ಸಾಲುಮರದ ತಿಮ್ಮಕ್ಕ ಯಾವ ಕನ್ನಡಿಗನಿಗೆ ತಾನೆ ಗೊತ್ತಿಲ್ಲ ಹೇಳಿ ರಸ್ತೆ ಬದಿಯಲ್ಲಿ ಸಾಲು ಸಾಲು ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಮರಗಳನ್ನು ಬೆಳೆಸಿರುವ ಮಹಾನ್ ಮಹಿಳೆ ಸಾಲಮರದ ತಿಮ್ಮಕ್ಕ. ಇನ್ನು ಇಂತಹ ಸಾಲು ಮರದ ತಿಮ್ಮಕ್ಕ ಅವರ ಬಗ್ಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಏನೂ ಗೊತ್ತಿಲ್ಲ ಎಂಬುದು ವಿಪರ್ಯಾಸ. ಹೌದು ಇತ್ತೀಚೆಗಷ್ಟೇ ತಮಿಳುನಾಡಿನಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಅತಿಥಿಯಾಗಿ ಸಾಲುಮರದ ತಿಮ್ಮಕ್ಕ ಮತ್ತು ರಶ್ಮಿಕಾ ಮಂದಣ್ಣ ಇಬ್ಬರನ್ನು ಸಹ ಕರೆಸಲಾಗಿತ್ತು. ಇದೇ ವೇಳೆ ಸಾಲುಮರದ ತಿಮ್ಮಕ್ಕ ಅವರು ಮಾತನಾಡುವಾಗ ಅವರು ಆಡಿದ ಮಾತುಗಳು ಯಾರಿಗೂ ಅರ್ಥವಾಗಲಿಲ್ಲ.
ಹೀಗಾಗಿ ಕನ್ನಡದವರೇ ಆದ ರಶ್ಮಿಕಾ ಮಂದಣ್ಣ ಅವರನ್ನು ಕರೆದು ಕನ್ನಡತಿ ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಇಂಗ್ಲಿಷಿನಲ್ಲಿ ಎಲ್ಲರಿಗೂ ಹೇಳಬೇಕೆಂದು ಕೇಳಿದರು. ಇನ್ನು ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಕೇವಲ ಎರಡು ಮಾತುಗಳನ್ನಷ್ಟೇ ರಶ್ಮಿಕಾ ಆಡಿ ತದನಂತರ ಅವರ ಬಗ್ಗೆ ಏನೂ ಗೊತ್ತಿಲ್ಲದೇ ವೇದಿಕೆಯ ಮೇಲೆ ತ್ತಡ ಬಡಿಸಿದ್ದಾರೆ. ಸಾಲು ಸಾಲು ಮರಗಳನ್ನು ನೆಟ್ಟು ಪರಿಸರವನ್ನು ಕಾಪಾಡುತ್ತಾ ಜೀವನವನ್ನೇ ಕಳೆದ ಓರ್ವ ಧೀರ ಮತ್ತು ಧೀಮಂತ ಮಹಿಳೆ ಬಗ್ಗೆ ತಿಳಿದುಕೊಳ್ಳದೇ ಇದ್ದ ಮೇಲೆ ರಶ್ಮಿಕಾ ಮಂದಣ್ಣ ಯಾವ ಚಿತ್ರಗಳಲ್ಲಿ ಅಭಿನಯಿಸಿದ್ದರೇನು? ಯಾವ ಅವಾರ್ಡ್ ಪಡೆದರೇನು? ಎಲ್ಲವೂ ವ್ಯರ್ಥವೇ ಎಂದು ಕನ್ನಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.