ಪ್ರಿಯಾ ವಾರಿಯರ್ ಕಳೆದ ವರ್ಷ ಒರು ಅಡಾರ್ ಲವ್ ಎಂಬ ಚಿತ್ರದ ಒಂದು ದೃಶ್ಯದಿಂದ ರಾತ್ರೋರಾತ್ರಿ ಸ್ಟಾರ್ ಆದ ಹುಡುಗಿ ಪ್ರಿಯಾ ವಾರಿಯರ್. ಮಲಯಾಳಂ ಚಿತ್ರದ ದೃಶ್ಯವಾಗಿ ದ್ದರೂ ಸಹ ಈ ಒಂದು ಟೀಸರ್ ಭಾರತದಾದ್ಯಂತ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹೀಗಾಗಿ ಪ್ರಿಯಾ ವಾರಿಯರ್ಗೆ ರಾತ್ರೋ ರಾತ್ರಿ ಈ ಒಂದು ಟೀಸರ್ ನೇಮ್ ಅಂಡ್ ಫೇಮ್ ಎರಡನ್ನೂ ಸಹ ತಂದುಕೊಟ್ಟಿತ್ತು.ಇನ್ನು ಇದಾದ ಬಳಿಕ ಹಲವಾರು ಜಾಹೀರಾತುಗಳಿಗೆ ಪ್ರಿಯಾ ವಾರಿಯರ್ ಅವರು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದರು.
ಇಷ್ಟೆಲ್ಲಾ ದೊಡ್ಡ ಮಟ್ಟದ ಹೆಸರು ಮಾಡಿದ ನಂತರ ಪ್ರಿಯಾ ಭಾರಿ ಅವರು ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು , ಕಡತ ಚಿತ್ರವೊಂದರಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹೌದು ನಿರ್ಮಾಪಕ ಮಂಜು ಅವರ ಪುತ್ರ ಶ್ರೇಯಸ್ ನಾಯಕನಾಗಿ ಅಭಿನಯಿಸುತ್ತಿರುವ ವಿಷ್ಣುಪ್ರಿಯ ಎಂಬ ಚಿತ್ರಕ್ಕೆ ಪ್ರಿಯಾ ವಾರಿಯರ್ ಅವರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇನ್ನು ಇಂದು ಪ್ರಿಯಾ ವಾರಿಯರ್ ಅವರ ಹುಟ್ಟುಹಬ್ಬ ಆದ ಕಾರಣ ಈ ಚಿತ್ರತಂಡ ಹೊಸ ಟೀಸರ್ ಬಿಡುಗಡೆ ಮಾಡಿದ್ದು ಇದರಲ್ಲಿಯೂ ಸಹ ಪ್ರಿಯ ವಾರಿಯರ್ ಅವರು ಕಣ್ಸನ್ನೆ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ.