ಪಾಕಿಸ್ತಾನದ ನಾಯಕ ಸರ್ಫರಾಜ್ ಅವರ ಪತ್ನಿ ಇದೀಗ ಧೋನಿ ಹಿಂದೆ ಬಿದ್ದಿದ್ದಾರೆ. ಹೌದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಪಾಕಿಸ್ತಾನ ಕ್ರಿಕೆಟಿಗ ಸರ್ಫರಾಜ್ ಅವರ ಪತ್ನಿ ಮಾತನಾಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸರ್ಫರಾಜ್ ನೇತೃತ್ವದಲ್ಲಿ ಪಾಕಿಸ್ತಾನ ನೀರಸ ಪ್ರದರ್ಶನವನ್ನು ತೋರಿದ್ದು ಕ್ರಿಕೆಟ್ ಅಭಿಮಾನಿಗಳು ಸರ್ಫರಾಜ್ ಅವರು ನಿವೃತ್ತಿ ಘೋಷಿಸಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಈ ಸಂಬಂಧ ಸರ್ಫರಾಜ್ ಅವರ ಪತ್ನಿ ಖುಷ್ ಭಟ್ ಸರ್ಫರಾಜ್ ಅವರು ಪ್ರತಿಕ್ರಿಯೆ ನೀಡಿದ್ದು ನನ್ನ ಗಂಡನಿಗೆ ವಯಸ್ಸೇನೂ ಆಗಿಲ್ಲ.. ಧೋನಿ ಅವರ ವಯಸ್ಸೆಷ್ಟು? ಹೆಚ್ಚು ವಯಸ್ಸಾದ ಧೋನಿ ಅವರೇ ಇನ್ನೂ ಕ್ರಿಕೆಟ್ಗೆ ನಿವೃತ್ತಿಯನ್ನು ಘೋಷಿಸಿಲ್ಲ ಅವರಿಗಿಂತ ಕಡಿಮೆ ವಯಸ್ಸು ಆಗಿರುವ ನನ್ನ ಗಂಡ ಏಕೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಬೇಕು ಎಂದು ಸರ್ಫರಾಜ್ ಅವರ ಪತ್ನಿ ಖುಷ್ ಭಟ್ ಸರ್ಫರಾಜ್ ಅವರು ಟ್ರೋಲಿಗರಿಗೆ ಟಾಂಗ್ ನೀಡಿದ್ದಾರೆ.