ಶಿವಸೇನೆ-ಬಿಜೆಪಿ ಮೈತ್ರಿ ಮಹಾರಾಷ್ಟ್ರದಲ್ಲಿ ಸರಕಾರ ರಚನೆ ಮಾಡಲಿದೆ ಎಂದೂ ಠಾಕ್ರೆ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.
ಹಿಂದುತ್ವದಂಥ ವಿಚಾರಗಳ ಮೇಲೆ ಬಿಜೆಪಿಯೊಂದಿಗೆ ಕೆಲಸ ಮಾಡಲು ಉತ್ಸುಕವಿರುವುದಾಗಿ ತಿಳಿಸಿದ ಶಿವಸೇನಾ ಮುಖ್ಯಸ್ಥ ಠಾಕ್ರೆ, ಚುನಾವಣೆಗೂ ಮುನ್ನ ನಿಗದಿಯಾಗಿದ್ದಂತೆ, 50:50 ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುವ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲವೆಂದಿದ್ದಾರೆ.