ಬಿಗಿಲ್ ಸದ್ಯ ಸೌತ್ ಸಿನಿ ದುನಿಯಾದಲ್ಲಿ ಸಖತ್ತಾಗಿ ಕೇಳಿ ಬರುತ್ತಿರುವ ಹೆಸರು. ಫುಟ್ಬಾಲ್ ಕ್ರೀಡೆಯನ್ನು ಆಧಾರವಾಗಿಟ್ಟುಕೊಂಡು ಮಾಡಿರುವ ಈ ಸಿನಿಮಾಗೆ ತಮಿಳಿನ ವಿಜಯ್ ನಾಯಕ ಮತ್ತು ಅಟ್ಲೀ ಅವರ ನಿರ್ದೇಶನ ಇದೆ. ವಿಜಯ್ ಅವರ ಸಿನಿಮಾಕ್ಕೆ ಕ್ರೇಜ್ ಮತ್ತು ಹೈಪ್ ಸಿಕ್ಕಾಪಟ್ಟೆ ಇದ್ದೇ ಇರುತ್ತದೆ ಅದರಲ್ಲಿಯೂ ಬಿಗಿಲ್ ಚಿತ್ರದ ಟ್ರೇಲರ್ ಬಿಡುಗಡೆಯಾದಾಗಿನಿಂದ ಈ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಇನ್ನು ನಿನ್ನೆಯಷ್ಟೇ ಬಿಡುಗಡೆಯಾಗಿ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬಿಗಿಲ್ ಚಿತ್ರದ ಕುರಿತು ಕಪ್ಪು ಚುಕ್ಕೆಯೊಂದು ತುಂಬಾ ದಿನದಿಂದ ಅಂಟಿಕೊಂಡಿದೆ. ಆ ಕಪ್ಪು ಚುಕ್ಕೆ ಏನೆಂದರೆ ಬಿಗಿಲ್ ಕದ್ದ ಕಥೆ ಎಂಬುದು.
ಹೌದು ವಿದೇಶದಲ್ಲಿ ಫುಟ್ಬಾಲ್ ಆಟಗಾರನೊಬ್ಬ ಫುಟ್ಬಾಲ್ ತ್ಯಜಿಸಿ ರೌಡಿಯಾಗಿ ತದನಂತರ ಮುಂದಿನ ದಿನಗಳಲ್ಲಿ ಮಹಿಳಾ ಫುಟ್ಬಾಲ್ ಟೀಮ್ ಗೆ ಫುಟ್ವಾಲ್ ಹೇಳಿಕೊಡುವ ಕೋಚ್ ಆಗಿ ರೌಡಿಸಂ ಅನ್ನು ಬಿಟ್ಟು ಬರುವ ನೈಜ ಘಟನೆ ನಡೆದಿದೆ. ಇನ್ನು ಈ ಕಥೆಯನ್ನು ತೆಗೆದುಕೊಂಡು ಅಸಿಸ್ಟೆಂಟ್ ನಿರ್ದೇಶಕ ಒಬ್ಬ ತಮಿಳು ನಿರ್ದೇಶಕ ಅಟ್ಲಿ ಅವರ ಬಳಿ ಚಿತ್ರ ಮಾಡಬೇಕೆಂದು ಕೇಳಿಕೊಂಡಿದ್ದಾನೆ. ಇದಕ್ಕೆ ನಿರ್ದೇಶಕ ಅಟ್ಲಿ ಈ ಕಥೆ ಹೆಚ್ಚಾಗಿಲ್ಲ ಬೇಡ ಎಂದು ಹೇಳಿ ಆತನನ್ನು ಕಳುಹಿಸಿ ಅದೇ ಕಥೆಯನ್ನು ತೆಗೆದುಕೊಂಡು ಹೋಗಿ ವಿಜಯ್ ಅವರನ್ನು ಒಪ್ಪಿಸಿ ಬಿಗಿಲ್ ಚಿತ್ರ ಮಾಡಿದ್ದಾನೆ. ಇನ್ನು ಈ ಚಿತ್ರದ ವಿರುದ್ಧ ಆ ಅಸಿಸ್ಟೆಂಟ್ ನಿರ್ದೇಶಕ ಇದು ನನ್ನ ಕಥೆ ಎಂದು ಕೇಸ್ ಹಾಕಿದ್ದು ಇಂದು ಸಹ ಆ ಕೇಸ್ ಚಾಲ್ತಿಯಲ್ಲಿದೆ.