ಡಿಕೆ ಶಿವಕುಮಾರ್ ಅವರು ಬೆಂಗಳೂರಿಗೆ ಬಂದಾಗಿಂದಲೂ ಹಲವಾರು ವಿಚಾರಗಳಿಗೆ ಕಾಂಗ್ರೆಸ್ ವಲಯದಲ್ಲಿ ಶೀತಲ ಸಮರಗಳು ನಡೀತಾ ಇದೆ . ಡಿಕೆ ಶಿವಕುಮಾರ್ ಅವರು ಬರುವಾಗ ಜೆಡಿಎಸ್ ನ ಬಾವುಟವನ್ನು ಹಿಡಿದಿದ್ರು ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರೊಡನೆ ಬೇಸರವನ್ನು ವ್ಯಕ್ತಪಡಿಸಿದರು ಇದೀಗ ವಿಚಾರ ಮುಗಿಯುತ್ತಿದ್ದಂತೆಯೇ ಡಿಕೆ ಶಿವಕುಮಾರ್ ಅವರು ಮೆಡಿಕಲ್ ಕಾಲೇಜು ಕನಕಪುರದಲ್ಲಿ ಆಗುವ ವಿಚಾರದ ಬಗ್ಗೆ ಯಡಿಯೂರಪ್ಪ ಅವರ ವಿರುದ್ಧ ಹಾಗು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಅದೇನೇ ಪರಿಸ್ಥಿತಿ ಬರಲಿ ಕೊನೆಗೆ ನನ್ನ ಪ್ರಾಣ ಹೋದರೂ ಸರಿ ಮೆಡಿಕಲ್ ಕಾಲೇಜಿನ ಕನಕಪುರದಲ್ಲಿ ಮಾಡಿಸುತ್ತೇನೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಈ ವಿಚಾರದ ಬಗ್ಗೆ ತೀರ್ಮಾನ ಆಗಿದೆ. ಆದರೆ ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ಅದನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರ ಮಾಡಿದ್ದಾರೆ. ಯಡಿಯೂರಪ್ಪ ಅವರು ನನ್ನ ಮನೆ ಬಾಗಲಿಗೆ ಬಂದಾಗ ಯಾವುದೇ ರಾಜಕೀಯ ಮಾಡಿಲ್ಲ. ನೂರಾರು ಕೋಟಿ ಯೋಜನೆಗಳಿಗೆ ಅನುಮೋದನೆ ಕೊಟ್ಟಿದ್ದೇನೆ. ಈಗ ಇವರು ಮೆಡಿಕಲ್ ಕಾಲೇಜು ಸ್ಥಳಾಂತರ ಮಾಡಿದ್ದಾರೆ. ಅವರ ಹೀಗೆ ಮಾಡಿದ್ದು ಸರಿಯಲ್ಲ ಎಂದರು.