ನು ಗುರುತಿಸಲು ಬಯಸಿದ್ರು. ಹಾಗಾಗಿ ದಿ ಆಂಟ್ಸ್’ ಸಮಿತಿ ಈ ಎಲ್ಲ ಪ್ರಕ್ರಿಯೆಗಳು ಸರಾಗವಾಗಿ ನಡೆಯುವಂತೆ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಸಮಾಜ ಆಧರಿತ ಮಾದರಿಯನ್ನಿಟ್ಟುಕೊಂಡೇ ಹೊಸ ಆರ್ಡರ್ ಪಡೆಯಲು ಮತ್ತು ಸರಿಯಾದ ಘಟಕ ಹೊಂದಲು 2005ರಲ್ಲಿ ದಿ ಆಂಟ್ಸ್’ ಯೋಜನೆ ಹಾಕಿಕೊಂಡಿತ್ತು.
ಆರಂಭದಲ್ಲಿ 500 ಮಹಿಳೆಯರು ದಿ ಆಂಟ್ಸ್’ ಜೊತೆಗೆ ಕೆಲಸ ಮಾಡ್ತಿದ್ರು. ಅಧಿಕ ಸಂಖ್ಯೆಯಲ್ಲಿರೋದ್ರಿಂದ ಅವರಿಗೆ ನಿರಂತರವಾಗಿ ಕೆಲಸ ಸಿಗುತ್ತಿರಲಿಲ್ಲ. ಈಗ ಖಾಯಂ ಸದಸ್ಯರ ಸಂಖ್ಯೆಯನ್ನು ನೂರಕ್ಕೆ ಇಳಿಸಲಾಗಿದೆ. ವಸತಿ ರಹಿತ ಮಹಿಳೆಯರಿಗೆ ಕೂಡ ದಿ ಆಂಟ್ಸ್ ನೆರವಿನ ಹಸ್ತ ಚಾಚಿದೆ. ಸ್ವಂತವಾಗಿ ಉತ್ಪನ್ನ ತಯಾರಿಸಲು ಮಹಿಳೆಯರು ಆರಂಭಿಸಿದ ಮೇಲೆ, ಅವರ ಹೂಡಿಕೆ ಮತ್ತು ಬದ್ಧತೆ ಸಮರ್ಥನೀಯ ವ್ಯಾಪಾರಕ್ಕೆ ಆಧಾರವಾಗಿದ್ಯಾ ಅನ್ನೋದನ್ನು ಕೂಡ ದಿ ಆಂಟ್ಸ್’ ಗಮನಿಸುತ್ತದೆ.
ಇನ್ನು ಬೇಡಿಕೆ ನಿರಂತರವಾಗಿರಲಿ ಎಂಬ ಕಾರಣಕ್ಕೆ ದಿ ಆಂಟ್ಸ್’ 2007ರಲ್ಲಿ ಬೆಂಗಳೂರಲ್ಲಿ ಮಳಿಗೆಯೊಂದನ್ನು ತೆರೆದಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿದ್ದು, ಇಲ್ಲಿರುವ ಸುಶಿಕ್ಷಿತರು ಈಶಾನ್ಯ ರಾಜ್ಯದ ಕುಶಲಕರ್ಮಿಗಳ ಕಲೆಯನ್ನು ಪ್ರೋತ್ಸಾಹಿಸುತ್ತಾರೆ ಎಂಬ ನಂಬಿಕೆ ಪ್ರದೀಪ್ ಅವರದ್ದು. ರಿಸೆಶನ್ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟಿನಿಂದ ಬಳಲಿದ್ದ ದಿ ಆಂಟ್ಸ್ ಈಗ ಕೆಫೆಯೊಂದನ್ನು ಆರಂಭಿಸಿ ಆದಾಯ ಸಂಗ್ರಹಿಸುತ್ತಿದೆ.
ಇತ್ತೀಚೆಗಷ್ಟೇ ದಿ ಆಂಟ್ಸ್’ ಸಗಟು ವ್ಯಾಪಾರವನ್ನೂ ಆರಂಭಿಸಿದೆ. ಯುರೋಪ್ ರಾಷ್ಟ್ರಗಳು, ಅಮೆರಿಕ ಸೇರಿದಂತೆ ವಿವಿಧೆಡೆಯಿಂದ ಬೇಡಿಕೆ ಬರುತ್ತಿದ್ದು, ಖಾಯಂ ರಫ್ತು ವ್ಯಾಪಾರವನ್ನು ಮುಂದುವರಿಸುವ ನಿಟ್ಟಿನಲ್ಲಿ ಆಂಟ್ಸ್, ಉತ್ಪನ್ನಗಳ ಗುಣಮಟ್ಟ ಕಾಪಾಡಿಕೊಳ್ಳಲು ಹೆಚ್ಚಿನ ಗಮನ ಹರಿಸುತ್ತಿದೆ. ದಿ ಆಂಟ್ಸ್’ ಅನ್ನು ಖಾಸಗಿ ಕಂಪನಿಯಾಗಿ ಪರಿವರ್ತಿಸಲು ಪ್ರದೀಪ್ ಮುಂದಾಗಿದ್ದಾರೆ. 2009ರಿಂದ್ಲೂ ಆಂಟ್ಸ್ ಚಾರಿಟೇಬಲ್ ಟ್ರಸ್ಟ್ನಂತೆ ಕಾರ್ಯನಿರ್ವಹಿಸ್ತಿದೆ.
ಸಂಸ್ಥೆಯ ರೂವಾರಿ ಪ್ರದೀಪ್ ಅವರ ಪ್ರಕಾರ ಯಶಸ್ಸು ಅನ್ನೋದು, ಕುಶಲಕರ್ಮಿಗಳ ಆರ್ಥಿಕ ಸ್ವಾತಂತ್ರ್ಯ ಹಾಗೂ ಕ್ರಮೇಣ ದಿ ಆಂಟ್ಸ್ ಪಾತ್ರವನ್ನು ಕಡಿಮೆ ಮಾಡುವುದರ ಮೇಲೆ ನಿಂತಿದೆ. ಅದು ಸಂಸ್ಥೆಯ ಪಾಲಿಗೆ ಮೈಲಿಗಲ್ಲಾಗಲಿದೆ. ಒಟ್ಟಿನಲ್ಲಿ ಹಿಂದುಳಿದ ಈಶಾನ್ಯ ರಾಜ್ಯಗಳ ಕರಕುಶಲಕರ್ಮಿಗಳ ಪಾಲಿಗೆ ಇದೊಂದು ವರದಾನ.