ಮಂಡ್ಯ ಚುನಾವಣೆ ಸಂದರ್ಭದಲ್ಲಿ ನಿಖಿಲ್ ಎಲ್ಲಿದ್ದೀ ಯಪ್ಪಾ ಎಂದು ಕೂಗುಗಳು ಕೇಳಿ ಬರುತ್ತಿದ್ದವು. ಇನ್ನು ಮಂಡ್ಯ ಲೋಕಸಭಾ ಚುನಾವಣೆ ಮುಗಿದು ಸುಮಲತಾ ಅವರು ಜಯಭೇರಿ ಸಾಧಿಸಿ ಇದೀಗ ಸುಮಾರು ತಿಂಗಳುಗಳು ನಂತರ ಸುಮಲತಾ ಎಲ್ಲಿದ್ದೀಯಮ್ಮಾ ಎಂಬ ಕೂಗು ಕೇಳಿಬಂದಿದೆ. ಹೌದು ಮಂಡ್ಯದಲ್ಲಿ ನೆರೆ ಪರಿಸ್ಥಿತಿ ಉಂಟಾಗಿದ್ದು ರೈತರಿಗೆ ಕಷ್ಟ ಆಗುತ್ತಿದ್ದರೂ ಸಹ ಮಂಡ್ಯ ಜಿಲ್ಲೆಯ ಎಂಪಿ ಆಗಿರುವ ಸುಮಲತಾ ಅವರು ಬಂದು ಕಷ್ಟವನ್ನು ಆಲಿಸದೆ ಇರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
ನಾನು ಸ್ವತಂತ್ರ ಅಭ್ಯರ್ಥಿ ಮಂಡ್ಯ ಜನರಿಗೋಸ್ಕರ ರಾಜಕೀಯಕ್ಕೆ ಬಂದಿದ್ದೇನೆ ಅಂತೆಲ್ಲ ಬಿಲ್ಡಪ್ ಕೊಟ್ಟು ಚುನಾವಣೆಯಲ್ಲಿ ಗೆದ್ದ ನಂತರ ಇದೀಗ ಕಾಟಾಚಾರಕ್ಕೆ ಮಂಡ್ಯಕ್ಕೆ ಭೇಟಿ ನೀಡುತ್ತಿದ್ದಾರೆ ಸುಮಲತಾ ಅವರು ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಮಳೆ ಬಂದು ಅಪಾರವಾದ ಆಸ್ತಿ ಪಾಸ್ತಿ ನಷ್ಟ ಆದರೂ ಸಹ ಜನರ ಕೂಗಿಗೆ ಕಿವಿಗೊಡದ ಸುಮಲತಾ ಅವರ ವಿರುದ್ಧ ಕೆಆರ್ ಪೇಟೆ ವೀರಶೈವ ಮಹಸಭಾದ ಅಧ್ಯಕ್ಷ ಭಟ್ಟರಹಳ್ಳಿ ಧನಂಜಯ್ ಗುಡುಗಿದ್ದಾರೆ.